ಸೋಮವಾರಪೇಟೆ: ಜಿಲ್ಲೆಯಲ್ಲಿ ಬತ್ತದ ಕೃಷಿಗೆ ಖ್ಯಾತಿ ಪಡೆದ ತಾಲ್ಲೂಕಿನಲ್ಲಿ ಬತ್ತದ ಕೃಷಿ ನಿಧಾನವಾಗಿ ಅವಸಾನದತ್ತ ಸಾಗುತ್ತಿದೆ. ಅನೇಕ ಕಾರಣಗಳಿಂದ ಬತ್ತದ ಕೃಷಿಗೆ ವಿದಾಯ ಹೇಳುತ್ತಿರುವ ಕೃಷಿಕರು ಗದ್ದೆಗಳನ್ನು ಸಮತಟ್ಟು ಮಾಡಿ, ಕಾಫಿ, ಅಡಕೆ, ಶುಂಠಿ ಕೃಷಿಯಲ್ಲಿ ತೊಡಗಿದ್ದಾರೆ.

ಬರಗಾಲ ಸಹ ಬತ್ತವನ್ನು ಕೈಬಿಡಲು ಮುಖ್ಯ ಕಾರಣ. ಹೆಚ್ಚಿದ ಉತ್ಪಾದನಾ ವೆಚ್ಚ, ಅಧಿಕ ಕೂಲಿ, ಕಾರ್ಮಿಕರ ಕೊರತೆ, ಬೆಲೆಯ ಏರಿಳಿತ ಮುಂತಾದವುಗಳಿಂದ ಬೇಸತ್ತ ಕೃಷಿಕರು ಗದ್ದೆಯಲ್ಲಿ ಪರ್ಯಾಯ ಬೆಳೆಗೆ ಒಲವು ತೋರುತ್ತಿದ್ದಾರೆ.

ಶುಂಠಿಗೆ ಬೆಲೆ ಹೆಚ್ಚಾದಾಗ, ತಾಲ್ಲೂಕಿನ ಅನೇಕ ಬತ್ತದ ಕೃಷಿಕರು ತಮ್ಮ ಗದ್ದೆಗಳಲ್ಲಿ ಶುಂಠಿ ಬೆಳೆ ಯಲು ಪ್ರಾರಂಭಿಸಿದರು. ಆದರೆ ಇತ್ತೀಚಿನ ವರ್ಷದಲ್ಲಿ ಶುಂಠಿಗೆ ರೋಗ ಹರಡಿ ನಾಶವಾದಾಗ ಕೆಲವು ಕೃಷಿಕರು ಪುನಃ ಬತ್ತ ಬೆಳೆಯಲು ಮನಸ್ಸು ಮಾಡಿದರು. ಶುಂಠಿ ಕೃಷಿ ಮಾಡಿದ ಗದ್ದೆಗಳು ಫಲವತ್ತತೆ ಕಳೆದುಕೊಂಡು ಯಾವುದೇ ಬೆಳೆ ಬೆಳೆಯಲು ಅಸಾಧ್ಯವೆಂದು ತಿಳಿದು ಅವುಗಳನ್ನು ಪಾಳುಬಿಡುವ ಸನ್ನಿವೇಶ ನಿರ್ಮಾಣವಾಗಿದೆ.

ಕಾಫಿ ಬೆಲೆ ಹೆಚ್ಚಾದಂತೆ ಗದ್ದೆಗಳು ಕಾಫಿತೋಟ ವಾಗಿ ರೂಪಾಂತರಗೊಂಡವು. ಗೌಡಳ್ಳಿ, ದೊಡ್ಡ ಮಳ್ತೆ, ನೇರುಗಳಲೆ, ನಿಡ್ತ, ದುಂಡಳ್ಳಿ, ಬೆಸೂರು, ಹಂಡ್ಲಿ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬತ್ತದ ಗದ್ದೆಗಳು ಕಾಫಿ ತೋಟಗಳಾಗಿ ಪರಿವರ್ತನೆಯಾಗುವ ಹಾದಿಯಲ್ಲಿವೆ.

ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಹರಗ, ಕೊತ್ನಳ್ಳಿ, ಕುಡಿಗಾಣ, ಇನಕನಹಳ್ಳಿ, ಹೆಗ್ಗಡಮನೆ, ಬೀದಳ್ಳಿ, ಕುಂದಳ್ಳಿ, ಮಲ್ಲಳ್ಳಿ, ಮಾಲ್ಮನೆ, ಬಾಚಳ್ಳಿ ಹಾಗೂ ಕುಂದಳ್ಳಿ ವ್ಯಾಪ್ತಿಯ ಜನ ಬಹು ಕಾಲದಿಂದ ಬತ್ತ ಬೆಳೆಯುತ್ತಿದ್ದಾರೆ. ಪುಷ್ಪಗಿರಿ ತಪ್ಪಲಿನ ಈ ಗ್ರಾಮಗಳಲ್ಲಿ ವಾರ್ಷಿಕ 300ರಿಂದ 400 ಇಂಚು ಮಳೆ ಬೀಳುತ್ತದೆ. ಯಾವುದೇ ಕಷ್ಟ ಬಂದರೂ ಬತ್ತದ ಕೃಷಿ ಅವಲಂಬಿಸಿದ ಇವರಿಗೆ ಈಗ ಅದು ನಷ್ಟ ತರುತ್ತಿದೆ.

ಬತ್ತದ ಬೆಲೆಯ ಏರಿಳಿತದಿಂದ ಕೃಷಿಕರ ಆದಾಯ ಕುಸಿದಿದೆ. ಸರ್ಕಾರದ ಸೌಲಭ್ಯ ಹಾಗೂ ಬೆಂಬಲ ಬೆಲೆ ಈ ಕೃಷಿಕರಿಗೆ ತಲುಪುತ್ತಿಲ್ಲ. ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ಇಲಾಖೆ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ.

ಆಸ್ತಿ ದಾಖಲೆಗಳು ಸಮರ್ಪಕವಾಗಿರದ ಕಾರಣ ಕೃಷಿ ಮತ್ತು ತೋಟ ಗಾರಿಕಾ ಇಲಾಖೆಗಳು ನೀಡುವ ಸಬ್ಸಿಡಿಗಳು ರೈತರಿಗೆ ಸಿಗುತ್ತಿಲ್ಲ. ತಾಕೇರಿ, ಕಿರಗಂದೂರು, ಬಿಳಿಗೇರಿ, ಐಗೂರು, ಯಡೂರು, ತೋಳೂರು ಶೆಟ್ಟಳ್ಳಿ, ಹಾನ್ಗಲ್ಲು, ಮಾದಾಪುರ, ಸುತ್ತಲಿನ ಬತ್ತದ ಗದ್ದೆಗಳು ಕಾಫಿ ತೋಟಗಳಾಗಿ ರೂಪಾಂತರಗೊಂಡು ಸಮೃದ್ಧವಾದ ಕಾಫಿ ನೀಡುತ್ತಿವೆ.

ಗದ್ದೆಯನ್ನು ತೋಟವಾಗಿ ಮಾಡಲಾಗುತ್ತಿದ್ದರೂ ಕೃಷಿ ಇಲಾಖೆಯಲ್ಲಿ ಬತ್ತ ಬೆಳೆಯುವ ಭೂಮಿ ಪರಿವರ್ತನೆಯಾದ ಬಗ್ಗೆ ಸರಿಯಾದ ಮಾಹಿತಿ ಹಾಗೂ ದಾಖಲೆಯಿಲ್ಲ. ರೈತರು ಸಹ ಈ ಬಗ್ಗೆ ಮಾಹಿತಿಯನ್ನು ನೀಡುತ್ತಿಲ್ಲ. ಕಂದಾಯ ಇಲಾಖೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾಫಿ ತೋಟ ವಾಗಿದ್ದರೂ ಕೂಡ ಆಸ್ತಿ ದಾಖಲೆಯಲ್ಲಿ ಬತ್ತದ ಕೃಷಿ ಭೂಮಿ ಎಂದೇ ದಾಖಲಾಗಿರುತ್ತದೆ.

ಗದ್ದೆಯನ್ನು ತೋಟವಾಗಿ ರೂಪಾಂತರ ಮಾಡುವ ದೊಡ್ಡ ರೈತರಿಂದ ಸಣ್ಣ ಹಾಗೂ ಅತಿಸಣ್ಣ ರೈತರು ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಪಕ್ಕದ ಗದ್ದೆಗಳು ತೋಟಗಳಾಗಿ ಪರಿವರ್ತನೆಯಾಗಿ, ಸಿಲ್ವರ್ಮರ, ಬಾಳೆ ಹಾಗೂ ಇತರ ಮರಗಿಡಗಳನ್ನು ಬೆಳೆದಾಗ ಅಲ್ಲಿ ನೆರಳು ಜಾಸ್ತಿಯಾದಂತೆ, ಪಕ್ಕದ ಗದ್ದೆಯಲ್ಲಿ ಬತ್ತ ಬೆಳೆಯಲು ಅಸಾಧ್ಯವಾಗುತ್ತದೆ. ಇನ್ನೊಂದು ಕಡೆ ಅವರು ಕೂಡ ಕಾಫಿ ತೋಟ ಮಾಡಲು ಬಂಡವಾಳ ವಿಲ್ಲದೆ ಬತ್ತದ ಕೃಷಿ ಮುಂದುವರಿಸುವಂತಹ ಸ್ಥಿತಿ ಬಂದಿದೆ.

ಬತ್ತ ಬೆಳೆದರೆ ವರ್ಷಪೂರ್ತಿ ನೆಮ್ಮದಿಯಿಂದ ಜೀವನ ಸಾಗಿಸಬಹುದುದೆಂಬ ನಂಬಿಕೆಯಿತ್ತು. ಸಾಂಪ್ರದಾಯಿಕವಾಗಿ ಬತ್ತದ ಕೃಷಿ ನಂಬಿಕೊಂಡು ಬಂದಿರುವವರ ಮನಃಸ್ಥಿತಿ ಬದಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತಾಲ್ಲೂಕಿನಲ್ಲಿ ಆಹಾರ ಉತ್ಪಾದನೆಯ ಕೊರತೆ ತಲೆದೋರುವುದು ನಿಶ್ಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.