ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವಿಡಿಯೊಗಳು ಬಳಕೆದಾರರ ಗಮನಸೆಳೆಯುತ್ತವೆ. ಅದರಂತೆ ಹೊಸ ವರ್ಷದ ಸಂಭ್ರಮಾಚರಣೆಯ ಬಳಿಕ ಕೊಲ್ಕತ್ತದ ಕ್ಯಾಬ್ ಚಾಲಕನೊಬ್ಬನ ಸಾಮಾಜಿಕ ಕಳಕಳಿಯ ಕಾರ್ಯ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.

ಕ್ಯಾಬ್ ಚಾಲಕನ ಮಾನವೀಯ ಕೆಲಸ ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ, ಆ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಕಾರಿನಲ್ಲಿ ಕುಳಿತಿದ್ದ ಯುವತಿ ಕಂಠಪೂರ್ತಿ ಮದ್ಯ ಸೇವಿಸಿ ನಿಯಂತ್ರಣ ಕಳೆದುಕೊಂಡಿರುತ್ತಾಳೆ. ಪದೇ ಪದೇ ಕ್ಯಾಬ್ ಡ್ರೈವರ್ ಬಳಿ ನಾನು ಸುರಕ್ಷಿತವಾಗಿ ಮನೆಗೆ ತಲುಪುತ್ತೇನೆ ಅಲ್ಲವಾ? ಎಂದು ಪ್ರಶ್ನಿಸುತ್ತಿರುತ್ತಾಳೆ.
.ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’.ಮೋಸದಿಂದ ಕ್ಯಾಪ್ಟನ್ ಆದ ಧನುಷ್: ಅಸಲಿ ವಿಡಿಯೊ ನೋಡಿ ಮನೆಮಂದಿ ಅಚ್ಚರಿ.
ಅದಕ್ಕೆ ಚಾಲಕ, ಮಗು, ನನಗೆ ತಿಳಿದಿದೆ ನೀನು ಅತಿಯಾಗಿ ಮದ್ಯ ಸೇವನೆ ಮಾಡಿದ್ದೀಯಾ ಎಂದು. ಈಗ ಸುಮ್ಮನೆ ಕುಳಿತುಕೋ. ನಾನು ನಿನ್ನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತೇನೆ ಎಂದು ಹೇಳುತ್ತಾರೆ.

ಇಷ್ಟಕ್ಕೆ ಸುಮ್ಮನಾಗದ ಚಾಲಕ, ಕಾರಿನಲ್ಲಿ ಕುಳಿತಿದ್ದ ಯುವತಿಯ ಮೊಬೈಲ್ಗೆ ಬಂದ ಕರೆಯನ್ನು ಸ್ವೀಕರಿಸಿ, ಆಕೆಯ ತಾಯಿಗೆ ಲೈವ್ ಲೊಕೇಷನ್ ಕಳಿಸುತ್ತಾರೆ. ಮಾತ್ರವಲ್ಲ, ಯುವತಿಯನ್ನು ಮಗಳಂತೆ ಸಂತೈಸಿ ಮನೆ ತಲುಪಿಸುತ್ತಾರೆ.

ಬಳಿಕ ಯುವತಿಯ ತಾಯಿ, ಚಾಲಕನಿಗೆ ಧನ್ಯವಾದ ತಿಳಿಸಲು ಮುಂದಾಗುತ್ತಾರೆ. ಅದಕ್ಕೆ, ಕ್ಯಾಬ್ ಚಾಲಕ ಇದಕ್ಕೆ ಧನ್ಯವಾದ ಹೇಳುವ ಅಗತ್ಯವಿಲ್ಲ. ‘ಇದು ನನ್ನ ಕರ್ತವ್ಯ’ ಎಂದು ಹೇಳಿ ಹೊರಡುತ್ತಾರೆ. ಸದ್ಯ ಕ್ಯಾಬ್ ಚಾಲಕನ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.