ತಾಳಿಕೋಟೆ: ಪಟ್ಟಣದಲ್ಲಿ ತಿಂಗಳ ಅಂತರದಲ್ಲಿ ಡೆಂಗೆ ಜ್ವರಕ್ಕೆ ಇಬ್ಬರು ಬಲಿ ಯಾಗಿದ್ದಾರೆ. ಕಳೆದ ಭಾನುವಾರ ರಾಜವಾಡೆಯಲ್ಲಿ ಎರಡು ವರ್ಷದ ಬಾಲಕ ಭರತೇಶ ರಾಘವೇಂದ್ರ ಬಶೆಟ್ಟಿ ಮೃತಪಟ್ಟರೆ ವಾರಗಳ ಹಿಂದೆ ಆಸ್ಪತ್ರೆ ಸೇರಿದ್ದ ಲಕ್ಷ್ಮೀ ಬಾಯಿ ದಡೇಧ ಎಂಬ ಮೂರು ವರ್ಷದ ಮಗು ಚಿಕಿತ್ಸೆ ಫಲಿಸದೆ ಸಾವಿ ಗೀಡಾಗಿದೆ.

ಪಟ್ಟಣ ಹಾಗೂ ಸುತ್ತಲ ಗ್ರಾಮ ಗಳಿಂದ ಒಂದು ತಿಂಗಳಿಂದೀಚೆ ಶಂಕಿತ ಡೆಂಗೆ ಪೀಡಿತ ರೋಗಿಗಳು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಬಗ್ಗೆ ವರದಿ ಯಾಗಿದೆ.

ಬಿಳೇಭಾವಿ ಹಾಗೂ ಮಸ್ಕಾನಾಳ ದಿಂದ ಅತಿ ಹೆಚ್ಚು ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಿರುವುದಾಗಿ ಖಾಸಗಿ ಆಸ್ಪ ತ್ರೆಯ ವೈದ್ಯರೊಬ್ಬರು ಹೇಳುತ್ತಾರೆ.

ತಲೆನೋವು, ಮೈಕೈ ನೋವು, ಚಳಿಜ್ವರದಂತಹ ಲಕ್ಷಣಗಳು ಮೊದಲು ಕಾಣಿಸಿಕೊಳ್ಳುತ್ತವೆ. ಹಗಲು ಹೊತ್ತಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಈಡಿಸ್ ಈಜಿಪ್ತಿಯಸ್ ಸೊಳ್ಳೆ ಕಡಿತ ಇದಕ್ಕೆ ಪ್ರಮುಖ ಕಾರಣ ಎಂದು ಅವರು ಹೇಳುತ್ತಾರೆ.

ಮಕ್ಕಳಲ್ಲಿ ಸಾಮಾನ್ಯವಾಗಿ ನೆಗಡಿಯಿಂದ ಪ್ರಾರಂಭಗೊಂಡು ಅತಿಯಾದ ಜ್ವರ ಕಾಣಿಸಿಕೊಳ್ಳುತ್ತದೆ, ವಾಂತಿಯಾಗುತ್ತದೆ. 2-3ದಿನಗಳಲ್ಲಿ ಆರಾಮವೆನಿಸಿದರೂ ಸುಸ್ತು ಇರುತ್ತದೆ. ಕೈಕಾಲು ತಣ್ಣಗಿದ್ದರೂ ಮೈ ಬಿಸಿಯಾಗಿ ರುತ್ತದೆ ಎಂದು ಹೇಳುತ್ತಾರೆ, ಮಕ್ಕಳ ತಜ್ಞ ಡಾ.ಆನಂದ ಭಟ್ಟ.

`ರೋಗ ಲಕ್ಷಣದಲ್ಲಿ ನಾಲ್ಕು ಹಂತ ಗಳಿದ್ದು ರೋಗ ಉಲ್ಬಣಿಸಿದಾಗ ಕಣ್ಣು, ಹೊಟ್ಟೆ ಊತ, ಯಕೃತ್ನಲ್ಲಿ ಬಾವು ಬರುತ್ತದೆ. ಮೂಗು ಮತ್ತು ಶೌಚದಲ್ಲಿ ರಕ್ತಸ್ರಾವ ಕಾಣಿಸಿಕೊಂಡಾಗ ಶೀಘ್ರ ತಜ್ಞ ವೈದ್ಯರ ಬಳಿ ಹೋಗಲೇಬೇಕು~ ಎನ್ನು ತ್ತಾರೆ ಅವರು.

`ಶಂಕಿತ ಡೆಂಗೆ ಪೀಡಿತರು ಸರ್ಕಾರಿ ಆಸ್ಪತ್ರೆಗೆ ಬಂದಿಲ್ಲ. ಹೀಗಿದ್ದೂ ಮುಂಜಾ ಗ್ರತಾ ಕ್ರಮವಾಗಿ ಫಾಗಿಂಗ್ ಮಾಡು ವಂತೆ ಪುರಸಭೆಗೆ ತಿಳಿಸಿರುವುದಾಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಿಳಿಸಿದರು.

ಮಾಲಿನ್ಯ: ದೂರು
ಪಟ್ಟಣದಲ್ಲಿ ಮಾಲಿನ್ಯದ ವಾತಾವರಣ ಹೆಚ್ಚುತ್ತಿದೆ. ಎಲ್ಲೆಂದರಲ್ಲಿ ಗಲೀಜು ವಾತಾವರಣ ನಿರ್ಮಾಣ ವಾಗುತ್ತಿದ್ದು ತ್ಯಾಜ್ಯಗಳನ್ನು ಶೀಘ್ರ ವಿಲೇವಾರಿ ಮಾಡುವುದಿಲ್ಲ ಎನ್ನುವುದು ಸಾರ್ವಜನಿಕರ ದೂರು.
ಸ್ವಚ್ಛತೆ ಕಾಪಾಡಿಕೊಳ್ಳುವ ಕಾರ್ಯ ದಲ್ಲಿ ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸುತ್ತಿಲ್ಲ ಎನ್ನುವುದು ಪುರಸ ಭೆಯ ವಾದ.

ಇದೆಲ್ಲದರ ನಡುವೆ ಸಾರ್ವಜನಿಕ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಪುರ ಸಭೆ ನೈರ್ಮಲ್ಯದ ವಾತಾವಾರಣ ಸೃಷ್ಟಿ ಸಲು ಮುಂದಾಗಬೇಕು ಎನ್ನುವುದು ಪ್ರಜ್ಞಾವಂತರ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.