ಬುಧವಾರ, ಮೇ 12, 2021
24 °C

ಟೆನಿಸ್: ಸೋಮದೇವ್ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಟಿಂಗ್ ಹ್ಯಾಂ (ಪಿಟಿಐ):  ಭಾರತದ ಸೋಮದೇವ್ ದೇವವರ್ಮನ್ ಇಲ್ಲಿ ಆರಂಭವಾದ ಎಟಿಪಿ ನಾಟಿಂಗ್‌ಹ್ಯಾಂ ಚಾಲೆಂಜ್ ಟೆನಿಸ್ ಟೂರ್ನಿಯ   ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರೆ, ದಿವಿಜ್ ಶರಣ್-ಪುರವ್ ರಾಜಾ ಜೋಡಿ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.ಮೊದಲ ಸುತ್ತಿನ ಪಂದ್ಯದಲ್ಲಿ 140ನೇ ರ‍್ಯಾಂಕ್ ನ ಆಟಗಾರ ಸೋಮದೇವ್ 7-6, 6-4ರಲ್ಲಿ ಸ್ಥಳೀಯ ಆಟಗಾರ ಬ್ರೆಡನ್ ಕ್ಲೆಯಿನ್ ಎದುರು ಗೆಲುವು ಸಾಧಿಸಿದರು. ಭಾರತದ ಆಟಗಾರ ಎರಡನೇ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಅಮೆರಿಕದ ಜಾಕ್ ಸಾಕ್ ಅವರನ್ನು ಎದುರಿಸಲಿದ್ದಾರೆ.ಪುರವ್ ಜೋಡಿಗೆ ಜಯ: ಮೊದಲ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ದಿವಿಜ್- ಪುರವ್ ಜೋಡಿ 6-1, 3-6, 10-7ರಲ್ಲಿ ಗೆಲುವು ಸಾಧಿಸಿತು. ಮೊದಲ ಸೆಟ್‌ನಲ್ಲಿ ಆರಂಭದಲ್ಲಿಯೇ 4-0ರಲ್ಲಿ ಮುನ್ನಡೆಯಲಿದ್ದ ಭಾರತದ ಆಟಗಾರರು ಈ ಸೆಟ್‌ನಲ್ಲಿ ಸುಲಭ ಗೆಲುವು ಪಡೆದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.