ಶುಕ್ರವಾರ, ಜೂನ್ 25, 2021
30 °C

ಧಾರ್ಮಿಕ ಪ್ರವಚನ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ ಹೆಜಮಾಡಿಯ ಕಣ್ಣಂಗಾರ್‌ ಬೈಪಾಸ್‌ ಬಳಿ ಬುಧವಾರ ನಡೆಯಬೇಕಿದ್ದ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಸುನ್ನಿ ಪಂಥೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ’ ಎಂದು ಸಂಘಟನೆಯ ಕೇಂದ್ರ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್‌ ಶಾಫಿ ಹೇಳಿದರು.‘ಅಂಧವಿಶ್ವಾಸ, ಅನಾಚಾರ, ಸ್ತ್ರೀ ಶೋಷಣೆ, ಕೋಮುವಾದದ ಬಗ್ಗೆ ನಮ್ಮ ಸಂಘಟನೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡುವುದು ಇದರ ಉದ್ದೇಶವಾಗಿದೆ. ಆದರೆ ಇದನ್ನು ಸಹಿಸದ ಪುರೋಹಿತಶಾಹಿಗಳು ಜನರು ಜಾಗೃತಿಗೊಂಡರೆ ಆದಾಯಕ್ಕೆ ಇಲ್ಲದಾಗುತ್ತದೆ ಎಂದು ಅಮಾಯಕರನ್ನು ಛೂಬಿಟ್ಟು ಪ್ರತಿಭಟನೆ ಮಾಡಿಸುತ್ತಿದ್ದಾರೆ.ಪೊಲೀಸರು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರವಚನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಚುನಾವಣೆ ಮುಗಿದ ನಂತರ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಇಸ್ಲಾಂ ಧರ್ಮದ ಪ್ರಕಾರ ಸೃಷ್ಟಿಕರ್ತನನ್ನು ಮಾತ್ರ ಆರಾಧಿ ಸಬೇಕು. ಆದರೆ ಪುರೋಹಿತಶಾಹಿ ಕಂದಾಚಾರನ್ನು ಧರ್ಮ ದೊಳಗೆ ತುರುಕಿದೆ. ಮರಣ ಹೊಂದಿದ ಮಹಾ ತ್ಮರನ್ನು ಆರಾಧಿಸುವ ಬಗ್ಗೆ ಇಸ್ಲಾಂನಲ್ಲಿ ಉಲ್ಲೇಖ ಇಲ್ಲ. ದರ್ಗಾ ರಾಧನೆ, ಉರುಸ್‌ ಇದ್ಯಾವುದೂ ಧರ್ಮ ದಲ್ಲಿಲ್ಲ. ಆದರೆ ಅದರಿಂದ ಆದಾಯ ಬರುತ್ತದೆ ಎಂಬ ಕಾರಣಕ್ಕೆ ಪುರೋಹಿ ತರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇಂತಹ ಅಂಧ ಆಚರಣೆಗಳನ್ನು ನಡೆಸುತ್ತಿದ್ದಾರೆ. ಸುಲಭವಾಗಿ ಹಣ ಸಂಪಾದನೆ ಮಾಡುವುದು ಅವರ ಉದ್ದೇಶ

ಎಂದ ರು.ಕೆಲವು ರಾಜಕಾರಣಿಗಳೂ ಸುನ್ನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮಹಮ್ಮದ್‌, ರಹಮತ್‌ಉಲ್ಲಾ, ಉಮರ್‌ ಫಾರೂಕ್‌, ಅಬ್ದುಲ್‌ ಕಾಪ್‌ ಅಬ್ದುಲ್‌ ಜಲೀಲ್‌ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.