ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಟಿ20 ಪಂದ್ಯದಲ್ಲಿ ಹಸ್ತಲಾಘವ ಕುರಿತಾದ ಚರ್ಚೆ ಬಗ್ಗೆ ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಹೇಳಿಕೆ ನಕಲಿ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಪಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಪಾಕಿಸ್ತಾನದ ವಿರುದ್ಧ ಆಡದಂತೆ ಅಭಿಮಾನಿಗಳಿಂದ ಭಾರಿ ಆಕ್ರೋಶದ ನಡುವೆಯೂ ಪಂದ್ಯ ನಡೆದಿತ್ತು. ಈ ನಡುವೆ ಪಂದ್ಯದ ಆರಂಭ ಮತ್ತು ಅಂತ್ಯದಲ್ಲಿ ಪಾಕಿಸ್ತಾನದ ಕ್ರಿಕೆಟಿಗರ ಜೊತೆ ಭಾರತದ ಆಟಗಾರರು ಹಸ್ತಲಾಘವ ಮಾಡಿರಲಿಲ್ಲ.

ಈ ಬಗ್ಗೆ ತರಹೇವಾರಿ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಸಹ ಒಂದು ಹೇಳಿಕೆ ನೀಡಿದ್ದಾರೆಂಬ ಪೋಸ್ಟ್ ಹರಿದಾಡಿತ್ತು. ಭಾರತದ ವಿರುದ್ಧ ಅದರಲ್ಲಿ ಪಾಂಟಿಂಗ್ ಕಿಡಿಕಾರಿರುವಂತೆ ಬರೆಯಲಾಗಿತ್ತು. ಭಾರತಕ್ಕೆ ದೊಡ್ಡ ಸೋಲಿನ ಮೂಲಕ ಈ ಪಂದ್ಯ ನೆನಪಿನಲ್ಲಿ ಉಳಿಯಲಿದೆ ಎಂದು ಪಾಂಟಿಂಗ್ ಹೇಳಿರುವುದಾಗಿ ನಕಲಿ ಪೋಸ್ಟ್ ಹಾಕಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಂಟಿಂಗ್, ನಾನು ಏಷ್ಯಾ ಕಪ್ ಕುರಿತಂತೆ ಯಾವುದೇ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

ನಾನು ನೀಡಿದ್ದೇನೆಂಬಂತೆ ಕೆಲವು ಹೇಳಿಕೆಗಳ ಕುರಿತಾದ ಪೋಸ್ಟ್ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ದಯವಿಟ್ಟು ತಿಳಿದುಕೊಳ್ಳಿ, ನಾನು ಆ ಹೇಳಿಕೆಗಳನ್ನು ನೀಡಿಲ್ಲ.ಏಷ್ಯಾ ಕಪ್ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದಿದ್ದಾರೆ.

ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತ್ತು.

ಭಾರತ ಹಸ್ತಲಾಘವ ಮಾಡದೇ ಇರುವುದರಿಂದ ಐಸಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಪಿಸಿಬಿ, ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ವಜಾ ಮಾಡಬೇಕೆಂದು ಐಸಿಸಿಗೆ ಅಧಿಕೃತ ದೂರು ದಾಖಲಿಸಿತ್ತು. ಆದರೆ, ಪಾಕಿಸ್ತಾನದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.