ದೇವದುರ್ಗ: ದಶಕ ಕಳೆದರೂ ರೈತರ ಜಮೀನುಗಳಿಗೆ ನೀರು ಇಲ್ಲದೆ ವರ್ಷ ಪೂರ್ತಿ ಹನಿ ನೀರಿಗಾಗಿ ರೈತ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಯಾರು ಹೊಣೆಗಾರರು ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ.

ನಾರಾಯಣಪೂರ ಬಲದಂಡೆ ಬೃಹತ್ ಯೋಜನೆಯ ಕರ್ಮಕಾಂಡಕ್ಕೆ ಯಾರು ಹೊಣೆಗಾರರು ಎಂಬ ಪ್ರಶ್ನೆಗೆ ಒಬ್ಬರಿಗೊಬ್ಬರು ಬೆನ್ನು ಮುಟ್ಟಿ ನೋಡಿಕೊಳ್ಳುವಂತ ಪರಿಸ್ಥಿತಿ ಇದೆ. ಕೇವಲ ಹತ್ತು ವರ್ಷದ ಹಿಂದೆ ನಡೆದ ಯೋಜನೆಯಲ್ಲಿ ನಡೆದ ಭಾರೀ ಭಷ್ಟಾಚಾರ ಮತ್ತು ಕಳಪೆ ಕಾಮಗಾರಿಗೆ ಒಂದು ಕಡೆ ಇಲಾಖೆಯ ಅಧಿಕಾರಿ, ಗುತ್ತಿಗೆದಾರ ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳು ಮುಖ್ಯವಾಗಿ ಕಾರಣರಾದರೆ, ಇನ್ನೊಂದು ಕಡೆ ರೈತ ಪರ ಸಂಘಟನೆಗಳು ಎಂದು ಹೇಳಿಕೊಳ್ಳುತ್ತಿರುವ ಮುಖಂಡರು ಇದಕ್ಕೆ ಹೊರತಾಗಿಲ್ಲ.

ಎನ್ಆರ್ಬಿಸಿ ಯೋಜನೆಗಾಗಿ ರೂಪಿಸಲಾಗಿದ್ದ ಹೋರಾಟ ಸಮಿತಿ ಕಾಮಗಾರಿ ಆರಂಭವಾದ ಕೆಲವೇ ದಿನದಲ್ಲಿ ಕಾಣೆಯಾಗಿತ್ತು. ಇದೇ ಹೋರಾಟ ಸಮಿತಿ ಮುಖಂಡರು ಯೋಜನೆ ರೂಪಿಸುವಲ್ಲಿ ಎಷ್ಟೋ ಶ್ರಮವಹಿಸಿದ್ದರೂ ಕಾಮಗಾರಿ ನಿರ್ವಹಣೆಯಲ್ಲಿ ಎಚ್ಚರ ವಹಿಸಿದ್ದರೆ ಕಳಪೆ ಕಾಮಗಾರಿಗೆ ಅವಕಾಶ ಇರುತ್ತಿರಲಿಲ್ಲ ಮತ್ತು ಇಂದು ರೈತರು ನೀರಿಗಾಗಿ ಹೋರಾಟ ಮಾಡುವಂತ ಪರಿಸ್ಥಿತಿ ಬರುತ್ತಿರಲಿಲ್ಲ.

ಎಚ್.ಡಿ. ದೇವೇಗೌಡ ಮುಖ್ಯಮಂತ್ರಿಯಾಗುವ ಆರು ತಿಂಗಳುಗಳ ಮೊದಲು ನಾರಾಯಣಪೂರ ಬಲದಂಡೆ ಯೋಜನೆ ಬಗ್ಗೆ ನೀಡಿದ ಭರವಸೆಯಂತೆಯೇ 1994ರಲ್ಲಿ ಮುಖ್ಯಮಂತ್ರಿಯಾದ ನಂತರ ಯೋಜನೆಯ ಕಾಮಗಾರಿಗೆ ಅಡಿಗಲ್ಲು ಹಾಕುವ ಮೂಲಕ ರೈತರ ನೂರಾರು ವರ್ಷದ ಆಸೆಗೆ ಕೊನೆಗೂ ಈಡೇರಿಸುವಲ್ಲಿ ಅವರು ಯಶಸ್ವಿಯಾದರು.

ಸತತ ಬರಗಾಲ, ಹನಿ ನೀರಿಗಾಗಿ ಪರದಾಡಿದ ಸನ್ನಿವೇಶ ನೆನಪಿಸಿಕೊಂಡಿದ್ದ ರೈತ, ಯೋಜನೆಯಂತೆ ಕಾಲುವೆ ನಿರ್ಮಿಸಿ ರೈತರ ಜಮೀನುಗಳಿಗೆ ನೀರು ಹರಿಬಿಟ್ಟಿದ್ದರೇ ಅದನ್ನು ಕಂಡು ಉಬ್ಬಿ ಹೋಗುವ ಜತೆಗೆ ತಾನು ಬಿತ್ತಿದ್ದು ಹೊನ್ನಾಗಲಿದೆ ಎಂದೇ ರೈತ ಭಾವಿಸಿದ್ದ, ಆದರೆ ಇಲಾಖೆಯ ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯಯಿಂದಾಗಿ ತಾಲ್ಲೂಕಿನಲ್ಲಿ ಇನ್ನೂ ಅದೆಷ್ಟೋ ಕಾಮಗಾರಿಗಳು ನಡೆಯದೆ ನೆನೆಗುದಿಗೆ ಬಿದ್ದಿರುವುದು ಕಂಡು ಬಂದಿದೆಯಾದರೂ ಈ ಬಗ್ಗೆ ಸರ್ಕಾರವಾಗಲಿ ಅಥವಾ ಸ್ಥಳೀಯ ರೈತ ಪರ ಮುಖಂಡರೂ ಎಂದೂ ಚಿಂತಿಸಿದವರಲ್ಲ. ಬೆಳಗಾದರೆ ಸಾಕು ಸ್ವಾರ್ಥ ರಾಜಕೀಯಕ್ಕಾಗಿ ರೈತರನ್ನು ಬಳಸಿಕೊಳ್ಳುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಅದೇ ರೈತನ ಜಮೀನುಗಳಿಗೆ ನೀರು ಹರಿಸುವ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಎನ್ಆರ್ಬಿಸಿ ಯೋಜನೆಯನ್ನು 0ದಿಂದ 157ಕಿಮೀವರೆಗೂ ಮುಖ್ಯ ಕಾಲುವೆಯ ವಿಸ್ತರಣೆಯನ್ನು ರೂಪಿಸಿ ಅದಕ್ಕೆ 3500ಕ್ಯೂಸೆಕ್ ನೀರಿನ ಸಾಮರ್ಥ್ಯ ಕಲ್ಪಿಸಲಾಗಿದೆ. ‘ಎ’ ಸ್ಕಿಮ್ ಯೋಜನೆಯಲ್ಲಿ 0ದಿಂದ 95 ಕಿಮೀವರೆಗೆ ಅಂದರೆ ಲಿಂಗಸೂಗೂರು ತಾಲ್ಲೂಕು 0ದಿಂದ 8ನೇ ಉಪಕಾಲುವೆವರೆಗೆ ಮತ್ತು ದೇವದುರ್ಗ ತಾಲ್ಲೂಕು 9ನೇ ಉಪ ಕಾಲುವೆಯಿಂದ 18ನೇ ಉಪ ಕಾಲುವೆವರೆಗೆ ಮಾತ್ರ ಮುಖ್ಯ ಕಾಲುವೆ ಕಾಮಗಾರಿ ಮುಗಿದಿದ್ದು, ಬಾಕಿ ಉಳಿದ 95ರಿಂದ 157 ಕಿಮೀ ಕಾಮಗಾರಿಯನ್ನು ‘ಬಿ’ಸ್ಕಿಮ್ ಯೋಜನೆಯಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಇದಕ್ಕೆ ಮುಖ್ಯ ಕಾರಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ಇಂದು ರಾಯಚೂರು ತಾಲ್ಲೂಕಿನ ಸಾವಿರಾರು ಜನ ರೈತರು ನೀರಾವರಿ ಯೋಜನೆಯಿಂದ ವಂಚಿತಗೊಂಡಿದ್ದಾರೆ. ಅಂದೇ ರೈತ ಪರ ಸಂಘಟನೆಗಳು ಕೂಡಲೇ ಎಚ್ಚೆತ್ತುಗೊಂಡು ಹೋರಾಟಕ್ಕೆ ಮುಂದಾಗಿದ್ದರೆ ಇಂದು ಪರಿಸ್ಥಿತಿ ಬರುತ್ತಿರಲಿಲ್ಲ. ತಾಲ್ಲೂಕಿನ ವಿವಿಧ ರಾಜಕೀಯ ಪಕ್ಷದಲ್ಲಿನ ಗಣ್ಯರು ಅಂದು ಗುತ್ತಿಗೆದಾರರ ರಕ್ಷಣೆಗೆ ನಿಂತ ಕಾರಣಕ್ಕೆ ಇಂದು ಎನ್ಆರ್ಬಿಸಿ ಯೋಜನೆಯ ಕಾಮಗಾರಿಗಳು ದಶಕ ಕಳೆದರೂ ಮುಗಿಯುತ್ತಿಲ್ಲ. ಎಲ್ಲರೂ ಸೇರಿ ಮುಗ್ಧ ರೈತರನ್ನು ಬಲಿಕೊಟ್ಟಂತಾಗಿದೆ ವಿನಾ ರೈತರ ಕಷ್ಟವನ್ನು ಮಾತ್ರ ಯಾರೊಬ್ಬರೂ ಕೇಳದಂತಾಗಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.

ನೀರಿಗಾಗಿ ಹೋರಾಟ:
ನಾರಾಯಣಪೂರ ಅಣೆಟ್ಟೆಯಲ್ಲಿ ಎನ್ಆರ್ಬಿಸಿಗಾಗಿ ಪ್ರತಿ ವರ್ಷ ಒಟ್ಟು 19 ಟಿಎಂಸಿ ನೀರು ಮೀಸಲಿಡಲಾಗಿದ್ದರೂ, ರೈತರ ಜಮೀನಿಗೆ ಮಾತ್ರ ಸರಿಯಾಗಿ ನೀರು ಮುಟ್ಟುತ್ತಿಲ್ಲ. ಒಂದು ಕಡೆ ಇಲಾಖೆಯವರು ನೀರು ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರೆ ಮತ್ತೊಂದು ಕಡೆ ನೀರು ಬಳಕೆ ಮಾಡಿಕೊಳ್ಳುವ ರೈತರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಇಬ್ಬರ ನಿರ್ಲಕ್ಷ್ಯದಿಂದ ಪ್ರತಿನಿತ್ಯ ಸುಮಾರು 3500 ಕ್ಯೂಸೆಕ್ ನೀರು ವಿನಾ ಕಾರಣ ಹರಿದು ನದಿ ಸೇರುವಂತ ಪರಿಸ್ಥಿತಿ ಇದೆ. ನದಿಗೆ ಹರಿದು ಹೋಗುವ ಇದೇ ನೀರನ್ನು ಜುರಾಲಾ ಅಣೆಕಟ್ಟೆಯಲ್ಲಿ 3500 ಕ್ಯೂಸೆಕ್ ನೀರಿನ ಸಾಮರ್ಥ್ಯ ಇರುವ ಜನರೇಟರ್ ಪ್ರತಿನಿತ್ಯ ವಿದ್ಯುತ್ ಉತ್ಪಾದನೆ ಮಾಡುತ್ತಿರುವುದನ್ನು ಗಮನಿಸಿದರೆ ಲಿಂಗಸೂಗೂರು ಮತ್ತು ದೇವದುರ್ಗ ತಾಲ್ಲೂಕಿನ ಇಲಾಖೆಯ ಅಧಿಕಾರಿಗಳು ಮತ್ತು ರೈತರು ಎಷ್ಟೋ ಜಾಣರು ಎಂಬುವುದನ್ನು ಕಾಣಬಹುದಾಗಿದೆ.

ನೀರು ನಿರ್ವಹಣೆ ಕುರಿತು ಇಲಾಖೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಮತ್ತು ಇದ್ದ ನೀರನ್ನು ರೈತರು ಸರಿಯಾಗಿ ಬಳಕೆ ಮಾಡಿಕೊಂಡಾಗ ಮಾತ್ರ ವರ್ಷ ಪೂರ್ತಿ ನಡೆಸಲಾಗುವ ನೀರಿಗಾಗಿ ಹೋರಾಟವನ್ನು ತಡೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.