ಡಾ.ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸುವುದಾಗಿ ಮುಖ್ಯಮಂತ್ರಿಯವರು (ಜೂ. 16) ಹೇಳಿರುವುದು ಸ್ವಾಗತಾರ್ಹ. ಖಾಸಗಿ ಕಂಪನಿಗಳು ರಾಜ್ಯದ ಪ್ರಾಕೃತಿಕ ಸಂಪನ್ಮೂಲ ಹಾಗೂ ತೆರಿಗೆ ವಿನಾಯ್ತಿ ಸೌಲಭ್ಯ ಬಳಸಿಕೊಂಡು ಕೇವಲ ಪ್ರತಿಭೆಯೊಂದೇ ಮಾನದಂಡ ಎಂದು ಸ್ಥಳೀಯ ಕನ್ನಡಿಗರಿಗೆ ಮೀಸಲಾತಿ ನೀಡದೆ ಕಡೆಗಣಿಸುತ್ತಿರುವುದು ಸಮುದ್ರ ಮಂಥನ ಮಾಡಿ ಅಮೃತವನ್ನು (ಖಾಸಗಿ) ದೇವತೆಗಳು ಪಡೆದು ವಿಷವನ್ನು ಶಿವ (ಕನ್ನಡಿಗರು) ಕುಡಿದಂತಿದೆ.

ಕೇಂದ್ರೋದ್ಯಮಗಳು ಕೂಡ ಈಗ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ, ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ತೆಗೆದುಕೊಳ್ಳುತ್ತಿವೆ, ಹಾಗೂ ಬಿಇ ಎಂಜಿನಿಯರಿಂಗ್ ಪದವೀಧರರನ್ನು ಗೇಟ್ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳುತ್ತಿವೆ, ಇದರಿಂದ ಉತ್ತರ ಭಾರತದವರೇ ಹೆಚ್ಚಾಗಿ ನೇಮಕವಾಗುತ್ತಿದ್ದಾರೆ, ಇದರಿಂದ ಸ್ಥಳೀಯ ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಕೇಂದ್ರೋದ್ಯಮಗಳು ಕ್ಯಾಂಪಸ್ ನೇಮಕಾತಿ ಮಾಡಿ ಕನ್ನಡಿಗರಿಗೆ ಮೀಸಲು ನೀಡುವುದೂ ಅವಶ್ಯ.
-ಎಚ್.ಕೆ. ಚಂದ್ರಶೇಖರ, ಬೆಂಗಳೂರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.