ಭಾನುವಾರ, ಜೂಲೈ 12, 2020
29 °C

ಟೆನಿಸ್: ಆದಿತ್ಯ, ಕುಣಾಲ್ ಫೈನಲ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆದಿತ್ಯ ತಿವಾರಿ ಹಾಗೂ ಕುಣಾಲ್ ಆನಂದ್ ಜೋಡಿ ಇಲ್ಲಿ ನಡೆಯುತ್ತಿರುವ ಎನೆರ್ಜಾಲ್ ಓಪನ್ ರಾಷ್ಟ್ರೀಯ ಟೆನಿಸ್ ಟೂರ್ನಿಯ ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದರು. ಟೆನಿಸ್ ಎಕ್ಸಲೆನ್ಸ್ ಕೋರ್ಟ್‌ನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆದಿತ್ಯ ಮತ್ತು ಕುಣಾಲ್ ಜೋಡಿ 3-6, 6-3, 10-8ರಲ್ಲಿ ಅಜಯ್ ಸೆಲ್ವರಾಜನ್ ಹಾಗೂ ವಿನೋದ್ ಶ್ರೀಧರ್ ಜೋಡಿಯನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.ಇನ್ನೊಂದು ಪಂದ್ಯದಲ್ಲಿ ಮಿಥುನ್ ಮುರಳಿ ಹಾಗೂ ವಿಜಯ್ ಸುಂದರ್ ಪ್ರಶಾಂತ್ 7-6, 5-7, 10-6ರಲ್ಲಿ ಚಾಂಡ್ರಿಲ್ ಸೂದ್-ಲಕ್ಷಿತ್ ಸೂದ್ ವಿರುದ್ಧ ಗೆಲುವು ಪಡೆದು ಫೈನಲ್‌ಗೆ ಪ್ರವೇಶಿಸಿದರು. ಇದೇ ವಿಭಾಗದ ಇತರ ಪಂದ್ಯಗಳಲ್ಲಿ ವಿನೋದ್ ಶ್ರೀಧರ್ 6-4, 6-3ರಲ್ಲಿ ನೀರಜ್ ವಿರುದ್ಧವೂ, ಮಿಥುನ್ ಮುರಳಿ 6-2, 6-3ರಲ್ಲಿ ಶಹಬಾಜ್ ಖಾನ್ ವಿರುದ್ಧವೂ ಜಯ ಸಾಧಿಸಿದರು.

 

ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಈಶಾ ಲಖಾನಿ 6-0, 7-5ರಲ್ಲಿ ಸೌಜನ್ಯಾ ಭಾವಿಶೆಟ್ಟಿ ವಿರುದ್ಧವೂ, ಪರಿಜಾ 6-4, 6-1ರಲ್ಲಿ ಅರ್ಚನಾ ವೆಂಕಟರಾಮನ್ ಮೇಲೂ ಗೆಲುವು ಪಡೆದರು. ಲಖಾನಿ-ಅರ್ಚನಾ ಚಾಂಪಿಯನ್: ಮಹಿಳೆ ಯರ ಡಬಲ್ಸ್ ವಿಭಾಗದಲ್ಲಿ ಈಶಾ ಲಖಾನಿ- ಅರ್ಚನಾ ವೆಂಕಟರಾಮನ್ ಜೋಡಿ 6-2, 6-2ರಲ್ಲಿ ಸೌಜನ್ಯ ಭಾವಿಶೆಟ್ಟಿ -ಎಂ. ಶಾಲಿಕಾ ಜೋಡಿಯನ್ನು ಮಣಿಸಿ ಪ್ರಶಸ್ತಿ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.