ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಯ ಮುಖ್ಯ ಪರೀಕ್ಷೆಯ ಮೌಲ್ಯಮಾಪನವೂ ದಾರಿ ತಪ್ಪಿರುವುದರ ಬಗ್ಗೆ ವರದಿಯಾಗಿದೆ. ತಮಗೆ ಬೇಕಾದವರನ್ನು ಸಂದರ್ಶನಕ್ಕೆ ಕರೆತರುವಲ್ಲಿ ಯಶಸ್ವಿಯಾಗಿರುವ ಕೆ.ಪಿ.ಎಸ್.ಸಿ ಮಹಾಶಯರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವೆಸಗಿದ್ದಾರೆ.

ಹೀಗಾಗಿ 362 ಕೆ.ಎ.ಎಸ್ ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲಿ. ಬರಿ ಒಂದು ವಿಷಯದವರೇ ಹೆಚ್ಚು ಆಯ್ಕೆಗೊಳ್ಳುತ್ತಿರುವ ಅವೈಜ್ಞಾನಿಕ ಕ್ರಮ ತಪ್ಪಲಿ. ಎಲ್ಲಾ ವಿಷಯಗಳ ಪ್ರಶ್ನೆಪತ್ರಿಕೆಗಳು ಸಮಾನ ಕ್ಲಿಷ್ಟತೆಯಡಿ ರೂಪುಗೊಳ್ಳಲಿ.

ಈಗಾಗಲೇ ಮೌಲ್ಯಮಾಪನ ಮಾಡಿ ನೀಡಿರುವ ಅಂಕಗಳನ್ನು ಅನೂರ್ಜಿತಗೊಳಿಸಿ ನಂಬಲರ್ಹ ತಂಡದಿಂದ ಯಾವುದೇ ಒತ್ತಡವಿಲ್ಲದೆ ಮೌಲ್ಯಮಾಪನ ಮಾಡಿಸಿ ಹೊಸದಾಗಿ ಸಂದರ್ಶನಕ್ಕೆ ಪಟ್ಟಿ ಸಿದ್ಧಗೊಳಿಸಬೇಕು. ಅನರ್ಹರಿಗೆ ಮಣೆ ಹಾಕಿದರೆ ದಕ್ಷ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬರ ಬರುತ್ತದೆ.

ಇಂತಹವರು ಸೇವೆಗೆ ನುಸುಳಿದರೆ ಇಡೀ ಆಡಳಿತ ವ್ಯವಸ್ಥೆ ಹದಗೆಡುತ್ತದೆ. ಹೀಗಾಗಿ ಈಗ ಸಂದರ್ಶನಕ್ಕೆ ಆಯ್ಕೆಗೊಂಡಿರುವವರಲ್ಲಿ ಎಷ್ಟು ಜನ ಪ್ರತಿಭೆಯಿಂದ ಅಂಕ ಗಳಿಸಿದ್ದಾರೆ? ಎಷ್ಟು ಪ್ರತಿಭಾವಂತರು ತುಳಿತಕ್ಕೊಳಗಾಗಿ ಮೂಲೆ ಸೇರಿದ್ದಾರೆ? ಕೆಪಿಎಸ್ಸಿ ಇರುವುದು ಇಂತಹ ಘನಕಾರ್ಯಗಳನ್ನು ಮಾಡಲಿಕ್ಕಾಗಿಯೇ? ಮೌಲ್ಯಮಾಪನ ಹೀಗೆ ಅಡ್ಡದಾರಿ ಹಿಡಿದರೆ ಪ್ರತಿಭಾವಂತರನ್ನು ಕಾಯುವವರಾದರೂ ಯಾರು?
-ಪ್ರಕಾಶ್ ಹುಳಿಯಾರ್ ಆನೇಕಲ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.