ಗುರುವಾರ , ಮೇ 19, 2022
24 °C

ದಾರಿ ತೋರಿದ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಮೊನ್ನೆ ಯಾವುದೋ ಕೆಲಸದ ನಿಮಿತ್ತ ದತ್ತಾತ್ರೇಯ ನಗರಕ್ಕೆ ಹೋಗಬೇಕಾಯಿತು. ಸಂಪೂರ್ಣ ವಿಳಾಸ ಇದ್ದರೂ ದಿನದಿನಕ್ಕೆ ತಲೆಎತ್ತುತ್ತಿರುವ ಉಪನಗರಗಳ ಪರಿಚಯ ಇಲ್ಲದಿದ್ದುದರಿಂದ ಹೊಸಕೆರೆಹಳ್ಳಿಯವರೆಗೆ ಬಸ್‌ನಲ್ಲಿ ಹೋಗಿ ಅಲ್ಲಿಂದ ಆಟೊದಲ್ಲಿ ಹೋಗೋಣವೆಂದು ಅಲ್ಲೇ ನಿಂತಿದ್ದ ಆಟೊ ವಿಚಾರಿಸಿದಾಗ ಮೊಬೈಲ್‌ನಲ್ಲಿ ಮಾತನಾಡುವುದರಲ್ಲಿ ವ್ಯಸ್ತನಾಗಿದ್ದ ಆತ ನನ್ನ ಕಡೆ ತಿರುಗಿಯೂ ನೋಡದೆ ಬರುವುದಿಲ್ಲವೆಂದು ತಲೆಯಾಡಿಸಿದ.ವಿಧಿಯಿಲ್ಲದೆ ಇನ್ನೂ ಹತ್ತು ಹೆಜ್ಜೆ ನಡೆದು ಇನ್ನೊಂದು ಆಟೊಗೆ ಕೈ ಮಾಡಿದೆ. ಆತ ವಿಳಾಸ ನೋಡಿ `ಸಾರ್ ನೀವು ಬರಲೇಬೇಕು ಅಂದ್ರೆ ಬರ‌್ತೀನಿ. ಮಿನಿಮಮ್ ಚಾರ್ಜ್ ಆಗುತ್ತೆ ಆದರೆ ಇಲ್ಲಿಂದ ಈ ವಿಳಾಸ ಸರಿಯಾಗಿ ಅರ್ಧ ಕಿಲೋಮೀಟರ್ ಸಹ ಆಗೋಲ್ಲ~ ಎಂದು ಹೇಳಿ ಹೋಗಬೇಕಾದ ದಾರಿ ಸಹ ತೋರಿಸಿದಾಗ, ಆಟೊದವರೆಲ್ಲಾ ಅಪ್ರಾಮಾಣಿಕರು, ಕರೆದ ಕಡೆ ಬರದೆ ಧಿಮಾಕು ತೋರಿಸುವವರು ಎಂದು ನಂಬಿದ್ದ ನನ್ನ ಅಭಿಪ್ರಾಯ ಬದಲಾಗಿ, ಆತನ ಸಹೃದಯತೆ ಪ್ರಾಮಾಣಿಕತೆಗಳಿಗೆ ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸಿ ಆತ ತೋರಿಸಿದ ದಾರಿ ಹಿಡಿದೆ. 

ಆಟೊ ಚಾಲಕರ ಕುರಿತು ದೂರುಗಳೇ ತುಂಬಿರುವ ನಗರವಿದು. ಅದಕ್ಕೆ ಅಪವಾದವೆಂಬಂತೆ ಬದುಕುವ ಅನೇಕ ಚಾಲಕರು ಇದ್ದಾರೆ. ಅಂಥವರು ನಿಮ್ಮ ಅನುಭವಕ್ಕೂ ಬಂದಿರಬಹುದು. ಆ ಕಥನವನ್ನು 350 ಪದಗಳ ಮಿತಿಯಲ್ಲಿ ಬರೆದು ಕಳುಹಿಸಿ. ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಬರವಣಿಗೆ ಇರಲಿ. ಇ-ಮೇಲ್: metropv@prajavani.co.in.  ವಿಳಾಸ: ಆಟೊ ಕತೆಗಳು, ಮೆಟ್ರೊ, ನಂ.75, ಎಂ.ಜಿ.ರಸ್ತೆ, ಬೆಂಗಳೂರು- 560 001

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.