ನವದೆಹಲಿ (ಪಿಟಿಐ): ಛತ್ತೀಸಗಡದ ಸುಕ್ಮಾ ಜಿಲ್ಲೆಯ ಗೊಂಡಾರಣ್ಯದಲ್ಲಿ ಮಂಗಳವಾರ ನಕ್ಸಲರು ಏಕಾಏಕಿ ದಾಳಿಗೆ ಶುರುವಿಟ್ಟಾಗ ಹತ್ತಿರದ ಸಿಆರ್ಪಿಎಫ್್ ಶಿಬಿರಗಳಿಗೆ ಸುದ್ದಿ ಮುಟ್ಟಿಸುವಲ್ಲಿ ಭದ್ರತಾ ಸಿಬ್ಬಂದಿ ಪರದಾಡಬೇಕಾಯಿತು.

ಈ ಪ್ರದೇಶದಲ್ಲಿ ಮೊಬೈಲ್್ ಸಂಪರ್ಕ ಇದ್ದಿದ್ದೇ ಆದಲ್ಲಿ ಪರಿಸ್ಥಿತಿ ಇಷ್ಟೊಂದು ವಿಕೋಪಕ್ಕೆ ಹೋಗುತ್ತಿರಲಿಲ್ಲ.

ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕ ವ್ಯವಸ್ಥೆಗಾಗಿ ರೂ. 3000 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಆದರೆ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. 2010ರಲ್ಲಿ ದಾಂತೇವಾಡದಲ್ಲಿ ನಡೆದ ನಕ್ಸಲೀಯರ ದಾಳಿ ಬಳಿಕ ಈ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ವಿಷಯವಾಗಿ ಇತ್ತೀಚೆಗೆ ಪ್ರಧಾನಿ ಕಚೇರಿ ಮಧ್ಯಪ್ರವೇಶಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

‘ಜಾರ್ಖಂಡ್, ಬಿಹಾರ, ಛತ್ತೀಸಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಒಡಿಶಾ, ಉತ್ತರಪ್ರದೇಶ ಹಾಗೂ ಆಂಧ್ರಪ್ರದೇಶ ರಾಜ್ಯಗಳ ನಕ್ಸಲ್್ ಪೀಡಿತ ಪ್ರದೇಶಗಳಲ್ಲಿ ದೂರವಾಣಿ ಸಂಪರ್ಕ ಕೊರತೆ ಇದೆ. ಆದ್ದರಿಂದ ಈ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿಗೆ ಕೆಲಸ ಮಾಡುವುದು ಸವಾಲಿನ ಕೆಲಸವೇ ಸರಿ’ ಎನ್ನುತ್ತವೆ ಮೂಲಗಳು.

ಭದ್ರತಾ ಪಡೆ ಮೇಲೆ ನಡೆದ ನಕ್ಸಲ್ ದಾಳಿ
*ಜೂನ್ 29, 2008: ಒಡಿಶಾದ ಬಾಲಿಮೇಳ ಜಲಾಶಯದಲ್ಲಿ ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ದೋಣಿಯ ಮೇಲೆ ದಾಳಿ. 38 ಸಾವು
*ಜುಲೈ 16, 2008: ಒಡಿಶಾದ ಮಲ್ಕಂಗಿರಿ ಜಿಲ್ಲೆಯಲ್ಲಿ ಪೊಲೀಸ್್ ವ್ಯಾನ್ ಗುರಿಯಾಗಿಸಿಕೊಂಡು ನೆಲಬಾಂಬ್್ ಸ್ಫೋಟ. 21 ಪೊಲೀಸರ ದುರ್ಮರಣ
*ಏಪ್ರಿಲ್ 13, 2009: ಪೂರ್ವ ಒಡಿಶಾದ ಕೊರಾಪಟ್್ ಜಿಲ್ಲೆಯಲ್ಲಿ ಬಾಕ್ಸೈಟ್್ ಗಣಿ ಮೇಲೆ ದಾಳಿ. ಅರೆಸೇನಾ ಪಡೆಯ 10 ಸಿಬ್ಬಂದಿ ಸಾವು
*ಮೇ 22, 2009: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಅರಣ್ಯದಲ್ಲಿ ನಡೆದ ದಾಳಿಗೆ 16 ಪೊಲೀಸರ ಬಲಿ
*ಜೂನ್ 10, 2009: ಜಾರ್ಖಂಡ್ನ ಸರಂದಾ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಸಿಬ್ಬಂದಿ ಮೇಲೆ ದಾಳಿ. 9 ಸಾವು
*ಜೂನ್ 13, 2009: ಜಾರ್ಖಂಡ್ನ ಬೊಕಾರೊ ಜಿಲ್ಲೆಯ ಪಟ್ಟಣವೊಂದರಲ್ಲಿ ಎರಡು ನೆಲಬಾಂಬ್್ ಸ್ಫೋಟಕ್ಕೆ 10 ಪೊಲೀಸರ ಬಲಿ
*ಅಕ್ಟೋಬರ್ 8, 2009: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಲಹೇರಿ ಪೊಲೀಸ್್ ಠಾಣೆ ಮೇಲೆ ನಡೆದ ದಾಳಿಗೆ 17 ಪೊಲೀಸರ ಬಲಿ
*ಫೆಬ್ರುವರಿ 15, 2010: ಪಶ್ಚಿಮಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಸಿಲ್ದಾದ ಇಎಫ್ಆರ್್ (ಈಸ್ಟರ್ನ್್ ಫ್ರಾಂಟಿಯರ್ ರೈಫಲ್ಸ್) ಶಿಬಿರದ ಮೇಲೆ ನಡೆದ ದಾಳಿಗೆ 24 ಸಿಬ್ಬಂದಿ ಬಲಿ
*ಏಪ್ರಿಲ್ 4, 2010: ನೆಲಬಾಂಬ್್ ಸ್ಫೋಟಕ್ಕೆ ಒಡಿಶಾದ ಕೊರಾಪಟ್ ಜಿಲ್ಲೆಯ ನಕ್ಸಲ್್ ನಿಗ್ರಹ ವಿಶೇಷ ಕಾರ್ಯಾಚರಣೆ ತಂಡದ (ಎಸ್ಒಜಿ)11 ಸಿಬ್ಬಂದಿ ಸಾವು
*ಏಪ್ರಿಲ್ 6, 2010: ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ನಡೆದ ಪೈಶಾಚಿಕ ದಾಳಿಗೆ ಸಿಆರ್ಪಿಎಫ್ನ 75 ಸಿಬ್ಬಂದಿ ಹಾಗೂ ಪೊಲೀಸ್್ ಅಧಿಕಾರಿ ಬಲಿ
*ಜೂನ್ 29, 2010: ಛತ್ತೀಸಗಡದ ನಾರಾಯಣಪುರ ಜಿಲ್ಲೆಯಲ್ಲಿ ನಡೆದ ದಾಳಿಗೆ ಸಿಆರ್ಪಿಎಫ್ನ ಕನಿಷ್ಠ 26 ಯೋಧರ ಸಾವು
*ಮೇ 25, 2013: ಛತ್ತೀಸಗಡದ ದರ್ಭಾ ಕಣಿವೆಯಲ್ಲಿ ಕಾಂಗ್ರೆಸ್್ ನಾಯಕರನ್ನು ಗುರಿಯಾಗಿಸಿಕೊಂಡು ನಕ್ಸಲೀಯರು ನಡೆಸಿದ ಪೈಶಾಚಿಕ ದಾಳಿಯಲ್ಲಿ ರಾಜ್ಯ ಕಾಂಗ್ರೆಸ್್ ಅಧ್ಯಕ್ಷ ನಂದಕುಮಾರ್್ ಪಟೇಲ್, ಬುಡಕಟ್ಟು ಮುಖಂಡ ಮಹೇಂದ್ರ ಕರ್ಮಾ ಸೇರಿ 25 ಮಂದಿ ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.