ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನಿಂದ ಆಸ್ತಿ ತೆರಿಗೆಯಲ್ಲಿ ಮಾಡಿರುವ ಹೆಚ್ಚಳದ ಬಿಸಿ ಅವಳಿನಗರದ ಜನರನ್ನು ಬಿಸಿಲಿನ ಪ್ರಖರತೆಗಿಂತ ಹೆಚ್ಚಾಗಿ ಬಾಧಿಸಲು ಆರಂಭಿಸಿದೆ.

ಪ್ರಸಕ್ತ ಸಾಲಿನಿಂದ ಆಸ್ತಿ ತೆರಿಗೆಯಲ್ಲಿ ಶೇ 20ರಷ್ಟು ಏರಿಕೆ ಜೊತೆಗೆ ಘನತ್ಯಾಜ್ಯ ವಿಲೇವಾರಿ ಹಾಗೂ ವಾಹನಗಳ ಮೇಲಿನ ಮೂಲಸೌಲಭ್ಯ ಅಭಿವೃದ್ಧಿ ಉಪಕರವನ್ನೂ ಹೇರಿದ್ದರಿಂದ ಜನಸಾಮಾನ್ಯರು ಕಳೆದ ವರ್ಷಕ್ಕಿಂತ ದುಪ್ಪಟ್ಟು ತೆರಿಗೆಯನ್ನು ಈ ಸಲ ತುಂಬುವಂತಾಗಿದೆ. ಸಾಲದ್ದಕ್ಕೆ ಘನತ್ಯಾಜ್ಯ ವಿಲೇವಾರಿ ಉಪಕರವನ್ನು (ತಿಂಗಳಿಗೆ ರೂ 30 ರಂತೆ ವಾರ್ಷಿಕ ರೂ 360) ಕಳೆದ ವರ್ಷದಿಂದಲೇ ಪೂರ್ವಾನ್ವಯ ಆಗುವಂತೆ ಆಕರಿಸಲಾಗುತ್ತಿದೆ.

ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್ಎಎಸ್) ಯೋಜನೆ ಅಡಿಯಲ್ಲಿ ತೆರಿಗೆ ಪಾವತಿಸಲು ಹೋದ ಗ್ರಾಹಕರು, ವಲಯ ಕಚೇರಿಗಳಲ್ಲಿ ಹಾಕಿಕೊಡುವ ಲೆಕ್ಕಾಚಾರವನ್ನೆಲ್ಲ ನೋಡಿ ಬೆಚ್ಚಿಬೀಳುತ್ತಿದ್ದಾರೆ. ಕಳೆದ ಸಲ ರೂ 1,674 ತೆರಿಗೆ ಪಾವತಿಸಿದ ಶಿರೂರ ಪಾರ್ಕ್ ಪ್ರದೇಶದ ವ್ಯಕ್ತಿಯೊಬ್ಬರು ಈ ಬಾರಿ ರೂ 2,960 ತುಂಬುವಂತಾಗಿದೆ. ಹೆಸರಿಗೆ ಶೇ 20ರಷ್ಟು ತೆರಿಗೆ ಹೆಚ್ಚಳ ಇದಾಗಿದ್ದರೂ ವಾಸ್ತವವಾಗಿ ಶೇ 60ಕ್ಕಿಂತ ಅಧಿಕ ಪ್ರಮಾಣದ ತೆರಿಗೆ ಆಕರಿಸಲಾಗಿದೆ.

ಘನತ್ಯಾಜ್ಯ ವಿಲೇವಾರಿ ಮತ್ತು ವಾಹಗಳ ಮೇಲಿನ ಮೂಲಸೌಲಭ್ಯ ಅಭಿವೃದ್ಧಿ ಉಪಕರಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳು ಹಾಗೇ ಉಳಿದುಕೊಂಡಿದ್ದು, ಅಧಿಕಾರಿಗಳು ದಿಕ್ಕುತೋಚದೆ ಮನಬಂದಂತೆ ಲೆಕ್ಕ ಹಾಕುತ್ತಿದ್ದಾರೆ. ತೆರಿಗೆ ವಿವರಣಾ ಪಟ್ಟಿಯಲ್ಲಿ ಎಷ್ಟು ವಾಹನಗಳಿವೆ ಎಂಬುದನ್ನು ಮಾತ್ರ ನಮೂದಿಸಲು ಅವಕಾಶ ಇದ್ದು, ಪ್ರತಿ ವಾಹನದ ವಿವರವನ್ನು ಆ ಪಟ್ಟಿ ಒಳಗೊಂಡಿರುವುದಿಲ್ಲ. ಹೀಗಾಗಿ ತೆರಿಗೆದಾರರು ಯಾವ ವಾಹನದ ಉಪಕರವನ್ನು ತುಂಬಿದ್ದಾರೆ ಎಂಬುದು ಗೊತ್ತಾಗುವುದೇ ಇಲ್ಲ.

ನಾಲ್ಕು ಚಕ್ರ ವಾಹನಗಳಿಗೆ ರೂ 300, ದ್ವಿಚಕ್ರ ವಾಹನಗಳಿಗೆ ರೂ 50 ಉಪಕರ ಆಕರಿಸಲಾಗುತ್ತಿದೆ. ಆಸ್ತಿ ಒಬ್ಬ ವ್ಯಕ್ತಿ ಹೆಸರಿನಲ್ಲಿದ್ದು, ವಾಹನ ಇನ್ನೊಬ್ಬನ ಹೆಸರಿನಲ್ಲಿದ್ದರೆ ಉಪಕರ ಯಾರು ತುಂಬಬೇಕು ಎಂಬ ಸ್ಪಷ್ಟವಾದ ನಿರ್ದೇಶನವನ್ನೂ ನೀಡಲಾಗಿಲ್ಲ. ಹಾಗೆಯೇ ಬಾಡಿಗೆದಾರರ ವಾಹನಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೋ, ಬಿಡುವುದೋ ಎಂಬ ವಿಷಯವಾಗಿಯೂ ಖಚಿತ ಮಾಹಿತಿ ಇಲ್ಲ. ಕೆಲ ವಲಯ ಕಚೇರಿಗಳಲ್ಲಿ ಬಾಡಿಗೆದಾರರ ವಾಹನಗಳಿಗೂ ಉಪಕರ ತುಂಬಿಸಿಕೊಳ್ಳಲಾಗುತ್ತಿದೆ.

ತೆರಿಗೆ ಪಾವತಿದಾರರು ತಾವು ಯಾವುದೇ ವಾಹನ ಹೊಂದಿಲ್ಲ ಎಂಬ ಸುಳ್ಳು ಮಾಹಿತಿ ನೀಡಿದರೆ ಅಂತಹ ವ್ಯಕ್ತಿಗಳಿಂದ ಉಪಕರವನ್ನು ಪಡೆಯುವುದಿಲ್ಲ. ಇಂತಹ ಅವಾಂತರದ ವಿಷಯವಾಗಿ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪ್ರಾದೇಶಿಕ ಸಾರಿಗೆ ಕಚೇರಿಯಿಂದ ವಾಹನಗಳ ವಿವರ ಪಡೆದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸಬೂಬು ಅವರಿಂದ ಸಿಗುತ್ತದೆ.

`ವಾಹನಗಳಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಗೆ ಈಗಾಗಲೇ ರಸ್ತೆ ತೆರಿಗೆಯನ್ನು ತುಂಬಿದ್ದೇವೆ. ಮೂಲ ಸೌಕರ್ಯದ ಹೆಸರಿನಲ್ಲಿ ಪಾಲಿಕೆ ಮತ್ತೆ ಕರ ಆಕರಿಸುವುದು ತಪ್ಪಲ್ಲವೆ~ ಎಂದು ಪ್ರಶ್ನಿಸುವ ಗೋಕುಲ ರಸ್ತೆ ಮಹಾಲಕ್ಷ್ಮಿ ಲೇಔಟ್ನ ಕೊಟ್ರಬಸಪ್ಪ ಲಕ್ಕುಂಡಿ, `ಕೊನೆಯಪಕ್ಷ ನಗರದ ವಿವಿಧ ಪ್ರದೇಶದಲ್ಲಿ ಆಕರಿಸುವ ಪಾರ್ಕಿಂಗ್ ಶುಲ್ಕವನ್ನಾದರೂ ಕೈಬಿಡಬೇಕು~ ಎಂಬ ಆಗ್ರಹ ಪಡಿಸುತ್ತಾರೆ.

`ಮನೆ-ಮನೆಗೆ ಕಸ ಸಂಗ್ರಹಕ್ಕೆ ಬರುವ ಕಾರ್ಮಿಕರಿಗೆ ನಾವೀಗ ಪ್ರತಿ ತಿಂಗಳೂ ರೂ 20 ನೀಡುತ್ತಿದ್ದೇವೆ. ಘನತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ ಪಾಲಿಕೆ ತಿಂಗಳಿಗೆ ರೂ 30ರಂತೆ ಎರಡು ವರ್ಷದ ಉಪಕರ ಪಡೆದಿದೆ.

ಉಪಕರ ಸಂಗ್ರಹಿಸುವ ಹಕ್ಕು ಮಂಡಿಸುವ ಪಾಲಿಕೆ, ನಗರ ನೈರ್ಮಲ್ಯ ಕಾಪಾಡುವ ಕರ್ತವ್ಯವನ್ನೂ ನಿರ್ವಹಿಸಬೇಕಲ್ಲವೆ~ ಎಂದು ಕೇಳುತ್ತಾರೆ ಅಶೋಕನಗರದ ಪ್ರಕಾಶ ಪಾಟೀಲ. `ತೆರಿಗೆ ಪಡೆದ ಮೇಲೆ ಪಲಾಯನವಾದ ಮಾಡದೆ ಪಾಲಿಕೆ ತನ್ನ ಹೊಣೆಗಾರಿಕೆ ಪ್ರದರ್ಶಿಸಬೇಕು~ ಎನ್ನುವ ವಾದ ಅವರದ್ದಾಗಿದೆ.

`ವಲಯ ಕಚೇರಿಯಿಂದ ಅರ್ಜಿ ನಮೂನೆ ಪಡೆದು ಹಣ ಕಟ್ಟಲು ಹು-ಧಾ ಒನ್ ಕಚೇರಿಗೋ, ಬ್ಯಾಂಕಿಗೋ ತೆರಳಬೇಕು. ಅಲ್ಲಿಂದ ಮತ್ತೆ ವಲಯ ಕಚೇರಿಗೆ ಬಂದು ದಾಖಲೆ ಸಲ್ಲಿಸಬೇಕು. ಕರದಾತರಿಗೆ ಇಷ್ಟೊಂದು ಚಿತ್ರಹಿಂಸೆ ನೀಡಿದರೆ ಹೇಗೆ~ ಎಂಬ ಆಕ್ರೋಶ ವ್ಯಕ್ತಪಡಿಸುತ್ತಾರೆ ಮಂಜುನಾಥನಗರದ ಪಿ.ಎಲ್. ಅಥಣಿ. `ವಲಯ ಕಚೇರಿಯಲ್ಲೇ ಒಂದು ಕೌಂಟರ್ ತೆರೆಯಬೇಕು. ಇಲ್ಲದಿದ್ದರೆ ಹು-ಧಾ ಒನ್ ಕಚೇರಿಯಲ್ಲಿ ಎಲ್ಲ ದಾಖಲೆಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಬೇಕು~ ಎಂದು ಅವರು ಆಗ್ರಹಿಸುತ್ತಾರೆ.

`ದಾಖಲೆ ಸಲ್ಲಿಸಿದರೂ ಕೆಲವೊಮ್ಮೆ ಅವುಗಳನ್ನೆಲ್ಲ ಕಳೆದು ಅಧಿಕಾರಿಗಳು ನಮ್ಮನ್ನೇ ಸತಾಯಿಸುತ್ತಾರೆ~ ಎಂಬ ದೂರೂ ಗ್ರಾಹಕರಿಂದ ಕೇಳಿಬಂದಿದೆ. `ಏನೂ ಅರಿಯದ ಜನರಿಂದ ಪ್ರತಿ ಅರ್ಜಿ ತುಂಬಲು ರೂ 30 ಪಡೆಯಲಾಗುತ್ತದೆ. ಪಾಲಿಕೆಗೂ ಅರ್ಜಿ ತುಂಬುವವರಿಗೂ ಯಾವುದೇ ಸಂಬಂಧ ಇಲ್ಲವೆಂಬ ಉತ್ತರ ಅಧಿಕಾರಿಗಳಿಂದ ಸಿಗುತ್ತದೆ. ಆದರೆ, ಅಲ್ಲಿಯ ಸಿಬ್ಬಂದಿಯೇ ಇಂತಹ ವ್ಯವಹಾರ ನಡೆಸುತ್ತಾರೆ~ ಎಂಬ ಆಕ್ರೋಶವನ್ನು ಹೊರಹಾಕುತ್ತಾರೆ ನಿವೃತ್ತ ಉಪನ್ಯಾಸಕ ಎಂ.ಎಲ್. ಪೊಲೀಸ್ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.