ವಾಷಿಂಗ್ಟನ್ (ಪಿಟಿಐ): ವ್ಯಾಕರಣ ದೋಷಗಳ ಹಾಗೂ ತಪ್ಪು ಅಕ್ಷರಗಳು ದಾಖಲಾದ ಕೂಡಲೇ ಕಂಪನದ ಮೂಲಕ ಎಚ್ಚರಿಕೆ ಕೊಡುವಂತಹ ಅತ್ಯುನ್ನತ ತಂತ್ರಜ್ಞಾನದ ಪೆನ್ ಒಂದನ್ನು ಜರ್ಮನಿಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಮ್ಯೂನಿಚ್ನ ಡೇನಿಯಲ್ ಕೇಸ್ಮಚೆರ್ (33) ಮತ್ತು ಫಾಕ್ ವೋಲ್ಸ್ಕಿ ಎಂಬುವವರು ಅಭಿವೃದ್ಧಿಪಡಿಸಿರುವ ಈ ಪೆನ್ನ ಹೆಸರು `ಲೆರ್ನ್ಸ್ಟಿಫ್ಟ್'. ಸಾಮಾನ್ಯ ಪೆನ್ಗಳಂತೆ ಇಂಕ್ ಹೊಂದಿರುವ ಈ `ಲೆರ್ನ್ಸ್ಟಿಫ್ಟ್' ಪೆನ್ನಿನ ಒಳಭಾಗದಲ್ಲಿ ಚಲನ ಸಂವೇದಕ ಮತ್ತು ಲಿನಕ್ಸ್ ಕಂಪ್ಯೂಟರ್ ಪವರ್ ಬ್ಯಾಟರಿ ಸಮೇತ ವೈಫೈ ಚಿಪ್ ಅವಳಡಿಸಲಾಗಿದೆ.

ಈ ಸಾಧನಗಳು ಪೆನ್ನಿಂದ ಬರೆಯುವಾಗ ನಿಗದಿತ ಸಂದರ್ಭ, ಅಕ್ಷರಗಳ ವಿನ್ಯಾಸ ಹಾಗೂ ವರ್ಗೀಕರಣವನ್ನು ನಿಖರವಾಗಿ ಗ್ರಹಿಸುತ್ತವೆ. ಆ ಮೂಲಕ ತಪ್ಪು ಬರೆದ ಕೂಡಲೇ ಪೆನ್ ಕಂಪಿಸುವಂತೆ ಮಾಡುತ್ತದೆ ಎಂದು ಎಬಿಸಿ ವರದಿ ಮಾಡಿದೆ.

`ಪೆನ್ನನ್ನು ಕಾರ್ಯಸಾಮರ್ಥ್ಯಕ್ಕೆ ಅನುಗುಣವಾಗಿ ಹಸ್ತಾಕ್ಷರ (ಕ್ಯಾಲಿಗ್ರಫಿ) ಮತ್ತು ಕಾಗುಣಿತ (ಆರ್ತಾಗ್ರಫಿ) ಎಂದು ಎರಡು ರೀತಿ ವರ್ಗೀಕರಿಸಲಾಗಿದೆ. ಬರೆಯುವವರು ಈ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಭಾಷೆಯ ದತ್ತಾಂಶ ಹೊಂದಿರುವ ಈ ಪೆನ್ ತನ್ನಲ್ಲಿಲ್ಲದ ಪದ ದಾಖಲಾದ ತಕ್ಷಣ ಕಂಪಿಸುತ್ತದೆ' ಎಂದು ಡೇನಿಯಲ್ ಹೇಳಿದ್ದಾರೆ.

`ಕಳೆದ ವರ್ಷ ನನ್ನ ಮಗ ಶಾಲೆಯ ಹೋಮ್ವರ್ಕ್ ಬರೆಯುವಾಗ ಮಾಡುತ್ತಿದ್ದ ದೋಷಗಳನ್ನು ನೋಡುತ್ತಿದ್ದ ನನಗೆ, ತಪ್ಪು ಬರೆದ ಕೂಡಲೇ ಅದನ್ನು ಸೂಚಿಸುವ ಪೆನ್ ಇದ್ದಿದ್ದರೆ ಹೇಗಿರುತ್ತಿತ್ತು ಎಂದು ಯೋಚಿಸಿದೆ. ಈ ಆಲೋಚನೆಯೇ ನಂತರದ ಒಂದು ವರ್ಷದಲ್ಲಿ `ಲೆರ್ನ್ಸ್ಟಿಫ್ಟ್' ಪೆನ್ ಅಭಿವೃದ್ಧಿಪಡಿಸಲು ಕಾರಣವಾಯಿತು' ಎಂದು ವೋಲ್ಸ್ಕಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.