ಸೋಮವಾರ, ಮೇ 23, 2022
30 °C

ದಾಸ ನಿರಂತರ ಸಂಗೀತೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಸ ನಿರಂತರ ಸಂಗೀತೋತ್ಸವ

ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಬಿಎಂಪಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರದೊಂದಿಗೆ ಇತ್ತೀಚೆಗೆ ದಿನವಿಡೀ ‘ದಾಸ ನಿರಂತರ ಸಂಗೀತೋತ್ಸವ’ ಹಮ್ಮಿಕೊಂಡಿತ್ತು. ವಿದುಷಿ ಸ್ನೇಹಾ ಹಂಪಿಹೊಳಿ ಅವರ ಕಂಠಸಿರಿಯಲ್ಲಿ ವಿಠ್ಠಲನ ಸ್ಮರಣೆಯಿಂದ ಉತ್ಸವ ಆರಂಭವಾಯಿತು. ನಂತರ ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿ, ಸ್ವರ ಸಂಗೀತಾಲಯ, ಭಾರದ್ವಾಜ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ದಾಸ ಸಾಹಿತ್ಯವನ್ನು ಪ್ರಸ್ತುತಪಡಿಸಿದರು.ನೃತ್ಯ ರೂಪಕಗಳು, ಮುಕುಂದ ಹಾವೇರಿ, ರಾಘವೇಂದ್ರ ಗುಡಿ, ಲತಾ ರಾಜೇಶ್ ಮುಂತಾದವರ ಗಾಯನಗಳು ಕೇಳುಗರನ್ನು ಸೆಳೆದವು. ವಿಶ್ವೇಶತೀರ್ಥರು, ಸಂತ ಭದ್ರಗಿರಿ ಅಚ್ಯುತದಾಸರು, ಪ್ರಹ್ಲಾದ್ ಗುರೂಜಿ ಹಾಜರಿದ್ದರು. ಎ.ಎಸ್. ಸದಾಶಿವಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಡಾ. ಶ್ಯಾಮಲಾ ಭಾವೆ, ರಾಜನಹಳ್ಳಿ ರಮಾನಂದ, ರಾಜೇಂದ್ರ ಪ್ರಸಾದ್, ವಿಠ್ಠಲರಾವ್ ಶೇಠ್, ಸೇನಾಪತಿ ಕಟಕೆ, ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.