ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಹೆಚ್ಚು ಜನರಿಗೆ ತಲುಪಿಸುವ ಮತ್ತು ಮಕ್ಕಳಲ್ಲಿ ಸದ್ಭಾವನೆ ಮೂಡಿಸುವ ಉದ್ದೇಶದಿಂದ ಪ್ರಾರಂಭವಾದ ‘ಗುರು ಸಮರ್ಥ ಸಂಗೀತ ವಿದ್ಯಾಲಯ’ ತ್ಯಾಗರಾಜ ನಗರದಲ್ಲಿದೆ.

ಕಳೆದ 12 ವರ್ಷಗಳ ಹಿಂದೆ (2002ರಲ್ಲಿ) ವಿದ್ವಾನ್ ಅಮೃತೇಶ ಕುಲಕರ್ಣಿ ಸ್ಥಾಪಿಸಿದ ಈ ವಿದ್ಯಾಲಯದಲ್ಲಿ ತಬಲಾ, ಹಾರ್ಮೋನಿಯಂ ವಾದನದ ಜತೆಗೆ ಹಿಂದೂಸ್ತಾನಿ ಶಾಸ್ತ್ರೀಯಸಂಗೀತವನ್ನು ಕಲಿಸಿಕೊಡಲಾಗುತ್ತದೆ. ಸುಮಾರು 120 ಮಕ್ಕಳು ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ.

ತಬಲಾ ವಾದನವನ್ನು ವಿದ್ವಾನ್ ಅಮೃತೇಶ ಕುಲಕರ್ಣಿ, ಹಾರ್ಮೋನಿಯಂ ಹಾಗೂ ಹಿಂದೂಸ್ತಾನಿ ಸಂಗೀತವನ್ನು ಅವರ ಪತ್ನಿ ಉಮಾ ಕುಲಕರ್ಣಿ ಹೇಳಿಕೊಡುತ್ತಾರೆ. ಗುಣಮಟ್ಟದ ಕಲಿಕೆಗೆ ಆದ್ಯತೆ ನೀಡುತ್ತಿರುವ ಈ ಸಂಗೀತ ವಿದ್ಯಾಲಯದಲ್ಲಿ ಕಲಿತ ಮಕ್ಕಳು ಹಲವಾರು ವೇದಿಕೆಗಳಲ್ಲಿ ಕಛೇರಿ ಕೊಟ್ಟು ಗಮನ ಸೆಳೆದಿರುವುದು ವಿಶೇಷ.

ಈ ಇಬ್ಬರು ಸಂಗೀತ ಶಿಕ್ಷಕರು ತ್ಯಾಗರಾಜನಗರದಲ್ಲಿ ಮಾತ್ರವಲ್ಲದೆ ಜೆ.ಪಿ.ನಗರ, ಬಿಟಿಎಂ ಲೇಔಟ್, ಸಹಕಾರ ನಗರ, ನಂದಿನಿ ಲೇಔಟ್, ರಾಜಾಜಿನಗರ, ಬಸವೇಶ್ವರ ನಗರ ಮುಂತಾದ ವಿವಿಧ ಬಡಾವಣೆಗಳಿಗೂ ಹೋಗಿ ಆಸಕ್ತ ಸಂಗೀತ ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ನೀಡುತ್ತಾರೆ. ಹೀಗಾಗಿ ಸಂಗೀತ ತ್ಯಾಗರಾಜನಗರ ಬಡಾವಣೆಯಾಚೆಗೂ ವಿಸ್ತರಿಸಿದೆ.

ಗುರು ಸಮರ್ಥ ಸಂಗೀತ ವಿದ್ಯಾಲಯದಲ್ಲಿ ಕಲಿಯುವ ಮಕ್ಕಳಿಗೆ ಸರ್ಕಾರ ನಡೆಸುವ ವಿಶೇಷ ಸಂಗೀತ ಪರೀಕ್ಷೆಗಳಲ್ಲಿ ಬರೆಯಲು ವಿಶೇಷ ತರಬೇತಿ ನೀಡಲಾಗುತ್ತದೆ. ಅಲ್ಲದೆ ‘ಅಖಿಲ ಭಾರತೀಯ ಗಂಧರ್ವ ಮಹಾ ಮಂಡಳ’ ನಡೆಸುವ ಸಂಗೀತ ಪರೀಕ್ಷೆ ತೆಗೆದುಕೊಳ್ಳಲು ಉತ್ತೇಜನ ನೀಡಲಾಗುತ್ತದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರತಿವರ್ಷ ನಡೆಸುವ ಸಂಗೀತ/ತಾಳವಾದ್ಯ ಪರೀಕ್ಷೆಗಳ ಜೂನಿಯರ್, ಸೀನಿಯರ್, ವಿದ್ವತ್ ಹಂತಗಳಲ್ಲಿ ಪರೀಕ್ಷೆ ಎದುರಿಸಲು ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಇದರಿಂದ ಇಲ್ಲಿ ಕಲಿಯುವ ಮಕ್ಕಳು ಉನ್ನತ ಶ್ರೇಣಿಗಳಲ್ಲಿ ಪಾಸಾಗುತ್ತಾ ಬಂದಿದ್ದಾರೆ. ಇಲ್ಲಿ ಕಲಿತ ಸಂಗೀತ ವಿದ್ಯಾರ್ಥಿಗಳು ಬೆಂಗಳೂರು ಮತ್ತು ಹೊರ ರಾಜ್ಯಗಳ ಅನೇಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ.

‘ಪುಟ್ಟ ಮಕ್ಕಳಿಗೆ ತಬಲಾ ಕಲಿಸುವುದು ಕೂಡ ಒಂದು ಕಲೆ. ಎಳೆಯ ಮಕ್ಕಳ ಮನಸ್ಸು, ಮೂಡ್, ಉತ್ಸಾಹ, ಆಸಕ್ತಿ ಎಲ್ಲವನ್ನೂ ಗಮನಿಸಿ ಅದಕ್ಕೆ ತಕ್ಕಂತೆ ಪಾಠ ಮಾಡಬೇಕಾಗುತ್ತದೆ. ಮಕ್ಕಳನ್ನು ಆತ್ಮೀಯವಾಗಿ ಮಾತನಾಡಿಸಿ, ಅವರಿಗೆ ಖುಷಿಯಾಗುವಂತೆ ಕಲಿಸುವ ಕೌಶಲ, ಚಾಕಚಕ್ಯ ಬೇಕು. ತಬಲಾ ಕಲಿಸಲು ಕುಳಿತರೆ ಸಮಯದ ಕಡೆ ಗಮನ ಹರಿಸಬಾರದು. ಮಕ್ಕಳಿಗೆ ತಾಳ ಮನದಟ್ಟಾಗುವವರೆಗೆ, ಅವರು ನುಡಿಸಿದ್ದು ತೃಪ್ತಿ ಆಗುವವರೆಗೆ ಕಲಿಸಬೇಕು. ಇದೇ ನನ್ನ ಧೋರಣೆ’ ಎನ್ನುತ್ತಾರೆ ವಿದ್ವಾನ್ ಅಮೃತೇಶ್ ಕುಲಕರ್ಣಿ.

‘ಏಕಾಗ್ರತೆ ಎಂಬುದು ಒಂದು ತಪಸ್ಸು ಇದ್ದಹಾಗೆ. ಇದನ್ನು ಅನವರತ ಮಾಡುತ್ತ ನನ್ನ ಗುರುವಿನಿಂದ ಲಭಿಸಿರುವ ವಿದ್ಯೆಯನ್ನು ಮಕ್ಕಳಿಗೆ ಧಾರೆ ಎರೆದಾಗ ಒಂದು ಬಗೆಯ ಸಾರ್ಥಕ್ಯ ಭಾವ ಉಂಟಾಗುತ್ತದೆ. ನನ್ನ ಗುರು ಪಂ. ಸತೀಶ್ ಹಂಪಿಹೊಳಿ ಇದೇ ಶಿಸ್ತಿನಿಂದ ನನಗೆ ಪಾಠ ಕಲಿಸಿದ್ದಾರೆ. ಅದನ್ನೇ ನಾನು ರೂಢಿಸಿಕೊಂಡು ಮಕ್ಕಳಿಗೂ ಕಲಿಸುತ್ತಿದ್ದೇನೆ’ ಎಂದು ತಮ್ಮ ಗುರುವಿನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಾರೆ ಇವರು.

ಮಕ್ಕಳ ಸಾಧನೆ
‘ಗುರು ಸಮರ್ಥ ಸಂಗೀತ ವಿದ್ಯಾಲಯ’ ಮಕ್ಕಳ ಸಾಧನೆಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾ ಬಂದಿದೆ. ಪ್ರತಿವರ್ಷ ಗುರುಪೂರ್ಣಿಮೆ ಆಚರಿಸಿ ಮಕ್ಕಳಿಗೆ ವೇದಿಕೆ ಒದಗಿಸಲಾಗುತ್ತದೆ. ಪ್ರತಿವರ್ಷವೂ ಒಬ್ಬ ಸಂಗೀತ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತದೆ.

ಅಲ್ಲದೆ ಈ ತಬಲಾ ಶಾಲೆಯಲ್ಲಿ ಕಲಿತ ಮಕ್ಕಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ‘ಬಾಲ ಪ್ರತಿಭೆ’, ‘ಕಿಶೋರ ಪ್ರತಿಭೆ’ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾಗಿದ್ದಾರೆ. ಬಾಲಭವನದ ವತಿಯಿಂದ ನಡೆಯುವ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ 2013ರಲ್ಲಿ ಅಭಯ ಕುಲಕರ್ಣಿ ಬಹುಮಾನ ಪಡೆದು ‘ಕರ್ನಾಟಕ ಕಲಾಶ್ರೀ’ ಮತ್ತು ‘ಯುವ ಪುರಂದರ ಪ್ರಶಸ್ತಿ’ ಪಡೆದರು. ಅಲ್ಲದೆ ಪ್ರಜ್ವಲ್ ನಾಗಭೂಷಣ ಕೆನರಾ ಬ್ಯಾಂಕ್ ನೀಡುವ ‘ಬಾಲ ಪ್ರತಿಭಾ ಪುರಸ್ಕಾರ’ ಪಡೆದ.

‘ನಮ್ಮ ತಬಲಾ ವಿದ್ಯಾಲಯ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಗಮನಹರಿಸುತ್ತಿದೆ. ಇನ್ನು ಮುಂದೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಯುವಕರನ್ನು ಗುರುತಿಸಿ, ಅವರ ಸಂಗೀತ ಪ್ರತಿಭೆಯ ಅನಾವರಣಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಿದೆ’ ಎನ್ನುತ್ತಾರೆ ವಿದ್ವಾನ್ ಅಮೃತೇಶ್. ತಮ್ಮ ಈ ಎಲ್ಲ ಯತ್ನಗಳಿಗೆ ಸದಾ ಪ್ರೋತ್ಸಾಹ ನೀಡುವವರು ಗುರುಗಳಾದ ಪಂ. ಸತೀಶ್ ಹಂಪಿಹೊಳಿ ಹಾಗೂ ವಿದುಷಿ ಸ್ನೇಹಾ ಹಂಪಿಹೊಳಿ ಎಂದು ಅವರು ಸ್ಮರಿಸುತ್ತಾರೆ.

ಸಂಗೀತ, ಸಾಹಿತ್ಯದತ್ತ ಒಲವು
ತಬಲಾ ಗುರು ವಿದ್ವಾನ್ ಅಮೃತೇಶ್ ಕುಲಕರ್ಣಿ ಮಕ್ಕಳಿಗೆ ತಬಲಾ ಕಲಿಸುವ ಶಿಸ್ತಿಗೆ ಹೆಸರಾದವರು. ಮೂಲತಃ ಧಾರವಾಡ ಜಿಲ್ಲೆ ಅಣ್ಣಿಗೇರಿಯವರಾದ ಅಮೃತೇಶ್ ಕುಲಕರ್ಣಿ, ಬಾಲ್ಯದಿಂದಲೇ ಸಂಗೀತ, ಸಾಹಿತ್ಯದಲ್ಲಿ ಒಲವು ಉಳ್ಳವರಾಗಿದ್ದರು.

ಆರಂಭದ ತಬಲಾ ಅಭ್ಯಾಸವನ್ನು ಪಂ. ಪ್ರಹ್ಲಾದ ಮೊಕಾಶಿ ಅವರ ಬಳಿ ಮಾಡಿದರು. ಹೆಚ್ಚಿನ ಅಭ್ಯಾಸವನ್ನು ಖ್ಯಾತ ತಬಲಾವಾದಕರಾದ ಪಂ. ಸತೀಶ್ ಹಂಪಿಹೊಳಿ ಅವರ ಮಾರ್ಗದರ್ಶನದಲ್ಲಿ ಮಾಡಿದರು. ತಬಲಾದಲ್ಲಿ ವಿದ್ವತ್ ಮತ್ತು ವಿಶಾರದ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದರು.

ಅಮೃತೇಶ್ ಅವರು ಓದಿದ್ದು ಎಂಜಿನಿಯರಿಂಗ್ ಪದವಿ. ಸದ್ಯ ‘ಎಲ್ ಅಂಡ್ ಟಿ’ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದು, ತಬಲಾ ಕಲಿಸುವುದು ಇವರ ಪ್ರವೃತ್ತಿ. ಇವರಿಗೆ ‘ಸ್ವರ ಕಲಾ ಗೌರವ’ ಪ್ರಶಸ್ತಿ ಸಂದಿದೆ. ಅನೇಕ ಗಾಯಕರಿಗೆ ತಬಲಾ ಸಾಥ್ ನೀಡಿದ ಹೆಗ್ಗಳಿಕೆ ಇವರದ್ದು.

ವಿಳಾಸ: ವಿದ್ವಾನ್ ಅಮೃತೇಶ ಕುಲಕರ್ಣಿ, ಗುರುಸಮರ್ಥ ತಬಲಾ ವಿದ್ಯಾಲಯ, ನಂ. 49, 6ನೇ ಕ್ರಾಸ್, ಜಯವಿಹಾರ ಗಾರ್ಡನ್, ತ್ಯಾಗರಾಜನಗರ, ಬೆಂಗಳೂರು.. ಫೋನ್: 080-26766460/ 9449671971

ಒತ್ತಡ ನಿವಾರಣೆಗೆ ಸಹಕಾರಿ
ಗುರು ಸಮರ್ಥ ತಬಲಾ ವಿದ್ಯಾಲಯದಲ್ಲಿ ತಬಲಾ ಕಲಿಯಲು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ನಾನು ಕಳೆದ 15 ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ತಬಲಾ ಕಲಿತೆ. ಈ ವಿದ್ಯಾಲಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ತಬಲಾ ಅಭ್ಯಾಸ ಮಾಡುತ್ತಿದ್ದೇನೆ. ಕೆನರಾ ಬ್ಯಾಂಕ್ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವುದರಿಂದ ಬಿಡುವಿನ ಸಮಯದಲ್ಲಷ್ಟೇ ತಬಲಾ ಕಲಿಯಲು ಮೀಸಲಿಟ್ಟಿದ್ದೇನೆ. ಮಂಗಳೂರಿನಲ್ಲಿ ಸುಮಾರು ಆರು ವರ್ಷ ತಬಲಾ ಕಲಿತೆ.

ಗುರು ಅಮೃತೇಶ ಕುಲಕರ್ಣಿ ಅವರ ತಬಲಾ ಕಲಿಕೆಯ ಶೈಲಿ ಚೆನ್ನಾಗಿದೆ. ಶಿಷ್ಯರ ಮನಸ್ಸನ್ನು ಅರಿತು ಅವರಿಗೆ ಹೇಗೆ ಬೇಕೊ ಹಾಗೆ ತಬಲಾ ಕಲಿಸುವ ವಿಧಾನ ನೋಡಿದಾಗ ಇವರು ಬೇರೆ ಗುರುಗಳಿಗಿಂತ ವಿಭಿನ್ನವಾಗಿ ಕಾಣುತ್ತಾರೆ. ಒತ್ತಡದ ಕೆಲಸದ ಮಧ್ಯೆ ಸಂಗೀತ ನಿಜಕ್ಕೂ ಮಾನಸಿಕ ನೆಮ್ಮದಿಗೆ ಸಹಕಾರಿಯಾಗುತ್ತದೆ.
–ನಾಗಭೂಷಣ

ಮತ್ತಷ್ಟು ಸಾಧಿಸುವಾಸೆ

ಐದು ವರ್ಷದ ಹುಡುಗನಾಗಿದ್ದಾಗಲೇ ತಬಲಾದತ್ತ ಆಕರ್ಷಿತನಾದೆ. ಮನೆಯಲ್ಲಿ ಸಂಗೀತದ ವಾತಾವರಣ ಇದ್ದದ್ದು ಸಹಜವಾಗಿಯೇ ತಬಲಾ ಕಲಿಯಲು ಪ್ರೇರಣೆ ನೀಡಿತ್ತು. ಸದ್ಯ ಹತ್ತನೇ ತರಗತಿಯಲ್ಲಿ ಓದುತ್ತಿರುವ ನಾನು ಎಷ್ಟೇ ಓದುವ, ಬರೆಯುವ, ಶಾಲಾ ಪಠ್ಯದ ಕೆಲಸ ಇದ್ದರೂ ನಿತ್ಯವೂ ರಿಯಾಜ್ ಮಾಡುವುದನ್ನು ತಪ್ಪಿಸುವುದಿಲ್ಲ. ಇದಕ್ಕೆಲ್ಲ ನನ್ನ ಗುರುಗಳ ನಿರಂತರ ಪ್ರೋತ್ಸಾಹ ಕಾರಣ.

ಈಗಾಗಲೇ ಅನೇಕ ಕಛೇರಿಗಳಲ್ಲಿ ತಬಲಾ ಸಾಥಿ, ಸೋಲೊ ತಬಲಾ ವಾದನ ನೀಡಿದ ಅನುಭವ ನನಗಿದೆ. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದೇನೆ. ತಬಲಾದಲ್ಲಿ ಮತ್ತಷ್ಟು ಸಾಧಿಸುವಾಸೆ.
–ಅಭಯ ಕುಲಕರ್ಣಿ

ಬಾಲವೇದಿಕೆ ಮೇಲೆ...
ಶ್ರೀಚೈತನ್ಯ ಟೆಕ್ನೋ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ನಾನು ಕಳೆದ ನಾಲ್ಕು ವರ್ಷಗಳಿಂದ ಗುರು ಸಮರ್ಥ ತಬಲಾ ಶಾಲೆಯಲ್ಲಿ ಕಲಿಯುತ್ತಿದ್ದೇನೆ. ಬಾಲಭವನ ಸೊಸೈಟಿಯ ಸದಸ್ಯನಾಗಿದ್ದು, ಬಾಲವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ್ದೇನೆ.

ಗಂಧರ್ವ ಮಹಾವಿದ್ಯಾಲಯ ನಡೆಸುವ ತಬಲಾ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿ ಪಾಸಾಗಿದ್ದೇನೆ. ಮಂಗಳೂರಿನಲ್ಲಿ ನಡೆದ ‘ಬಾಲಭಾರತ್ ಸೃಜನೋತ್ಸವ’ದಲ್ಲಿ ತಬಲಾ ನುಡಿಸಿದ್ದೆ. ಕಳೆದ ವರ್ಷ ನಡೆದ ಈ ಕಾರ್ಯಕ್ರಮ ಎಂದಿಗೂ ನೆನಪಿನಂಗಳದಲ್ಲಿ ಉಳಿಯುವಂಥದ್ದು. ಚೆನ್ನೈ, ತಿರುಚನಾಪಳ್ಳಿಯಲ್ಲೂ ಕಾರ್ಯಕ್ರಮ ನೀಡಿದ್ದೇನೆ.

ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿ ನಡೆಸಿದ ಶತ ತಬಲಾ ಉತ್ಸವದಲ್ಲಿ ಭಾಗವಹಿಸಿದ್ದೇನೆ. ತಬಲಾ ಕಲಿಯುವಂತೆ, ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಸದಾ ಪ್ರೋತ್ಸಾಹ ಉತ್ತೇಜನ ನೀಡುವವರು ನಮ್ಮ ಗುರುಗಳು. ಜತೆಗೆ ಹೆತ್ತವರ ಪ್ರೋತ್ಸಾಹವೂ ಇದೆ.
–ಪ್ರಜ್ವಲ್ ಎನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.