ಡ್ರೈಫ್ರೂಟ್ಸ್ ಶಂಕರಪೋಳಿ

ಬೇಕಾಗುವ ಪದಾರ್ಥಗಳು: ಅರ್ಧ ಕಪ್ ಮೈದಾ ಹಿಟ್ಟು, ಅರ್ಧ ಕಪ್ ಗೋಧಿ ಹಿಟ್ಟು, 2 ಚಮಚ ಚಿರೋಟಿ ರವೆ, 10-12 ಬಾದಾಮಿ ಚೂರು, 10-12 ಗೋಡಂಬಿ ಚೂರು, ಕಾಲು ಕಪ್ ಕೊಬ್ಬರಿ, 8-10 ಖರ್ಜೂರ ಚೂರು, 2 ಚಮಚ ಗಸಗಸೆ, ಅರ್ಧ ಕಪ್ ಸಕ್ಕರೆ, ಚಿಟಿಕೆ ಉಪ್ಪು, ಕರಿಯಲು ತಕ್ಕಷ್ಟು ಎಣ್ಣೆ, 2 ಚಮಚ ತುಪ್ಪ.

ಮಾಡುವ ವಿಧಾನ: ಮೈದಾ ಹಿಟ್ಟು, ಗೋಧಿ ಹಿಟ್ಟು, ಚಿರೋಟಿ ರವೆಗೆ ಚಿಟಿಕೆ ಉಪ್ಪು ಮತ್ತು ನೀರು ಹಾಕಿ ಪೂರಿ ಹಿಟ್ಟನ ಹದಕ್ಕೆ ಕಲಸಿ 1 ಗಂಟೆ ಇಡಿ. ನಂತರ ಬಾಣಲೆಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಬಾದಾಮಿ ಚೂರು, ಗೋಡಂಬಿ ಚೂರು, ಕೊಬ್ಬರಿ, ಖರ್ಜೂರ, ಚೂರು ಗಸಗಸೆ ಹಾಕಿ ಸ್ವಲ್ಪ ಹುರಿದು ನೀರಿನ ಪಸೆ ಆರಿದ ಮೇಲೆ ಕೆಳಗಿಳಿಸಿ. ಸಕ್ಕರೆ ಹಾಕಿ ಬೆರೆಸಿ. ಮಾಡಿಟ್ಟ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆ ಮಾಡಿ ಪೂರಿ ಲಟ್ಟಿಸಿ. ಮೇಲಿನ ಡ್ರೈಪ್ರೂಟ್ಸ್ ಮಿಶ್ರಣ ಹಾಕಿ ಹರಡಿ ಕರಿಕಡುಬಿನಂತೆ ಮಡಚಿ ಕಾದ ಎಣ್ಣೆಗೆ ಹಾಕಿ, ಹದವಾದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ.

ಬಾಳೆ ಹಣ್ಣು ಜಾಮೂನ್
ಬೇಕಾಗುವ ಪದಾರ್ಥಗಳು: 1 ದೊಡ್ಡ ಪಚ್ಚ ಬಾಳೆ ಹಣ್ಣು, 1 ಪ್ಯಾಕೆಟ್ ಜಾಮೂನ್ ಮಿಕ್ಸ್, 2 ಕಪ್ ಸಕ್ಕರೆ, ಕರಿಯಲು ತಕ್ಕಷ್ಟು ಎಣ್ಣೆ, 1 ಚಮಚ ಏಲಕ್ಕಿ ಪುಡಿ, 1 ಚಮಚ ಬಾದಾಮಿ ಚೂರು.

ಮಾಡುವ ವಿಧಾನ: ಬಾಳೆ ಹಣ್ಣು ಚೆನ್ನಾಗಿ ಮಸೆದು, ಅದಕ್ಕೆ ಜಾಮೂನ್ ಮಿಕ್ಸ್ ಹಾಕಿ, ಉಂಡೆ ಕಟ್ಟಲು ಬರುವಷ್ಟು ಜಾಮೂನ್ ಮಿಕ್ಸ್ ಹಾಕಿ ಬೆರೆಸಿ. ಸಣ್ಣ ಉಂಡೆ ಮಾಡಿಡಿ. ಸಕ್ಕರೆ ಬಾಣಲೆಗೆ ಹಾಕಿ. ಸ್ವಲ್ಪ ನೀರು ಹಾಕಿ ಒಲೆಯ ಮೇಲಿಟ್ಟು ಎಳೆ ಪಾಕ ತಯಾರಿಸಿ ಮಾಡಿಟ್ಟ ಉಂಡೆಗಳನ್ನು ಒಂದೊಂದಾಗಿ ಕಾದ ಎಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಕರಿದು ತೆಗೆದು ಸಕ್ಕರೆ ಪಾಕಕ್ಕೆ ಹಾಕಿ. ಏಲಕ್ಕಿ ಪುಡಿ/ ಬಾದಾಮಿ ಚೂರಿನಿಂದ ಅಲಂಕರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.