ಟೆಂಪೊ ಉರುಳಿ 18 ಮಂದಿಗೆ ಗಾಯ

ಮಂಗಳವಾರ, ಜೂಲೈ 23, 2019
25 °C

ಟೆಂಪೊ ಉರುಳಿ 18 ಮಂದಿಗೆ ಗಾಯ

Published:
Updated:

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನಬೆಟ್ಟದ ಚೈನ್‌ಗೇಟ್ ಬಳಿ ಇರುವ ರಸ್ತೆ ತಿರುವಿನಲ್ಲಿ ಭಾನುವಾರ ಸಂಜೆ ವೇಳೆ ಟೆಂಪೊವೊಂದು ಉರುಳಿ, 18 ಮಂದಿ ಗಾಯಗೊಂಡ ಘಟನೆ ಜರುಗಿದೆ. ಗಾಯಗೊಂಡವರು ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ಬಾಣ ಸಮುದ್ರ, ಮಠದ ಹೊನ್ನನಾಯಕನಹಳ್ಳಿ ಹಾಗೂ ಬಿಜುವಳ್ಳಿಗೆ ಸೇರಿದವರಾಗಿದ್ದಾರೆ.ಗಾಯಗೊಂಡವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಜಯಮ್ಮ, ಗೌರಮ್ಮ, ಚಿಕ್ಕಮಾಯಿಗೌಡ, ತಿಮ್ಮಮ್ಮ ಹಾಗೂ ಸುನಿಲ್‌ಕುಮಾರ್ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.ಭಾನುವಾರ ಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟ ಹಾಗೂ ನಂಜನಗೂಡಿನ ದೇಗುಲ ದರ್ಶನ ಮಾಡಿ ನಂತರ ಬಿಳಿಗಿರಿರಂಗನಬೆಟ್ಟಕ್ಕೆ ಹೋಗಿ ದೇವರ ದರ್ಶನ ಪಡೆದು ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ಚಾಲಕ ನಿಯಂತ್ರಣ ತಪ್ಪಿರುವುದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.ಸ್ಥಳಕ್ಕೆ ಸರ್ಕಲ್‌ಇನ್‌ಸ್ಪೆಕ್ಟರ್ ಕೀರ್ತಿಕುಮಾರ್, ಸಬ್ ಇನ್‌ಸ್ಪೆಕ್ಟರ್ ಚಿಕ್ಕರಾಜುಶೆಟ್ಟಿ, ಮಹಾದೇವನಾಯಕ ಭೇಟಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry