ಸೋಮವಾರ, ಜೂನ್ 14, 2021
26 °C
ಹೋಳಿಯಲ್ಲಿ ಗಮನ ಸೆಳೆದ ಹಗಣ

ತಾಲ್ಲೂಕು ಕಚೇರಿ ಎದುರು ಸುಗ್ಗಿ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ಹೋಳಿ ಹಬ್ಬದ ಅಂಗವಾಗಿ ಭಾನುವಾರ ಸಂಜೆ ಹಾಲಕ್ಕಿ ಸಮುದಾಯದ ವರಿಂದ ವಿವಿಧ ಹಗಣಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಗಮನಸೆಳೆದರು.ಅರಣ್ಯ ಅತಿಕ್ರಮಣದಾರರ ಸಮಸ್ಯೆ, ಪ್ರಧಾನಿ ಹುದ್ದೆಗಾಗಿ ಪೈಪೋಟಿ, ನಾಪತ್ತೆಯಾದ ಇಂಡೋನೇಷಿಯಾದ ವಿಮಾನವನ್ನು ಬೆಳಂಬಾರದ ಕದಂಬ ನೌಕಾಪಡೆಯ ಹಡಗಿನ ಮೂಲಕ ಶೋಧ ನಡೆಸುವುದು, ಗೋಕರ್ಣದ ರಥ, ಕಾಳಿಂಗ ಮರ್ದನ, ಶಿವಾಜಿ ಕೋಟೆ, ಅಂಬಾರಿ ಮೆರವಣಿಗೆ ಹೀಗೆ ವಿವಿಧ ಹಗಣಗಳು ಪ್ರದರ್ಶಿಸಲ್ಪಟ್ಟವು.ಹಗಣಗಳ ಜೊತೆಯಲ್ಲಿಯೇ ಸಾಗಿಬರುವ ಬೆಳಂಬಾರದ ಸುಗ್ಗಿ ತಂಡ ನಂತರ ತಾಲ್ಲೂಕು ಕಚೇರಿ ಎದುರು ಪ್ರದರ್ಶನ ನೀಡಿತು. ತಹಶೀಲ್ದಾರ್‌ ವಿ.ಜಿ. ಲಾಂಜೇಕರ ಅವರು ಹಿಂದೆ ಬ್ರಿಟಿಷರು ನೀಡಿದ್ದ ತಾಮ್ರದ ಫಲಕವನ್ನು ಹಾಗೂ ನಗದನ್ನು ಗೌರವ ರೂಪದಲ್ಲಿ ಸುಗ್ಗಿತಂಡದವರಿಗೆ ನೀಡಿದರು.ಈ ಸಂದರ್ಭದಲ್ಲಿ ಬೆಳಂಬಾರ ಊರ ಗೌಡರಾದ ಷಣ್ಮುಖ ಗೌಡ, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಪ್ರಮುಖರಾದ ವಸಂತ ಗೌಡ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಭಾಸ್ಕರ ನಾರ್ವೇಕರ ಸಿ.ಪಿ.ಐ. ಜಿ.ಎಂ. ಹೆಗಡೆ, ಪಿಎಸ್ಐ ನಿಶ್ಚಲಕುಮಾರ, ಗೋವಿಂದ ಸೇರಿದಂತೆ ಸಾವಿರಾರು ಜನರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.