ಬುಧವಾರ, ಮೇ 19, 2021
24 °C

`ತ್ರೀ-ಡಿ' ತಾಂತ್ರಿಕತೆಯಿಂದ ಕಣಗಾತ್ರದ ಬ್ಯಾಟರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ತ್ರೀ ಡಿ ಪ್ರಿಂಟಿಂಗ್ (ಮೂರು ಆಯಾಮದ ಮುದ್ರಣ) ತಂತ್ರಜ್ಞಾನ ಬಳಸಿ ಅತ್ಯಂತ ಚಿಕ್ಕದಾದ, ಅಂದರೆ ಮರಳ ಕಣದಷ್ಟು ಗಾತ್ರದ ಲೀಥಿಯಮ್- ಅಯಾನ್ ಬ್ಯಾಟರಿಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿರುವುದಾಗಿ ಅಮೆರಿಕ ಸಂಶೋಧಕರು ಹೇಳಿಕೊಂಡಿದ್ದಾರೆ.ವೈದ್ಯಕೀಯ ಕ್ಷೇತ್ರದಿಂದ ಹಿಡಿದು ಸಂವಹನ ಕ್ಷೇತ್ರದವರೆಗೆ ವಿವಿಧ ರಂಗಗಳಲ್ಲಿ ಬಳಕೆಯಾಗುವ ಅತಿ ಚಿಕ್ಕ ಸಾಧನಗಳಿಗೆ ವಿದ್ಯುತ್ ಪೂರೈಸಲು ಇದರಿಂದ ಅನುಕೂಲವಾಗುತ್ತದೆ; ಅಲ್ಲದೇ, ಕಣಗಾತ್ರದ ಬ್ಯಾಟರಿಗಳಿಲ್ಲದೆ ನೆನೆಗುದಿಗೆ ಬಿದ್ದಿರುವ ಎಷ್ಟೇ ಪ್ರಯೋಗಗಳಿಗೆ ಮರುಚಾಲನೆ ನೀಡಲು ಕೂಡ ಇದು ಅವಕಾಶ ಮಾಡಿಕೊಡುತ್ತದೆ ಎಂದು  ವಿಜ್ಞಾನಿಗಳು  ಅಭಿಪ್ರಾಯಪಟ್ಟಿದ್ದಾರೆ.`ತ್ರೀ ಡಿ ತಾಂತ್ರಿಕತೆಯಿಂದ ಕಣಗಾತ್ರದ ಬ್ಯಾಟರಿ ಅಭಿವೃದ್ಧಿಪಡಿಸಲು ಸಾಧ್ಯ ಎಂಬುದನ್ನಷ್ಟೇ ನಾವು ಸಾಧಿಸಿ ತೋರಿಸಿಲ್ಲ; ಅದನ್ನು, ಅತ್ಯಂತ ನಿಖರವಾಗಿಯೂ ಮಾಡಿದ್ದೇವೆ' ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಜೆನ್ನಿಫರ್ ಲೂಯಿಸ್ ಹೇಳಿದ್ದಾರೆ.ಇವುಗಳ ಗಾತ್ರ ಮರಳ ಕಣದಷ್ಟೇ ಆದರೂ ಕಾರ್ಯದಕ್ಷತೆಯೇನೂ ಕಡಿಮೆ ಇಲ್ಲ. ಇವುಗಳ ವಿದ್ಯುದಾವೇಶ ವೇಗ, ವಿದ್ಯುದಾವೇಶ ಉತ್ಸರ್ಜನಾ ವೇಗ, ಆವರ್ತ ಅವಧಿ ಮತ್ತು ಶಕ್ತಿ ಸಾಂದ್ರತೆಗಳೆಲ್ಲವೂ ವಾಣಿಜ್ಯ ಬ್ಯಾಟರಿಗಳ ಪ್ರಮಾಣದಷ್ಟೇ ಇದೆ ಎಂದು ತಜ್ಞರು ಹೇಳಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.