ಕಲಾ ವಿಭಾಗದ ಒಂದು ತರಗತಿಗೆ ಕ್ಲಾಸ್ ಟೀಚರ್ ಆಗಿದ್ದೆ. ಆ ತರಗತಿಯಲ್ಲಿ ಬಹಳ ಹುಡುಗರು ಕ್ಲಾಸುಗಳಿಗೆ ಚಕ್ಕರ್ ಹೊಡೆಯುತ್ತಿದ್ದರು. ಅವರನ್ನೆಲ್ಲಾ ಏನಾದರೂ ಮಾಡಿ ಕ್ಲಾಸಿಗೆ ಬರುವಂತೆ ಮಾಡಬೇಕು ಎಂಬ ಹಟ ನನ್ನಲ್ಲಿ ಹುಟ್ಟಿಕೊಂಡಿತು. ಸರಿ ಅವರ ದಾಖಲಾತಿಗಳೆಲ್ಲಾ ಜಾಲಾಡಿ ಅವರ ಮನೆಯ ವಿಳಾಸಗಳನ್ನು ಪತ್ತೆ ಮಾಡಿಕೊಂಡೆ. ಒಂದಿಷ್ಟು ಪೋಸ್ಟ್ ಕಾರ್ಡ್ ತಂದು ಅವರೆಲ್ಲರ ಮನೆಗೂ ಪತ್ರ ಬರೆದೆ. ಅವರ ತಂದೆ ತಾಯಿ ಇಲ್ಲವೇ ಪೋಷಕರು ಬಂದರೆ ಅವರೊಂದಿಗೆ ಮಾತನಾಡಿ ಈ ಚಕ್ಕರ್ ಗಿರಾಕಿಗಳನ್ನು ಹೇಗಾದರೂ ಸರಿ ಮಾಡಬಹುದು ಎಂಬ ಆಸೆ ನನ್ನದಾಗಿತ್ತು.

ನನ್ನ ಪತ್ರಗಾರಿಕೆಯನ್ನು ಹೇಗೋ ಕೆಲ ವಿದ್ಯಾರ್ಥಿಗಳು ಪತ್ತೆ ಮಾಡಿಕೊಂಡು ಬಿಟ್ಟರು. ಅವರಿಗೆಲ್ಲಾ ಕಾಲಕಾಲಕ್ಕೆ ವಿಷಯ ತಲುಪಿಸುವ ಸಿಐಡಿಗಳು ಅದೇ ತರಗತಿಯಲ್ಲೇ ಇದ್ದಾರೆಂಬುದು ನನಗೂ ಗೊತ್ತಿರಲಿಲ್ಲ. ಮೇಲಾಗಿ ಕ್ಲಾಸಿನಲ್ಲಿ ಚಕ್ಕರ್ ಗಿರಾಕಿಗಳನ್ನು ಸುಧಾರಿಸಲು ಏನೇನು ಮಾಡುತ್ತಿರುವೆ ಅನ್ನೋದನ್ನೆಲ್ಲಾ ನಾನೇ ಕ್ಲಾಸಲ್ಲಿ ಟಾಂಟಾಂ ಹೊಡೆದಿದ್ದೆ. ಅದು ಅವರ ಕಿವಿಗೆ ತಲುಪಿತ್ತು.

ಹೀಗಾಗಿ, ಚಕ್ಕರ್ ಹುಡುಗರೆಲ್ಲ ಕಾರ್ಡಿನ ದಾರಿ ಕಾದು ಪೋಷಕರಿಗೆ ಅದು ಸಿಗುವ ಮೊದಲೇ ಅದರ ಕತ್ತು ಹಿಸುಕಲು ತಮ್ಮ ತಮ್ಮ ಮನೆಗಳಿಗೆ ಹೋಗಿ ಸೇರಿಕೊಂಡಿದ್ದರು. ಕಾರ್ಡ್ ಅವರ ಕೈಗೆ ಸಿಕ್ಕ ಮೇಲೆ ಅದರ ಗತಿ ಏನಾಗಬೇಕಿತ್ತೋ ಅದೇ ಆಗಿತ್ತು! ಹೀಗಾಗಿ ನನ್ನ ಮೊದಲ ಸಂದೇಶ ತಲುಪಲೇ ಇಲ್ಲ.

ಸಾಧಾರಣವಾಗಿ ಸರ್ಕಾರಿ ಶಾಲೆ, ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಹೋಗುವ ಪೋಷಕರು ನಡುವೆ ಬಂದು ಅವರವರ ಮಕ್ಕಳ ಓದಿನ ಬಗ್ಗೆ ವಿಚಾರಿಸಿಕೊಂಡು ಹೋಗುವುದು ಬಹಳ ಕಡಿಮೆ. ಕೃಷಿ ಕೂಲಿ ಕಾರ್ಮಿಕರಾದ ಅವರನ್ನು ಕಾಲೇಜಿಗೆ ಕರೆಸಿದಾಗ ಒಂದು ದಿನದ ತಮ್ಮ ಕೂಲಿ ತಪ್ಪಿ ಹೋಯಿತೆಂದು ಸಂಕಟ ಪಡುತ್ತಾರೆ. ತಮ್ಮದೇ ನೂರಾರು ಕಷ್ಟಗಳಲ್ಲಿ ನಲುಗುತ್ತಿರುವ ಅವರು ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ನಮಗೊಪ್ಪಿಸಿ ಕೈತೊಳೆದುಕೊಂಡು ಬಿಟ್ಟಿರುತ್ತಾರೆ. ಮೇಲಾಗಿ ಬಹಳಷ್ಟು ತಂದೆ ತಾಯಿಗಳಿಗೆ ತಮ್ಮ ಮಕ್ಕಳ ಬಗ್ಗೆ ಅತೀವ ನಂಬಿಕೆ. ಹೀಗಾಗಿ ಅವರು ಹಾಳಾಗುವುದು, ಓದಿನಲ್ಲಿ ಹಿಂದೆ ಬೀಳುವುದು, ಚಕ್ಕರ್ ಹೊಡೆಯುವುದು ಇತ್ಯಾದಿಗಳೆಲ್ಲಾ ಅವರ ಗಮನಕ್ಕೆ ಬರುವುದೇ ತೀರಾ ಕಡಿಮೆ.

ನಾನು ಹಟ ಬಿಡಬಾರದೆಂದು ಅವರೆಲ್ಲರ ದಾಖಲಾತಿಗಳನ್ನು ತಡಕಾಡಿ ಅರ್ಜಿಯಲ್ಲಿ ತುಂಬಿದ್ದ ಫೋನ್ ನಂಬರ್ಗಳನ್ನು ಸಂಗ್ರಹಿಸಿಕೊಂಡೆ. ಒಬ್ಬೊಬ್ಬರ ಮನೆಗೂ ಫೋನ್ ಮಾಡುತ್ತಾ ಹೋದೆ. ನಿಮ್ಮ ಮಗ ಕಾಲೇಜಿಗೆ ಸರಿಯಾಗಿ ಬರುತ್ತಿಲ್ಲ. ಅವನನ್ನು ಕರೆದುಕೊಂಡು ಒಂದು ಸಲ ಕಾಲೇಜಿಗೆ ಬನ್ನಿ ಎಂದು ಒಬ್ಬ ವಿದ್ಯಾರ್ಥಿಯ ತಾಯಿಗೆ ಹೇಳಿದೆ. ‘ಅವನು ಇಷ್ಟು ದಿವಸದಿಂದ ಕಾಲೇಜಿಗೆ ಬರ್ತಾ ಇಲ್ಲ ಅನ್ನೋದನ್ನ ಈಗ ಹೇಳ್ತಿದ್ದಿಯಲ್ಲ! ನೀನು ಇಷ್ಟು ದಿನ ಏನ್ ಮಾಡ್ತಿದ್ದೆ ಅದಕ್ಕೆ ಮೊದಲು ಉತ್ತರ ಕೊಡು’ ಎಂದು ನನಗೇ ರೋಪ್ ಹಾಕಿದರು. ‘ನಾಳೆ ಬಂದು ಮೊದಲು ನಿನ್ನ ವಿಚಾರಿಸಿಕೊಳ್ತಿನಿ’ ಎಂದು ಹೇಳಿ ಫೋನು ಕುಕ್ಕಿದರು. ನಾನು ಸುಸ್ತಾಗಿ ಹೋದೆ.

ಮತ್ತೊಬ್ಬ ಪೋಷಕರು ‘ನೀವು ಯಾರು? ಎಷ್ಟು ವರ್ಷದಿಂದ ಪಾಠ ಮಾಡ್ತಾ ಇದ್ದೀರಾ? ನಮ್ಮ ಹುಡುಗ ಚಕ್ಕರ್ ಹಾಕೋನಲ್ಲ. ಹಾಗೇನಾದರೂ ಆಗಿದ್ದರೆ ಇದರಲ್ಲಿ ನಿಮ್ಮದೇ ಏನೋ ಫಾಲ್ಟು ಇರಬೇಕು’ ಎಂದರು. ಮತ್ತೊಂದಿಷ್ಟು ತಂದೆ ತಾಯಿಗಳು ಚಕ್ಕರ್ ವಿಷಯ ಕೇಳಿ ಹೌಹಾರಿ ‘ನಾಳೆ ಆ ನನ್ಮಗನ್ನ ಒದ್ದು ಎಳ್ಕೊಂಡು ಬರ್ತೀನಿ ಸ್ವಾಮಿ. ನೀವು ಕೋಲು ರೆಡಿ ಮಾಡ್ಕೊಂಡಿರಿ. ಅವನ ಚರ್ಮ ಸುಲಿಯೋಣ’ ಎಂದು ನಾಳಿನ ಹೊಡೆದಾಟಕ್ಕೆ ನನಗೆ ಆಹ್ವಾನ ಕೊಟ್ಟರು. ಇನ್ನೂ ಕೆಲವರು ‘ನನಗೆ ಇದೆಲ್ಲಾ ಗೊತ್ತೇ ಆಗಿಲ್ವಲ್ಲ ಸಾರ್. ನನಗೆ ಗದ್ದೆ ನಾಟಿ ಕೆಲ್ಸ ಬೇರೆ ಇತ್ತು. ದಿನಾ ಕಾಲೇಜಿಗೆ ಅಂತಾನೆ ಕರೆಕ್ಟಾಗಿ ರೆಡಿಯಾಗಿ ಹೋಗ್ತಾನಲ್ಲ. ಎಲ್ಲಿಗೆ ಹೋಗ್ತಾನೆ ಹಂಗಾದ್ರೆ? ನಾನು ಬಿಡುವು ಮಾಡ್ಕೊಂಡು ಬರ್ತೀನಿ ಸಾರ್. ಅಲ್ಲೀ ತನಕ ನಿಮ್ಮದೇ ಜವಾಬ್ದಾರಿ. ನೋಡ್ಕೊಂಡು ಇರಿ’ ಎಂದರು. ಅವನು ಕಾಲೇಜಿನ ಕಡೆಗೆ ಮುಖನೇ ಹಾಕದಿದ್ದರೆ ನಾನು ಏನನ್ನು ನೋಡಿಕೊಂಡಿರೋದು!? ಎಲ್ಲೀಂತ ಅವನನ್ನು ಹುಡುಕೋದು ಅನ್ನೋದೆ ಬಹಳ ದೊಡ್ಡ ಯಕ್ಷ ಪ್ರಶ್ನೆಯಾಯಿತು.

ಕೆಲವು ಸಲ ಪೋಷಕರ ರೂಪದಲ್ಲಿ ನನ್ನ ಚಕ್ಕರ್ ವಿದ್ಯಾರ್ಥಿಗಳೇ ಫೋನು ಎತ್ತಿ ತಂದೆಯಂತೆ, ಅಣ್ಣನಂತೆ ನನ್ನ ಹತ್ತಿರ ಮಾತಾಡಿ ನನ್ನ ಫೂಲ್ ಮಾಡಿದ್ದೂ ಇದೆ. ಒಮ್ಮೆ ಮಹೇಶನೆಂಬ ಹುಡುಗ ನನ್ನ ಫೋನ್ ಎತ್ತಿದ. ನಾನು ಹೇಳುವುದೆನ್ನೆಲ್ಲಾ ಹೇಳಿದೆ. ಆಗವನು ‘ನಮ್ಮ ಹುಡುಗ ಒಳ್ಳೆಯವನು. ಬರ್ತಾನೆ ಬಿಡಿ ಮೇಷ್ಟ್ರೆ. ಅದಕ್ಕೆಲ್ಲಾ ಯಾಕೆ ಅಷ್ಟು ಟೆನ್ಷನ್ ಮಾಡ್ಕೊತೀರಾ!’ ಎಂದು ಆರಾಮಾಗಿ ಹೇಳಿದ. ನಾನು ‘ತಾವು ಯಾರು ಗೊತ್ತಾಗಲಿಲ್ಲ’ ಎಂದೆ. ‘ನಾನು ಮಹೇಶನ ಅಣ್ಣ’ಎಂದ. ನಾನು ಇದ್ದರೂ ಇರಬಹುದೆಂದು ಸುಮ್ಮನಾದೆ. ಮಾರನೆಯ ದಿನ ಈ ವಿಷಯ ನನ್ನ ಕ್ಲಾಸಿನ ಹುಡುಗರಿಗೆಲ್ಲಾ ಗೊತ್ತಾಗಿ ಹೋಗಿದೆ. ಅವರೆಲ್ಲಾ ನನ್ನ ನೋಡಿ ಮುಸಿಮುಸಿ ನಕ್ಕರು. ನನಗೆ ಅನುಮಾನ ಬಂದು ವಿಚಾರಿಸಿದಾಗ ಅವನು ಫೋನಿನಲ್ಲಿ ನನ್ನನ್ನು ಮೂರ್ಖನಾಗಿಸಿರುವ ವಿಷಯ ಗೊತ್ತಾಯಿತು.

ನಾನು ಅವನ ಊರಿನ ಹುಡುಗರ ಕರೆದು ನಾಳೆಯೇ ಮಹೇಶನ ತಂದೆ ಇಲ್ಲವೇ ತಾಯಿಯವರನ್ನು ಅರ್ಜೆಂಟಾಗಿ ಕಾಲೇಜಿಗೆ ಕರ್ಕೊಂಡು ಬನ್ನಿ. ಆ ಅಯೋಗ್ಯನಿಗೂ ಬರೋಕೆ ಹೇಳಿ ಎಂದು ಖಡಕ್ಕಾಗಿ ಹೇಳಿ ಕಳಿಸಿದೆ. ಸರಿ, ಮಾರನೆಯ ದಿನ ಬೆಳಿಗ್ಗೆ ಬಂದ ಮಹೇಶನ ತಾಯಿ ನನ್ನ ಮುಖ ನೋಡುತ್ತಲೇ ಅಬ್ಬಬ್ಬೋ ಎಂದು ಅಳತೊಡಗಿದರು. ಕಾಲೇಜಿನಲ್ಲಿದ್ದ ಎಲ್ಲರೂ ಏನೋ ಅನಾಹುತವಾಗಿದೆ ಎಂಬಂತೆ ಬಂದು ಗುಂಪು ಸೇರಿದರು.

ನಾನು ಎಷ್ಟೇ ಸಮಾಧಾನ ಹೇಳಿದರೂ ಅವರು ಅಳು ನಿಲ್ಲಿಸಲಿಲ್ಲ. ‘ನನ್ನ ಮಗ ತಪ್ಪು ಮಾಡಿದ್ದಾನೆ ಕಾಪಾಡಿ. ಒಬ್ಬನೇ ಮಗ ತಂದೆ ಇಲ್ಲ’ ಎಂದು ನೆಲ ಸಾರಿಸಿ ಎದೆ ಬಡಿದುಕೊಂಡು ಮತ್ತಷ್ಟೂ ಕೂಗಾಡುತ್ತಾ ಅಳು ಮುಂದುವರೆಸಿದರು. ಬಂದವರೆಲ್ಲಾ ನನ್ನನ್ನೇ ‘ಅಂಥದ್ದು ಏನು ಹೇಳಿದಿರಿ ಸಾರ್? ತಂದೆ ತಾಯಿಗಳಿಗೆಲ್ಲಾ ಹಾಗೆ ಹೆದರಿಸಬಾರದು! ಏನಾದ್ರೂ ಹೆಚ್ಚು ಕಮ್ಮಿಯಾದ್ರೆ? ಯಾರು ಉತ್ತರ ಕೊಡೋರು. ತಪ್ಪಾಯಿತು ಅಂತ ಸಮಾಧಾನ ಹೇಳಿ ಕಳಿಸಿ’ ಎಂದು ನನಗೇ ಜೋರು ಮಾಡಿದರು. ತಾಯಿಯನ್ನು ನನ್ನ ಮೇಲೆ ಛೂ ಬಿಟ್ಟು ಮಹೇಶ ನಿರ್ಲಿಪ್ತನಾಗಿ ನಿಂತಿದ್ದ.

ಮಾತಿಗೆ ಮೊದಲೇ ಹೀಗೆ ಗೋಳಾಡಿ ದುಃಖದ ಸನ್ನಿವೇಶ ಸೃಷ್ಟಿಸಿದ ಆ ತಾಯಿಯ ಅಳುವಿಗೆ ನಾನು ಶರಣಾಗಿ ಹೋದೆ. ಸಮಾಧಾನ ಹೇಳಿ, ಎಳನೀರು ತರಿಸಿ ಕುಡಿಸಿ, ಕಳುಹಿಸಿಕೊಟ್ಟೆ. ಮಹೇಶ ಬರ್ತೀನಿ ಸಾರ್ ಎಂದು ನಮಸ್ಕಾರ ಮಾಡಿ ಹೋದ. ಮತ್ತೆ ಮಾರನೆಯ ದಿನ ಕ್ಲಾಸ್ ರೂಮಿನಲ್ಲಿ ಹುಡುಗರು ಯಥಾ ಪ್ರಕಾರ ನನ್ನ ನೋಡಿ ಮುಸಿಮುಸಿ ನಗುತ್ತಿದ್ದರು. ‘ಏನಾಯಿತು ಹೇಳ್ರೋ?’ ಎಂದೆ.

‘ಸಾರ್ ನಿಮಗೆ ಅಷ್ಟೂ ಗೊತ್ತಾಗಲಿಲ್ವಾ ಮಹೇಶ ಕರ್ಕೊಂಡು ಬಂದಿದ್ದು ಡೂಪ್ಲಿಕೇಟ್ ತಾಯಿ ಸಾರ್. ಆಯಮ್ಮ ಕಲ್ಯಾಣ ಮಂಟಪದಲ್ಲಿ ಕಸ ಎತ್ತೋರು ಸಾರ್. ಅವರಿಗೆ ನೂರ್ ರೂಪಾಯಿ ಕೊಟ್ಟು, ಏನೇನ್ ಮಾಡ್ಬೇಕು ಅನ್ನೋದನ್ನೆಲ್ಲಾ ಟ್ರೈನಿಂಗ್ ಕೊಟ್ಟು ಕರ್ಕೊಂ ಡು ಬಂದಿದ್ದ. ನಿಮಗೆ ಒರಿಜಿನಲ್ ಅಪ್ಪ ಅಮ್ಮನಿಗೂ, ಡೂಪ್ಲಿಕೇಟ್ ತಂದೆ ತಾಯಿಗೂ ವ್ಯತ್ಯಾಸನೇ ಗೊತ್ತಾಗಲಿಲ್ವ ಸಾರ್’ ಎಂದು ನಗುವನ್ನು ಮುಂದುವರೆಸಿದರು. ನಾನು ಮತ್ತೆ ಬೆಪ್ಪನಾಗಿದ್ದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.