ಶನಿವಾರ, ಜನವರಿ 25, 2020
16 °C

ನಂದಿನಿ ಗುಡ್‌ಲೈಫ್ ಟೊನ್ಡ್ ಟೆಟ್ರಾ ಪ್ಯಾಕೇಟ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) 100 ಮಿಲಿ ಲೀಟರ್‌ನ ನಂದಿನಿ ಗುಡ್‌ಲೈಫ್ ಟೊನ್ಡ್ ಹಾಲಿನ ಟೆಟ್ರಾ ಪ್ಯಾಕೇಟ್ ಅನ್ನು ಸೋಮವಾರ ಬಿಡುಗಡೆ ಮಾಡಿದೆ.ನಾಲ್ಕು ರೂಪಾಯಿಗಳಿಗೆ ಲಭ್ಯವಿರುವ ಟೆಟ್ರಾ ಪ್ಯಾಕ್‌ನ 100 ಮಿ.ಲೀಟರ್ ಟೊನ್ಡ್ ಹಾಲಿನ ಪ್ಯಾಕೇಟ್ ರಾಜ್ಯವು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ದೊರೆಯಲಿದೆ. ಟೆಟ್ರಾ ಪ್ಯಾಕ್‌ನಲ್ಲಿ ಶೇಖರಿಸುವುದರಿಂದ ಹಾಲಿನ ಗುಣಮಟ್ಟ ಉತ್ತಮವಾಗಿರುತ್ತದೆ. ಈ ನೂತನ ಉತ್ಪನ್ನದ ಮೂಲಕ ದಕ್ಷಿಣ ರಾಜ್ಯಗಳಿಗೂ ನಮ್ಮ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಲಿದೆ ಎಂದು ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)