ಶುಕ್ರವಾರ, ಜೂಲೈ 10, 2020
22 °C

ದೇಹದಾರ್ಢ್ಯ: ಮಧುಸೂದನ್‌ಗೆ ಟ್ರೋಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಹದಾರ್ಢ್ಯ: ಮಧುಸೂದನ್‌ಗೆ ಟ್ರೋಫಿ

ಮಂಡ್ಯ: ನಗರದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೈಸೂರು ಪವರ್‌ಹೌಸ್ ವ್ಯಾಯಾಮ ಶಾಲೆಯ ಆರ್. ಮಧುಸೂದನ್ ಅವರು `ಸ್ನೇಹ ಮಿಲನ ಟ್ರೋಫಿ~ ಗೆದ್ದುಕೊಂಡಿದ್ದಾರೆ.ನಾಗಮಂಗಲದ  ಮಲ್ಲಿಕಾರ್ಜುನ ಬೆಸ್ ಪೋಸರ್ ಪ್ರಶಸ್ತಿ ಪಡೆದರೆ, ಖಾದರ ಪಾಶಾ ಅವರು ಮೋಸ್ಟ್ ಮಸ್ಕುಲರ್ ಮ್ಯಾನ್ ಪ್ರಶಸ್ತಿ ಪಡೆದರು ಎಂದು ಸ್ಪರ್ಧೆ ಸಂಘಟಿಸಿದ್ದ ಸ್ನೇಹ ಮಿಲನ ಯುವ ಮಿತ್ರ ಬಳಗದ ಕಾರ್ಯದರ್ಶಿ ಎಂ.ಎಲ್.ತುಳಸೀಧರ್ ತಿಳಿಸಿದ್ದಾರೆ.ಸ್ಪರ್ಧೆಯಲ್ಲಿ ಐದು ಜಿಲ್ಲೆಗಳಿಂದ ಸುಮಾರು 72 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ನಾಲ್ಕು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ವಿವಿಧ ವಿಭಾಗ ಗಳಲ್ಲಿನ ಅಂತಿಮ ಫಲಿತಾಂಶ. (ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಿಸಿದವರನ್ನು ನೀಡಲಾಗಿದೆ.)ಶಾರ್ಟ್ ಕ್ಲಾಸ್:  ಖಾದರ್ ಪಾಶಾ, ಮೈಸೂರು; ಎಂ.ಆರ್. ವಿನಯ್‌ಕುಮಾರ್, ಮಂಡ್ಯ; ನಟರಾಜ್, ಮೈಸೂರು; ಸಿ.ಎಸ್.ಮಹೇಶ್,  ಮೈಸೂರು.ಟಾಲ್ ಕ್ಲಾಸ್: ಎಂ. ಮಲ್ಲಿ ಕಾರ್ಜುನ, ನಾಗಮಂಗಲ; ನಿಕಾರ್ ಅಲಿ, ಮೈಸೂರು; ಬಿ.ವಿ.ನವೀನ್, ಮಂಡ್ಯ; ಸೈಯದ್ ಸಲ್ಮಾಂ,ಮೈಸೂರು; ಕೆ.ಎಸ್.ವಿನೋದ್‌ಕುಮಾರ್, ಮಂಡ್ಯ.ಮೀಡಿಯಂಕ್ಲಾಸ್: ಆರ್. ಮಧುಸೂದನ್, ಮೈಸೂರು, ಉಮೇಶ್, ನಾಗಮಂಗಲ, ಎಂ.ಆರ್. ನದೀಮ್, ಮೈಸೂರು, ಶಾರುಕ್ ಖಾನ್, ಮೈಸೂರು.ಸೂಪರ್ ಟಾಲ್ ಕ್ಲಾಸ್: ಜಿ.ಗುರು, ಮೈಸೂರು, ಮಹ್ಮದ್ ಸಲ್ಮಾಂ, ಮೈಸೂರು, ಹುಸೇನ್, ಮೈಸೂರು, ವಿ.ನವೀನ್, ಮೈಸೂರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.