ಬುಧವಾರ, ಸೆಪ್ಟೆಂಬರ್ 18, 2019
22 °C

ಟ್ಯಾಬ್ಲೆಟ್ ಸಮರ

Published:
Updated:

ಜಾಗತಿಕ ಸಮೀಕ್ಷಾ ಸಂಸ್ಥೆ `ಜೆಪಿ ಮೋರ್ಗನ್~ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, 2011ನೇ ಸಾಲಿನಲ್ಲಿ ಟ್ಯಾಬ್ಲೆಟ್ ಮಾರುಕಟ್ಟೆಯ ಒಟ್ಟು ವರಮಾನ 25 ಶತಕೋಟಿ ಡಾಲರ್‌ಗಳಷ್ಟಾಗಲಿದ್ದು, (ರೂ1,12,500 ಕೋಟಿ ) ಮುಂದಿನ ವರ್ಷದ ಅಂತ್ಯಕ್ಕೆ ವೇಳೆಗೆ ಇದು 34 ಶತಕೋಟಿ ಡಾಲರ್ (ರೂ1,53,000 ಕೋಟಿ)ತಲುಪಲಿದೆ. ಪ್ರಸಕ್ತ ವರ್ಷ   48 ದಶಲಕ್ಷ ಟ್ಯಾಬ್ಲೆಟ್‌ಗಳು ಮಾರಾಟವಾಗಲಿದ್ದು, ಈ ಸಂಖ್ಯೆಯೂ 80 ದಶಲಕ್ಷಕ್ಕೆ ಏರಲಿದೆ. ಮುಂದಿನ ಎರಡು  ವರ್ಷಗಳೂ ಆ್ಯಪಲ್ ಆಐಪತ್ಯವೇ ಮುಂದುವರೆಯಲಿದೆ ಎಂದು ಹೇಳಿದೆ.ಹಾಗೆ ನೋಡಿದರೆ `ಟ್ಯಾಬ್ಲೆಟ್~ ಕಲ್ಪನೆ ರೂಪತಳೆದು ಈಗ ಒಂದು ದಶಕ ಕಳೆಯುತ್ತಾ ಬಂದಿದೆ. ಆದರೆ, ಆ್ಯಪಲ್ 2010ರಲ್ಲಿ `ಐಪಾಡ್~ ಮಾರುಕಟ್ಟೆಗೆ ಬಿಡುಗಡೆ ಮಾಡುವವರೆಗೆ ಟ್ಯಾಬ್ಲೆಟ್  ಮಾರುಕಟ್ಟೆಯ ಸಾಧ್ಯತೆಗಳನ್ನು ಉಳಿದ ಕಂಪೆನಿಗಳು ಕಂಡುಕೊಂಡಿರಲಿಲ್ಲ.  ಮೊಬೈಲ್‌ಗಿಂತ ದೊಡ್ಡದಾದ, ಲ್ಯಾಪ್‌ಟಾಪ್‌ಗಿಂತ ಚಿಕ್ಕದಾದ, ಅಂಗೈಯಷ್ಟು ಗಾತ್ರದ ಈ ಪುಟ್ಟ ಸಾಧನದಲ್ಲಿ ಜಗತ್ತಿನ ಅದ್ಭುತಗಳನ್ನೆಲ್ಲಾ ಹಿಡಿದಿಡಬಹುದು ಎನ್ನುವುದನ್ನು ಆ್ಯಪಲ್ ತೋರಿಸಿಕೊಟ್ಟಿತ್ತು. ಅಷ್ಟೇ ಅಲ್ಲ, ತನ್ನ ಸುತ್ತ-ಮುತ್ತ ಇತರ ಪ್ರತಿಸ್ಪರ್ಧಿಗಳು ಸುಳಿಯದಂತೆಯೂ ನೋಡಿಕೊಂಡಿತ್ತು.2011ನೇ ಸಾಲಿನಲ್ಲಿ ಆ್ಯಪಲ್ ಐಪಾಡ್-2, `ಬ್ಲ್ಯಾಕ್ ಬೆರಿ ಪ್ಲೇ ಬುಕ್,ಮೊಟರೊಲಾ ಝೂಮ್, ಸ್ಯಾಮ್ಸಂಗ್ ಗ್ಯಾಲೆಕ್ಸಿ ಟ್ಯಾಬ್, ಎಚ್‌ಪಿ ಟಚ್ ಪ್ಯಾಡ್ ಸೇರಿದಂತೆ ಒಟ್ಟು 80 ಹೊಸ ಟ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಬಂದಿವೆ. ವಿಶೇಷವೆಂದರೆ ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಟ್ಯಾಬ್ಲೆಟ್‌ಗಳಲ್ಲಿ ಇರುವುದು ಗೂಗಲ್ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ.`ಮೊದಲ ತಲೆಮಾರಿನ ಆಂಡ್ರಾಯ್ಡ ಟ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಪ್ರವೇಶಿಸುವ ವೇಳೆಗೆ ಎರಡನೆಯ ತಲೆಮಾರಿನ ಐಪಾಡ್ ಮಾರುಕಟ್ಟೆ ಪ್ರವೇಶಿಸಿ ಆಗಿತ್ತು~ ಎಂದು ತಜ್ಞರು ಇದನ್ನು ವಿಶ್ಲೇಷಿಸುತ್ತಾರೆ. 2011ರಲ್ಲಿ ಆಂಡ್ರಾಯ್ಡ ಪರಿಷ್ಕೃತ ಆವೃತ್ತಿ 3.0 ಕೂಡ ಬಿಡುಗಡೆಯಾಗಿದೆ. (Android  3.0 ) ಆಂಡ್ರಾಯ್ಡ ಮೂಲಕ ಆ್ಯಪಲ್ ಆಧಿಪತ್ಯವನ್ನು ಮುರಿಯಲು ಪ್ರತಿಸ್ಪರ್ಧಿ ಕಂಪೆನಿಗಳು ಶತಪ್ರಯತ್ನ ನಡೆಸುತ್ತಿವೆ.ಆದರೆ, `ಐಪಾಡ್ ಒ.ಎಸ್~ (iOS) ಎದುರು ಆಂಡ್ರಾಯ್ಡ ಜನಪ್ರಿಯತೆ ಕಡಿಮೆ. ಆ್ಯಪಲ್ ಸೃಷ್ಟಿಸಿರುವ ಜನಪ್ರಿಯತೆ ಅಲೆಯನ್ನು ಮುರಿಯುವುದು ಕಷ್ಟ. ಆದರೆ, ಮುಂಬರುವ ವರ್ಷಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಬಿಡಿಭಾಗಗಳ ದರ ಕಡಿಮೆಯಾಗುವುದರಿಂದ ಟ್ಯಾಬ್ಲೆಟ್‌ಗ ದರ ಗಣನೀಯವಾಗಿ ಕುಸಿಯಬಹುದು.ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಆಪರೇಟಿಂಗ್ ಸಿಸ್ಟಂ (OS) ಮತ್ತು ಅಪ್ಲಿಕೇಷನ್ಸ್ ನಿರ್ಣಾಯಕ ಪಾತ್ರ ವಹಿಸುವುದರಿಂದ ಈ ಸಾಧ್ಯತೆಯನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಹೊಸ ಕಂಪೆನಿಗಳು ಹೊಸ ಅಪ್ಲಿಕೇಷನ್ಸ್ ಜತೆಗೆ  ಮಾರುಕಟ್ಟೆ ಪ್ರವೇಶಿಸಬಹುದು ಎಂದು ಮೋರ್ಗನ್ ಹೇಳಿದೆ.ಈ ನಡುವೆ, ಹೆಚ್ಚುತ್ತಿರುವ ಲ್ಯಾಪ್‌ಟಾಪ್ ಮಾರಾಟ ಟ್ಯಾಬ್ಲೆಟ್ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ  `ಜೆಪಿ ಮೋರ್ಗನ್~ನ ವಿಶ್ಲೇಷಕ ಮಾರ್ಕ್ ಮಾಸ್ಕೊವಿಚ್. ಮಾರ್ಕ್ ಪ್ರಕಾರ 2012ರಲ್ಲಿ ಮಾರಾಟವಾಗಲಿರುವ ಹೆಚ್ಚಿನ ಟ್ಯಾಬ್ಲೆಟ್‌ಗಳು ಸಜಾತಿಯ `ನೆಟ್‌ಬುಕ್~ ಮತ್ತು `ನೋಟ್‌ಬುಕ್~ ಗಳಾಗಿರುತ್ತವೆ.  ಆದರೆ, ಕಳೆದ ಫೆಬ್ರುವರಿಯಲ್ಲಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಎಚ್‌ಪಿ (Hewlett-Pac­kard )ಕಂಪೆನಿಯ ಟಚ್‌ಪ್ಯಾಡ್ (Touc­hPad) ಟ್ಯಾಬ್ಲೆಟ್, ಮಾರುಕಟ್ಟೆ ಸ್ಪರ್ಧೆ ಎದುರಿಸಲಾಗದೆ ಈಗಾಗಲೇ ತಯಾರಿಕೆ ನಿಲ್ಲುಸುವ ನಿರ್ಧಾರವನ್ನು ಪ್ರಕಟಿಸಿದೆ.`ಟಚ್ ಪ್ಯಾಡ್~ ಬಿಡುಗಡೆಗೆ ಮುನ್ನ ಐಪಾಡ್‌ಆಧಿಪತ್ಯ ಕೊನೆಗೊಳ್ಳಲಿದೆ ಎಂದು ಘೋಷಿಸಿತ್ತು. ಆಡೋಬ್ ಪ್ಲಾಷ್ ಸೇರಿದಂತೆ ಸಂಪೂರ್ಣ ಅಂತರ್ಜಾಲ ಸೌಕರ್ಯಗಳನ್ನು ಎಚ್‌ಪಿ (full Web) ಒದಗಿಸಿತ್ತು. ಅಲ್ಲದೆ, ಸಾಂಪ್ರದಾಯಿಕ ಪಿಸಿ ಮತ್ತು ಲ್ಯಾಪ್‌ಟಾಪ್‌ನಲ್ಲಿರುವಂತೆಯೇ  `ಯುಎಸ್‌ಬಿ~ ಸೌಕರ್ಯಗಳನ್ನೂ ನೀಡಿತ್ತು. ಆದರೆ, ಇದು ಯಾವುದೂ `ಟಚ್‌ಪ್ಯಾಡ್~ ನೆರವಿಗೆ ಬರಲಿಲ್ಲ.ಆ್ಯಪಲ್ ಪ್ರಸಕ್ತ ವರ್ಷ 25 ದಶಲಕ್ಷ ಐಪಾಡ್‌ಗಳನ್ನು ಮಾರಾಟ ಮಾಡಿದ್ದು, ಶೇ 60ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಉಳಿದ ಎಲ್ಲಾ ಕಂಪೆನಿಗಳ ಒಟ್ಟು ಮಾರಾಟ ಲೆಕ್ಕ ಹಾಕಿದರೂ  ಈ ಸಂಖ್ಯೆ ತಲುಪುವುದಿಲ್ಲ. ಆ್ಯಪಲ್‌ನೆಡೆಗೆ ಗ್ರಾಹಕನಿಗಿರುವ ನಿಷ್ಠೆಯನ್ನು ಕದಲಿಸಲು ಉಳಿದ ಕಂಪೆನಿಗಳಿಗೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.ಕಳೆದ ಜುಲೈ ತಿಂಗಳಲ್ಲಿ `ಅಮೇಜಾನ್‌ಡಾಟ್ ಕಾಂ (Amazon.­com) ಹೊಸ ಟ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಎರಡೇ ಎರಡು ಬೆರಳುಗಳಲ್ಲಿ ಕಾರ್ಯನಿರ್ವಹಣೆ ಮಾಡಬಹುದುದಾದ ಅಗ್ಗದ ದರ ಈ ಟ್ಯಾಬ್ಲೆಟ್  (Amazon tab )  ಕೂಡ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.

ಅಮೇಜಾನ್ (Kindle e-reader ) ಇ-ಪುಸ್ತಕ ಮಳಿಗೆ ಮಾರುಕಟ್ಟೆ ವಿಸ್ತರಣೆ ಇದರ ಹಿಂದಿನ ಉದ್ದೇಶ.ಒಟ್ಟಿನಲ್ಲಿ ಒಂದರ ಮೇಲೊಂದು ಟ್ಯಾಬ್ಲೆಟ್ ಮಾರುಕಟ್ಟೆಗೆ ಬರುತ್ತಿವೆ. ಆದರೆ, ಆ್ಯಪಲ್‌ನ ಆಧಿಪತ್ಯ ಮುರಿಯಲು ಈ ಕಂಪೆನಿಗಳಿಂದ ಸಾಧ್ಯವಾಗುತ್ತಿಲ್ಲ.   

Post Comments (+)