ದೇವರ ಹಿಪ್ಪರಗಿ: ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ, ವಿಧಾನ ಸಭಾ ಮತಕ್ಷೇತ್ರದ ಮುಖ್ಯ ಕೇಂದ್ರ. ಇಲ್ಲಿನ ಜನಸಂಖ್ಯೆ 15 ಸಾವಿರಕ್ಕೂ ಅಧಿಕ. 12 ವಾರ್ಡ್ಗಳಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ರಮುಖ ಪಟ್ಟಣ ಇದು. ಆದರೆ, ಇಲ್ಲಿ ನೀರಿಗಾಗಿ ಹಾಹಾಕಾರ ಯಾವತ್ತೂ ಇದ್ದದ್ದೆ. ಈಗ ಬೇಸಿಗೆಯಲ್ಲಂತೂ ಜನತೆ ನೀರಿಗಾಗಿ ಪರದಾಡುತ್ತಿದ್ದಾರೆ.

ಹಗಲು ರಾತ್ರಿಯೆನ್ನದೆ ನೀರಿಗಾಗಿ ಸುತ್ತಾಡುವ ದು:ಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿ ಇಲ್ಲಿ ಸಾಮಾನ್ಯ.ಇಲ್ಲಿ ಹೆಸರಿಗೆ 80 ಕೊಳವೆಬಾವಿಗಳಿವೆ. 23 ಕೈ ಪಂಪ್ಗಳಿವೆ. ಮೂರು ತೆರೆದ ಬಾವಿಗಳಿವೆ. 38 ಕೊಳವೆ ಬಾವಿಗಳಲ್ಲಿನ ಜಲ ಸಂಪೂರ್ಣವಾಗಿ ಬತ್ತಿ ಹೋಗಿದ್ದರೆ, ಇನ್ನುಳಿದ ಕೊಳವೆ ಬಾವಿಗಳಿಂದ ಅರ್ಧ ಗಂಟೆ, ಒಂದು ಗಂಟೆ ಮಾತ್ರ ನೀರು ಹೊರ ಬಂದು ನಿಂತು ಹೋಗುತ್ತದೆ. ಕೈಪಂಪುಗಳಂತೂ ಎಲ್ಲವೂ ಬಂದ್ ಆಗಿವೆ.

ಇಲ್ಲಿ 35 ಸಾವಿರ ಲೀಟರ್ ಸಾಮರ್ಥ್ಯದ ಓವರ್ಹೆಡ್ ಟ್ಯಾಂಕ್, ಇನ್ನೊಂದು 20 ಸಾವಿರ ಸಾಮರ್ಥ್ಯದ ಟ್ಯಾಂಕ್ಗಳಿವೆ. ಕಳೆದ ನಾಲ್ಕು ತಿಂಗಳುಗಳಿಂದ ಈ ಟ್ಯಾಂಕ್ಗಳಿಂದ ನಲ್ಲಿಗಳಿಗೆ ನೀರು ಬರುವುದು ಸಂಪೂರ್ಣ ಸ್ಥಗಿತಗೊಂಡಿದೆ.

`ನೀರು ಕೊಡಿ ಎಂದು ಗ್ರಾಮ ಪಂಚಾಯಿತಿಯವರನ್ನು ಕೇಳಿದರೆ ನಮಗೆ ಯಾವುದೇ ಅಧಿಕಾರವಿಲ್ಲ. ನೀರು ನಿರ್ವಹಣೆ ಏನೆಲ್ಲ ಅಧಿಕಾರ ಸರ್ಕಾರ ರಚಿಸಿದ ಟಾಸ್ಕ್ಪೋರ್ಸ್ಗಿದೆ ಎಂದು ಅವರ ಕಡೆ ಬೆರಳು ಮಾಡುತ್ತಾರೆ~ ಎನ್ನುತ್ತಾರೆ ಗ್ರಾಮದ ಶಿವೂ ಕುಂಬಾರ.

`ನೀರು ಕೊಡಿ, ನೀರು ಕೊಡಿ ಎಂದು ಕಳೆದ ಐದು ಸಾಮಾನ್ಯ ಸಭೆಗಳಲ್ಲೂ ಕೇಳುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಾನೊಬ್ಬ ತಾ.ಪಂ. ಸದಸ್ಯೆ ಆಗಿದ್ದರೂ ನೀರಿಗಾಗಿ ಕೊಡ ಹಿಡಿದುಕೊಂಡು ಓಣಿ ಓಣಿಗೂ ತಿರುಗುತ್ತೇನೆ. ಅಷ್ಟಾಗಿ ನೀರು ಸಿಗದಿದ್ದರೆ ಖಾಸಗಿ ಟ್ಯಾಂಕರ್ನಿಂದ ಹಣ ಕೊಟ್ಟು ಕೊಡದ ಲೆಕ್ಕದಲ್ಲಿ ನೀರು ಖರೀದಿಸುತ್ತಿದ್ದೇನೆ. ಒಂದು ಕೊಡ ಕುಡಿಯುವ ಸಿಹಿ ನೀರಿಗೆ 5 ರೂಪಾಯಿ. ಬಳಕೆ ಮಾಡುವ ಒಂದು ಕೊಡ ಸವಳು ನೀರಿಗೆ ಎರಡು ರೂಪಾಯಿ ಕೊಟ್ಟು ಖರೀದಿಸಬೇಕಿದೆ~ ಎನ್ನುತ್ತಾರೆ ದೇವರ ಹಿಪ್ಪರಗಿ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮಿಬಾಯಿ ಮೆಟಗಾರ.

`ಟ್ಯಾಂಕರ್ಗಳ ಮೂಲಕ ನೀರು ಪೂರೈಸುವಂತೆ ಜಿಲ್ಲಾ ಆಡಳಿತಕ್ಕೆ ಸಾಕಷ್ಟು ಬಾರಿ ಪ್ರಸ್ತಾವ ಸಲ್ಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ~ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಒಲ್ಲದ ಗ್ರಾಮ ಪಂಚಾಯಿತಿಯವರೊಬ್ಬರು.

`ದೇವರ ಹಿಪ್ಪರಗಿ ಸಮೀಪದ ಇಂಗಳಗಿ ಊರಿನವರು ನೀರಿಗಾಗಿ ಊರೇ ಬಿಟ್ಟು ತೋಟಗಳಲ್ಲಿ ವಾಸ ಮಾಡುತ್ತಿದ್ದಾರೆ~ ಎನ್ನುತ್ತಾರೆ ಶಿವಾಜಿ ಮೆಟಗಾರ.ಈಗಾಗಲೇ ಶಾಸಕರ ಅನುದಾನದಲ್ಲಿ 20 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, 10 ಕೊಳವೆ ಬಾವಿಗಳಿಗೆ ನೀರು ಬಂದಿವೆ. ಆದರೆ, ಈಗ ಅವುಗಳಲ್ಲಿ ಕೇವಲ ನಾಲ್ಕು ಕೊಳವೆ ಬಾವಿಗಳು ಅರ್ಧಮರ್ಧ ಸ್ಥಿತಿಯಲ್ಲಿವೆ~ ಎಂದು ಗ್ರಾಮಸ್ಥರು ಹೇಳುತ್ತಾರೆ.

`ರಾಜೀವ್ ಗಾಂಧಿ ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆಯಡಿ ದೇವರ ಹಿಪ್ಪರಗಿ ಹೋಬಳಿಯ 48 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಶಾಸಕರು ತಿಳಿಸಿದ್ದಾರೆ. ಆದರೆ, ಅದಿನ್ನೂ ಕಾರ್ಯಾಚರಣೆಯಲ್ಲಿ ಬಂದಿಲ್ಲ~ ಎನ್ನುತ್ತಿದ್ದಾರೆ ಜನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.