ಶುಕ್ರವಾರ, ಮೇ 20, 2022
23 °C

ದರ್ಶನ ದರ್ಪಣ / ಕೃಷಿ ದರ್ಪಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರ ಕಲಾವೈಭವ

‘ ವಿಜಯನಗರದ ಭಿತ್ತಿ ಚಿತ್ರಕಲೆ’ (ಲೇ: ಕೆ.ವಿ. ಸುಬ್ರಹ್ಮಣ್ಯಂ) ಲೇಖನ ವಿಜಯನಗರ ಕಾಲದ ಚಿತ್ರಕಲಾ ವೈಭವವನ್ನು ನೆನಪಿಸಿತು. ಇತಿಹಾಸದ ನೆನಪುಗಳನ್ನು ತಂದು ಕೊಡುವ ಸ್ಮಾರಕಗಳನ್ನು ಭವಿಷ್ಯದ ಪೀಳಿಗೆಗಾಗಿ ಸಂರಕ್ಷಿಸಬೇಕು. ಇದಕ್ಕೆ ಸರ್ಕಾರದ ಬೆಂಬಲದ ಅಗತ್ಯವಿದೆ.

- ಸರ್ಪಭೂಷಣ, ಅರಸೀಕೆರೆ.ಚಿತ್ರ ಕಲಾ ಪರಂಪರೆ


ಕೆ.ವಿ. ಸುಬ್ರಹ್ಮಣ್ಯಂ ಅವರ ಲೇಖನದಲ್ಲಿ ವಿಜಯನಗರ ಕಾಲದ ಭಿತ್ತಿ ಚಿತ್ರಕಲೆಯ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ. ಲೇಖನ ಓದಿ ಸಂತಸವಾಯಿತು. ಕಲೆ ಮತ್ತು ಸಂಸ್ಕೃತಿಯ ಪ್ರತಿಬಿಂಬದಂತಿರುವ ಭಿತ್ತಿ ಚಿತ್ರಕಲೆಯನ್ನು ರಕ್ಷಿಸಬೇಕು.

- ಅಭಿನಂದನ್ ಎನ್. ಅಚ್ಮನಿ, ರಾಣೆಬೆನ್ನೂರು.ಉಕ್ಕಿ ಹರಿದ ಭಕ್ತಿ 

‘ಶಕ್ತಿ ಕ್ಷೇತ್ರ ಕೊಲ್ಲೂರು’ (ಲೇ: ರಾಮಕೃಷ್ಣ ಸಿದ್ರಪಾಲ) ಲೇಖನ ಓದುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಭಕ್ತಿ ಭಾವ ಮೂಡಿತು. ಲೇಖನ ಕೊಲ್ಲೂರಿನ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.

- ವಿ. ಹೇಮಂತ ಕುಮಾರ್, ಬೆಂಗಳೂರು.ವಿಶಿಷ್ಟ ಜಾತ್ರೆ

ನಾಗರಾಜ ಹಬ್ಬು ಅವರ ‘ರಂಗೋಲಿ ಜಾತ್ರೆ’ ಲೇಖನ ಚೆನ್ನಾಗಿತ್ತು. ಇದು ನಿಜಕ್ಕೂ ವಿಶಿಷ್ಟ ಜಾತ್ರೆ. ರಾಜಕೀಯ ಮುಖಂಡರು, ಸಾಮಾಜಿಕ ಕ್ಷೇತ್ರದ ಗಣ್ಯರು, ಸಿನಿಮಾ ನಟ-ನಟಿಯರು, ಕ್ರಿಕೆಟ್ ತಾರೆಯರನ್ನು ರಂಗೋಲಿ ಕಲೆಯಲ್ಲಿ ಮೂಡಿಸುವುದು ಅಚ್ಚರಿಯ ಸಂಗತಿ.

- ಡಿ. ಯೋಗೇಶ್, ಓಬತ್ಲಾನಹಳ್ಳಿ.ಅಭಿನಂದನೀಯ

‘ಸಾಧನೆಗೆ ಸಂದ ಪ್ರಶಸ್ತಿ’ (ಲೇ: ಜಿ. ಚಂದ್ರಕಾಂತ) ಲೇಖನ ಅರ್ಥಪೂರ್ಣವಾಗಿತ್ತು. ಬರಡು ಭೂಮಿಯನ್ನು ಫಲವತ್ತಾದ ನೀರಾವರಿ ಭೂಮಿಯನ್ನಾಗಿ ಪರಿವರ್ತಿಸಿರುವ ಭೀಮಹಳ್ಳಿಯ ರೈತ ಶಿವಲಿಂಗಪ್ಪ ಚೋರಗತ್ತಿ ಅವರ ಪ್ರಯತ್ನ ಅಭಿನಂದನೀಯ.

- ನಾಗೇಂದ್ರಕುಮಾರ್ ನಂಜನಗೂಡುಪ್ರಶಂಸಾರ್ಹ

ಹೂವಿನ ನಡುವೆ ತರಕಾರಿಗಳನ್ನು ಬೆಳೆಯುವ ಪ್ರಯೋಗದಲ್ಲಿ ಯಶಸ್ಸನ್ನು ಸಾಧಿಸಿರುವ ಸುಳ್ಯದ ಜಯಂತಿ ಅವರ ಪ್ರಯತ್ನ ಪ್ರಶಂಸಾರ್ಹ.

- ಎಂ.ಎಸ್. ಲಕ್ಷ್ಮಣ್, ದಾವಣಗೆರೆಸಕಾಲಿಕ

‘ಕಡಿಮೆ ಖರ್ಚಿನಲ್ಲಿ ಸಮೃದ್ಧ ಫಸಲು’ (ಲೇ: ಎನ್.ಎಂ. ನಟರಾಜು) ಲೇಖನ ಸಕಾಲಿಕ. ನಾಗಸಂದ್ರದ ಚೆನ್ನಬಸಣ್ಣ ಅವರು ಕಡಿಮೆ ನೀರು ಬಳಸಿಕೊಂಡು ಅಡಿಕೆ ಬೆಳೆಯಲ್ಲಿ ಹೆಚ್ಚಿನ ಫಸಲು ಪಡೆಯುತ್ತಿರುವುದು, ಇತರರಿಗೆ ಮಾದರಿಯಾಗಿದೆ.

- ಪಿ. ದಿನೇಶ್, ಸುಗ್ಗನಹಳ್ಳಿಸಂಪೂರ್ಣ ಮಾಹಿತಿ

ಸಹನಾ ಕಾಂತಬೈಲು ಅವರ ಮರತೊಂಡೆ ಕುರಿತ ಲೇಖನ ಚೆನ್ನಾಗಿದೆ. ಮರತೊಂಡೆ ಇರುವುದು ನನಗೆ ಗೊತ್ತಿರಲಿಲ್ಲ.

- ಹಾಲೇಶ್, ಹೊನ್ನಾಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.