ಶುಕ್ರವಾರ, ಮೇ 7, 2021
26 °C

ಡಾ.ಅಂಬೇಡ್ಕರ್ ಶೋಷಿತರ ಆಶಾಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಕನೂರು: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ದಲಿತ ಹಾಗೂ ಶೋಷಿತ ವರ್ಗದ ಆಶಾಕಿರಣವಾಗಿದ್ದರು ಎಂದು ದಲಿತ ಮುಖಂಡ ಮಹೇಶ ದೊಡ್ಮನಿ ಹೇಳಿದರು.ಸಮೀಪದ ಇಟಗಿ ಗ್ರಾಮ ಪಂಚಾಯತಿ ಕಾರ‌್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಅಂಬೇಡ್ಕರ್ ಅವರ 121ನೇ ಜಯಂತಿ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.ದಲಿತ ಜಾತಿಯಲ್ಲಿ ಜನಿಸಿದ ಅವರು, ಸಮಾಜದಲ್ಲಿ ತಾಂಡವಾಡುತ್ತಿರುವ ಅಸ್ಪೃಷ್ಯತೆ, ಅಂಧಕಾರ, ಮೌಢ್ಯತೆಯನ್ನು ತೊಡೆದು ಹಾಕಬೇಕೆಂದು ದೃಢ ಸಂಕಲ್ಪ ಮಾಡಿದ್ದರು. ಅಸ್ಪೃಷ್ಯ ವರ್ಗದ ಜಾತಿ ಜನಾಂಗಗಳು ಮುಂದೆ ಬರಬೇಕಾದಲ್ಲಿ ಮೂಲಭೂತವಾಗಿ ಶಿಕ್ಷಣ ಪಡೆಯಬೇಕೆನ್ನುವ ಇಚ್ಛೆ ಅವರದಾಗಿತ್ತು.ಅದರಂತೆಯೇ ರಾಷ್ಟ್ರದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಇಡೀ ದೇಶ ಒಪ್ಪುವಂತಹ ಸಂವಿಧಾನವನ್ನು ರಚಿಸುವ ಮೂಲಕ ಸಾಮಾಜಿಕ ನ್ಯಾಯ ಕೊಡಿಸಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಅಧಿಕಾರ ಪಡೆಯಬೇಕೆನ್ನುವ ಉದ್ದೇಶದಿಂದ ದೇಶದಲ್ಲಿ ಮತ್ತೆ ಜಾತಿ ಎಂಬ ವಿಷಬೀಜ ಬಿತ್ತುತ್ತುರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಲಕ್ಕುಂಡಿ ಬಿ.ಎಚ್.ಪಾಟೀಲ ಪದವಿ ಪೂರ್ವ ಕಾಲೇಜಿನ ನಾಗರಾಜ ಉಮಚಗಿ ವಿಶೇಷ ಉಪನ್ಯಾಸ ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಗವಿಸಿದ್ದಪ್ಪ ಗುಳಗಣ್ಣವರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯತಿ ಸದಸ್ಯ ರಾಜಶೇಖರ್ ಹೊಂಬಳ, ಗ್ರಾಮ ಪಂಚಾಯತಿ ಸದಸ್ಯರಾದ ಲಚ್ಚಪ್ಪ ಲಮಾಣಿ, ಬಸವರಾಜ ಹುಜರತ್ತಿ, ಶರಣಯ್ಯ ಇಟಗಿ, ಮಹೇಶ ಹಿರೇಲಿಂಗಣ್ಣವರ, ಲಲಿತಾ ಸಜ್ಜನ, ನಿರ್ಮಲಾ ತಳವಾರ, ಗಿರಿಜಮ್ಮ ಹಿರೇಮಠ ವೇದಿಕೆಯಲ್ಲಿದ್ದರು.ಇದೇ ಸಂದರ್ಭದಲ್ಲಿ ಗ್ರಂಥಪಾಲಕರಾಗಿ ನಿವೃತ್ತರಾದ ಎನ್.ಸಿ.ಫಣಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ಗಿರಿಧರ ಜೋಷಿ, ರಾಮಣ್ಣ ಹಿರೇಮನಿ, ಸೋಮಣ್ಣ ಚಲವಾದಿ ಉಪಸ್ಥಿತರಿದ್ದರು. ದೇವಪ್ಪ ನಿಂಗಾಪುರ, ಮಹೇಶ ಹಿರೇಮನಿ, ಶರಣಪ್ಪ ದೊಡ್ಮನಿ ಕ್ರಾಂತಿ ಗೀತೆ ಹಾಡಿದರು. ರವಿಕುಮಾರ ಚಲವಾದಿ ನಿರೂಪಿಸಿದರು. ಐದೂ ಕೇಂದ್ರಗಳ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.