ಶುಕ್ರವಾರ, ಜೂನ್ 25, 2021
21 °C

ತಾಯಿ, ಮಗ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ತಾಯಿ ಹಾಗೂ ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಇಲ್ಲಿಗೆ ಸಮೀಪದ (ಗುಹ್ಯ) ಕಕ್ಕಟ ಕಾಡುವಿನಲ್ಲಿ ನಡೆದಿದೆ.ಕಕ್ಕಟ ಕಾಡುವಿನಲ್ಲಿ ನೆಲೆಸಿರುವ ಲಕ್ಷ್ಮಿ (65), ಇವರ ಮಗ ರಾಜು (35) ಆತ್ಮಹತ್ಯೆ ಮಾಡಿಕೊಂಡವರು. ಇವರು ಕೂಲಿ ಕಾರ್ಮಿಕರು.ಮಧ್ಯಾಹ್ನ 2 ಗಂಟೆ ಸುಮಾರಿಗೆ ಲಕ್ಷ್ಮಿ  ಮಗಳು ಲತಾ ಅವರು ಸಿದ್ದಾಪುರ ಸಂತೆಗೆ  ಹೋಗಿದ್ದ ಸಂದರ್ಭದಲ್ಲಿ ಮನೆಯ ಅಡುಗೆ ಕೋಣೆಯಲ್ಲಿ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಾಜು ಮಾನಸಿಕ ಅಸ್ವಸ್ಥ. ಈತನ ಸ್ಥಿತಿಯನ್ನು ಕಂಡು ಕೊರಗಿದ ತಾಯಿ ಜೀವನದಲ್ಲಿ ಜಿಗುಪ್ಸೆಗೊಂಡಿರುವುದು ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ ಎಂದು ಸಿದ್ದಾಪುರ ಪೋಲಿಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.