ಶನಿವಾರ, ಜನವರಿ 18, 2020
19 °C

ಡಿ.5ರಿಂದ ಕರುನಾಡ ಸಂಭ್ರಮ 2013

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಗೆಲುವು ಕನ್ನಡ ಗೆಳೆ ಯರ ಸಮಿತಿ ವತಿಯಿಂದ ಇದೇ 5ರಿಂದ ಶ್ರೀನಿವಾಸ ನಗರದ ಕೆಂಪೇ ಗೌಡ ಆಟದ ಮೈದಾನದಲ್ಲಿ ‘ಕರುನಾಡ ಸಂಭ್ರಮ–೨೦೧೩‘ ಕಾರ್­ಕ್ರಮವನ್ನು ಏರ್ಪಡಿಸಲಾಗಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಡಿ.ಕೃಷ್ಣೇಗೌಡ, ಮೂರು ದಿನಗಳು ನಡೆಯುವ ಈ ಕಾರ್ಯಕ್ರಮವು ನಿತ್ಯ ಮಧ್ಯಾಹ್ನ 3ಕ್ಕೆ ಪ್ರಾರಂಭವಾಗಲಿದ್ದು, ರಾತ್ರಿವರೆಗೆ ನಡೆಯಲಿದೆ.

ಮೊದಲ ದಿನ ‘ಶ್ರೀ ರಾಘವೇಂದ್ರ ವೈಭೋವತ್ಸವ’, ಎರಡನೇ ದಿನ ‘ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ’ ಹಾಗೂ ಕೊನೆಯ ದಿನ ‘ಶಂಕರ್‌ನಾಗ್ ಪುನರ್ ಸ್ಮರಣೆ’ ಕಾರ್ಯಕ್ರಮಗಳು ನಡೆಯ ಲಿವೆ ಎಂದು ವಿವರಿಸಿದರು. ಕೊನೆಯ ದಿನ ಸಂಜೆ ಚಿತ್ರನಟ ಶಿವರಾಜ್ ಕುಮಾರ್ ಅವರಿಗೆ ಕನ್ನಡ ಕಲಾಭೂಷಣ ಬಿರುದು ನೀಡಿ ಸನ್ಮಾನ ಮಾಡಲಾಗುವುದು.

ನಂತರ ಸಂಗೀತ ರಸ ಸಂಜೆ ಮತ್ತು ನೃತ್ಯ ಪ್ರದರ್ಶನ ನಡೆಯಲಿವೆ ಎಂದರು. ಸಮಿತಿಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಜಿ. ವೆಂಕಟಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ವಿ. ಮಂಜುನಾಥ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)