ಭಾನುವಾರ, ಮೇ 9, 2021
17 °C

ತಿನಿಸಿಗೆ ಸ್ಪೆಲಿಂಗ್ ಬೀ ವಿಜೇತನ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಇಲ್ಲಿಯ ಪ್ರಸಿದ್ಧ ರೆಸ್ಟಾರೆಂಟ್‌ವೊಂದು ಅಮೆರಿಕದ ಪ್ರತಿಷ್ಠಿತ ನ್ಯಾಷನಲ್ ಸ್ಪೆಲಿಂಗ್ ಬೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಭಾರತೀಯ ಮೂಲದ ಅಮೆರಿಕದ ಅರವಿಂದ್ ಮಹಾಂಕಾಳಿ ಅವರ ಹೆಸರನ್ನು ಹೊಸ ತಿನಿಸಿಗೆ ಇಟ್ಟಿದೆ.

ಅಮೆರಿಕದ ಕಾಂಗ್ರೆಸ್ ಸದಸ್ಯ ಗ್ರೇಸ್ ಮೆಂಗ್ ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿಷಯವನ್ನು ಪ್ರಕಟಿಸಿದರು.ಕಾರ್ಯಕ್ರಮದಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರೆಸ್ಟಾರೆಂಟ್‌ನ ಮಾಲೀಕ ಜಯ್ ಪಾರ್ಕರ್ ಅವರು, ತಮ್ಮ ರೆಸ್ಟಾರೆಂಟ್‌ನ ತಿನಿಸು ಪಟ್ಟಿಯಲ್ಲಿ ಹೊಸ ಹೆಸರನ್ನು ಸೇರಸಲಾಗಿದ್ದು, ಅದಕ್ಕೆ `ಅರವಿಂದ್ ಮಿನಿ ನೈಡೆಲ್' ಎಂಬ ಹೆಸರಿಡಲಾಗಿದೆ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.