ಬೆಂಗಳೂರು: ‘ಮಹಿಳೆಯರು ಟಿ.ವಿ. ಧಾರಾವಾಹಿಗಳನ್ನು ನೋಡುತ್ತಾ ಮಂಕಾಗಿ ಹೋಗಿದ್ದಾರೆ. ಹೊರ ಜಗತ್ತಿನ ವಿದ್ಯಮಾನಗಳ ಬಗ್ಗೆಯಿರಲಿ, ಈಗಿನ ಲೋಕಸಭಾ ಚುನಾವಣೆ ಕುರಿತು ಕೇಳಿದರೂ ಅವರೇನೂ ಹೇಳಲಾರರು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಡಾ.ವಸು ಮಳಲಿ ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ‘ಮಹಿಳಾ ಪ್ರಗತಿ ಪರ ಚಿಂತನಾ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

‘ಮನೆ ನಿರ್ವಹಣೆ ಮತ್ತು ಉದ್ಯೋಗವನ್ನು ಒಂದು ವಿಶೇಷ ಹೊರೆ ಎಂದು ನಗರದ ಮಹಿಳೆಯರು ಭಾವಿಸಿದ್ದಾರೆ. ಮನೆಯ ಒಳಗೂ ಹೊರಗೂ ದುಡಿಯುವ ಬುಡಕಟ್ಟು ಮತ್ತು ಗ್ರಾಮೀಣ ಮಹಿಳೆಯರು ಅದನ್ನು ಒಂದು ಹೊರೆ ಎಂದು ಭಾವಿಸಿಲ್ಲ. ಉದ್ಯೋಗಸ್ಥ ಮಹಿಳೆಯರು ಉದ್ಯೋಗದ ಸ್ಥಳದಲ್ಲಿ ಮುಕ್ತವಾಗಿ ವ್ಯವಹರಿಸಲು ಇಂದಿಗೂ ಸಿದ್ದರಿಲ್ಲ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್, ‘ನಿರ್ಧಾರ ಮಾಡುವಲ್ಲಿ, ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಮತ್ತು ನಾಲ್ಕು ಗೋಡೆಗಳಿಂದಾಚೆಗೆ ಬರುವುದು ಹೇಗೆ ಎಂಬ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಜಗತ್ತಿನ ದೈನಂದಿನ ಚಟುವಟಿಕೆಗಳಲ್ಲಿ ತಮಗೂ ಪಾತ್ರವಿದೆ, ಮಹತ್ವವಿದೆ ಎಂದು ಭಾವಿಸಿದಾಗ ಮಾತ್ರ ಏನನ್ನಾದರು ಸಾಧಿಸಲು ಸಾಧ್ಯ’ ಎಂದರು.

‘ಪೊಲೀಸ್ ವ್ಯವಸ್ಥೆ ಬಲಪಡಿಸಬೇಕು’
ಇತ್ತೀಚೆಗೆ ಎಟಿಎಂ ಘಟಕದಲ್ಲಿ ದುಷ್ಕರ್ಮಿಯಿಂದ ಹಲ್ಲಗೆ ಒಳಗಾಗಿದ್ದ ಕಾರ್ಪೋರೇಷನ್ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕಿ ಜ್ಯೋತಿ ಉದಯ್ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ನಗರದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲ ಪಡಿಸಬೇಕು. ಮಾಧ್ಯಮಗಳಲ್ಲಿ ಸುದ್ದಿಗೆ ವ್ಯಾಪಕ ಪ್ರಚಾರ ನೀಡಿದ್ದರಿಂದ ಹಲ್ಲೆ ಮಾಡಿದ ವ್ಯಕ್ತಿ ಎಚ್ಚರವಹಿಸಿ ತಪ್ಪಿಸಿಕೊಂಡಿರಬಹುದು’ ಎಂದು ಅಭಿಪ್ರಾಯಪಟ್ಟರು.

‘ಘಟನೆಯ ನಂತರ ನಗರದ ಎಟಿಎಂ ಘಟಕಗಳಲ್ಲಿ ಭದ್ರತೆ ಹೆಚ್ಚಾಗಿದೆ. ಈಗ ಒಬ್ಬಳೇ ಎಟಿಎಂಗೆ ಹೋಗುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.