ಬೆಂಗಳೂರು ಮಹಾನಗರದಲ್ಲಿ ನಗರ ಸಾರಿಗೆ ಸಂಸ್ಥೆಯ ಬಸ್ಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲು ವಾಹನನಿಬಿಡ ಪ್ರದೇಶಗಳಾದ ಸುಜಾತ ಚಿತ್ರಮಂದಿರದ ಎದುರು, (ರಾಜಾಜಿನಗರ ಕಡೆಗೆ), ಕೆ.ಆರ್. ಸರ್ಕಲ್ ಕಡೆಗೆ ಕಾರ್ಪೊರೇಷನ್ ಪಕ್ಕದಲ್ಲಿ ಶಾಂತಿನಗರ ಕಡೆಗೆ ಹೋಗುವ ಕಾಳಿಂಗರಾವ್ ರಸ್ತೆಗಳಲ್ಲಿ ಬಸ್ವೇಗಳನ್ನು ನಿರ್ಮಿಸಲಾಗಿದೆ.

ಆದರೆ ನಗರ ಸಾರಿಗೆ ಸಂಸ್ಥೆಗಳು ಆ ಮಾರ್ಗ ಬಳಸಿ ಅವುಗಳ ಪಕ್ಕದಲ್ಲಿರುವ ತಂಗುದಾಣದ ಬಳಿ ನಿಲ್ಲದೇ ನೇರವಾಗಿ ರಸ್ತೆಯಲ್ಲಿ ಸಾಗುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಪ್ರಯಾಣಿಕರು ಬಸ್ವೇ ಬಳಿಯ ತಂಗುದಾಣಗಳನ್ನು ಬಳಸಿಕೊಂಡು ಬಸ್ಗಳನ್ನು ಹತ್ತಲು, ಇಳಿಯಲು ಅನುಕೂಲ ಮಾಡಿಕೊಡುವಂತೆ ಕೋರಿ ಪತ್ರವನ್ನು ಪತ್ರಿಕೆಯಲ್ಲಿ ಬರೆದಿದ್ದೆ.

ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ ತಾವು ಸ್ಪಷ್ಟೀಕರಣ ನೀಡಿದ್ದಿರಿ. ಮೇಲೆ ಹೇಳಿದ ಬಸ್ವೇಗಳಲ್ಲಿ ನಗರ ಸಾರಿಗೆ ಬಸ್ ನಿಲ್ಲಿಸಿ ಪ್ರಯಾಣಿಕರಿಗೆ ಹತ್ತಲು, ಇಳಿಯಲು ಹೋಗುವಂತೆ ಮಾಡಲು ಚಾಲಕರ ಮೇಲೆ ನಿಗಾ ಇಡುವಂತೆ ಸಾರಥಿ ಗಸ್ತು ಪಡೆಯನ್ನು ನಿಯೋಜಿಸಿ ಕ್ರಮ ಕೈಕೊಳ್ಳಲಾಗಿದೆ ಎಂದು ತಿಳಿಸಿದ್ದಿರಿ. ಆದರೆ ತಾವು ಮಾಡಿದ ಆದೇಶದ ಪ್ರಕಾರ ನಗರ ಸಾರಿಗೆ ಬಸ್ಗಳು ಬಸ್ವೇಗಳನ್ನು ಬಳಸಿಕೊಂಡು ತಂಗುದಾಣದ ಬಳಿ ಬಸ್ ನಿಲುಗಡೆ ಮಾಡದೆ ಮೊದಲಿನಂತೆ ನೇರ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಆ ಕುರಿತು ಚಾಲಕರಿಗೆ ಮನವಿ ಮಾಡಿಕೊಂಡರೂ ಅವರು ಪ್ರಯಾಣಿಕರ ಮಾತಿಗೆ ಬೆಲೆ ಕೊಡುತ್ತಿಲ್ಲ.

ಅವರು ಬಸ್ವೇ ಬಳಸುವ ಬಗ್ಗೆ ಸಾರಥಿ ಗಸ್ತು ಪಡೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯ ಬಸ್ಗಳು ಬಸ್ವೇಗಳನ್ನು ಕಡ್ಡಾಯವಾಗಿ ಬಳಸುವಂತೆ ಚಾಲಕರಿಗೆ ಸ್ಪಷ್ಟ ಆದೇಶ ನೀಡುವಂತೆ ಈ ಮೂಲಕ ಕೋರುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.