ಢಾಕಾ (ಪಿಟಿಐ): ಬಾಂಗ್ಲಾದೇಶದ ದಿನ ಪತ್ರಿಕೆಯೊಂದು ಭಾರತೀಯ ಕ್ರಿಕೆಟ್ ಆಟಗಾರರ ಅರ್ಧ ತಲೆಬೋಳಿಸಿರುವ ಜಾಹೀರಾತನ್ನು ಪ್ರಕಟಿಸುವ ಮೂಲಕ ತೀವ್ರವಾಗಿ ಟೀಕಿಸಿದ್ದು, ಇದು ವಿವಾದ ಸೃಷ್ಟಿಸಿದೆ.

ಇಲ್ಲಿನ ‘ಪ್ರೋಥಮ್ ಅಲ್’ ಪತ್ರಿಕೆಯು ಬಾಂಗ್ಲಾ ಕ್ರಿಕೆಟ್‌ನ ಯುವ ಬೌಲರ್ ಮುಸ್ತಪಿಜುರ್ ಅವರನ್ನು ಹೊಗಳುವ ಭರದಲ್ಲಿ ಭಾರತೀಯ ಆಟಗಾರರನ್ನು ಅವಮಾನಿಸುವ ಜಾಹೀರಾತನ್ನು ವಿನ್ಯಾಸಗೊಳಿಸಿ ಪ್ರಕಟಿಸಿದೆ.

ಭಾರತವು ಬಾಂಗ್ಲಾ ಸರಣಿಯನ್ನು ಸೋತ ಹಿನ್ನೆಲೆಯಲ್ಲಿ "ಪ್ರೋಥಮ್ ಅಲೊ" ಎಂಬ ಪತ್ರಿಕೆ ಈ ಜಾಹೀರಾತನ್ನು ವಿನ್ಯಾಸ ಮಾಡಿದೆ.

ಇದರಲ್ಲಿ ಯುವ ವೇಗಿ ಮುಸ್ತಪಿಜುರ್ ಕಟ್ಟರ್ ಹಿಡಿದುಕೊಂಡಿದ್ದಾರೆ, ಅವರ ಕೆಳ ಭಾಗದಲ್ಲಿ ದೋನಿ, ರೋಹಿತ್ ಶರ್ಮಾ, ಕೊಹ್ಲಿ, ರಹಾನೆ, ರೈನಾ ಅವರ ಅರ್ಧ ತಲೆಯನ್ನು ಬೋಳಿಸಲಾಗಿದ್ದು ಅವರ ಕೈಯಲ್ಲಿ 'We have used it. You can use it too’ ಎಂಬ ಬರಹವಿರುವ ಬ್ಯಾನರ್ ನೀಡಲಾಗಿದೆ.

ಈ ಜಾಹೀರಾತು ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು ಆ ಪತ್ರಿಕೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಈ ಜಾಹೀರಾತಿನ ಬಗ್ಗೆ ಇಲ್ಲಿಯವರೆಗೂ ಬಿಸಿಸಿಐ ಹಾಗೂ ಹಿರಿಯ ಕ್ರಿಕೆಟ್ ಆಟಗಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.