ಭಾನುವಾರ, ಮೇ 9, 2021
20 °C

ಟಿವಿ ಜಾಹೀರಾತಿಗೆ ಟ್ರಾಯ್ `ಕತ್ತರಿ'!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಟಿವಿ ಕಾರ್ಯಕ್ರಮಗಳ ಮಧ್ಯೆ ಪ್ರಸಾರವಾಗುವ ಜಾಹೀರಾತುಗಳಿಂದ ರೋಸಿ ಹೋದವರು ಇನ್ನು ಮುಂದೆ ಒಂದಷ್ಟು ನಿರಾಳತೆ ಅನುಭವಿಸಬಹುದು...ಅಕ್ಟೋಬರ್ ತಿಂಗಳಿನಿಂದ ನಿಗದಿತ ಅವಧಿಯಷ್ಟೇ ಜಾಹೀರಾತು ಪ್ರಸಾರಕ್ಕೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿರ್ದೇಶನ ನೀಡಿದೆ.ಪ್ರತಿ ಗಂಟೆಯ ಅವಧಿಯಲ್ಲಿ 12 ನಿಮಿಷಗಳಷ್ಟು ಮಾತ್ರ ಜಾಹೀರಾತು ಅಥವಾ ಕಾರ್ಯಕ್ರಮಗಳ ಪ್ರೋಮೊ ಪ್ರಸಾರ ಮಾಡಬೇಕು ಎಂದು ಸೂಚಿಸಿದೆ.`ಟ್ರಾಯ್'ನ ಈ ಕಾಯ್ದೆಯು ವೀಕ್ಷಕರಿಗೆ ಖುಷಿ ನೀಡಬಹುದು. ಆದರೆ ಜಾಹೀರಾತು ಹಾಗೂ ಮಾಧ್ಯಮ ಕಂಪೆನಿಗಳು ಇದನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುತ್ತಿವೆ. ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ ಕೆಲವು ಪ್ರಸಾರ ನಿರ್ವಾಹಕರು, ಈಗ ಈ ಕಾಯ್ದೆಯನ್ನು ಹಂತಹಂತವಾಗಿ ಜಾರಿ ಮಾಡಲು ಸಮ್ಮತಿ ಸೂಚಿಸಿದ್ದಾರೆ.`ಈ ಕಾಯ್ದೆ ಎಂಟು ವರ್ಷಗಳಿಂದ ಚಾಲ್ತಿಯಲ್ಲಿದೆ. ಆದರೆ ಈವರೆಗೆ ಜಾರಿಯಾಗಿರಲಿಲ್ಲ. ಈಗ ಸಮಯ ಸನ್ನಿಹಿತವಾಗಿದೆ ಎಂದು ಭಾವಿಸಿದ ಟ್ರಾಯ್, ಕಾಯ್ದೆ ಅನುಷ್ಠಾನ ಮಾಡಿದೆ' ಎಂದು ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೆಡರೇಶನ್‌ನ ಮಹಾ ಕಾರ್ಯದರ್ಶಿ ಶೈಲೇಶ್ ಷಾ ಅವರು ಪ್ರತಿಕ್ರಿಯೆ ನೀಡಿದ್ದಾರೆಕಾಯ್ದೆ ಜಾರಿಯಿಂದ ಜಾಹೀರಾತುದಾರರು, ಏಜೆನ್ಸಿಗಳು ಹಾಗೂ ಚಾನೆಲ್‌ಗಳಿಗೆ ಆರ್ಥಿಕ ನಷ್ಟವಾಗಲಿದೆ. ಆದರೆ ಎಲ್ಲರೂ ಒಟ್ಟಾಗಿ ಚರ್ಚಿಸಿ, ಆದಾಯ ವೃದ್ಧಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಲು ಇದು ಸಕಾಲ ಎಂದು ಅವರು ಹೇಳಿದರು.`ಪ್ರತಿ ಗಂಟೆಗೆ ಕೇವಲ 12 ನಿಮಿಷಗಳಷ್ಟು ಜಾಹೀರಾತು ಪ್ರಸಾರ ಮಾಡುವುದರಿಂದ ದರ ನಿಗದಿ ಮೇಲೆ ಪರಿಣಾಮ ಬೀರಬಹುದೇ' ಎಂಬ ಪ್ರಶ್ನೆಗೆ, `ಮಾರುಕಟ್ಟೆಯನ್ನು ಆಧರಿಸಿ ಯಾವಾಗಲೂ ಜಾಹೀರಾತು ದರಗಳು ನಿಗದಿಯಾಗುತ್ತವೆ. ಮುಂದೆಯೂ ಇದೇ ರೀತಿ ಇರಲಿದೆ' ಎಂದು ಅವರು ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.