ಬುಧವಾರ, ಜನವರಿ 22, 2020
28 °C

ನಕ್ಸಲ್ ಪ್ರದೇಶಗಳಲ್ಲಿ ಧಾರ್ಮಿಕ ಕಾರ್ಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ): ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕ್ಯಾಥೊಲಿಕ್ ಚರ್ಚ್‌ಗಳು ಲಕ್ಷ್ಮಣ ರೇಖೆಯನ್ನು ಮೀರದಂತೆ ಮುನ್ನಡೆಯಬೇಕು ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಕಿವಿಮಾತು ಹೇಳಿದರು.ಶುಕ್ರವಾರ ಇಲ್ಲಿ ನಡೆದ ಕ್ಯಾಥೊಲಿಕ್ ಸಂಘಟನೆಯ `ಕಾರಿತಾಸ್ ಇಂಡಿಯಾ~ ಸ್ವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಕ್ಯಾಥೊಲಿಕ್ ಧರ್ಮೀಯರು ತಮ್ಮ ಮೂಲೋದ್ದೇಶವನ್ನು ಮರೆತು ಯಾವುದೇ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಬಾರದು. ಒಂದು ವೇಳೆ ಇಂತಹ ಚಟುವಟಿಕೆಗಳಲ್ಲಿ ಮುಂದುವರಿದರೆ ಅದು ಸಮುದಾಯದ ಮೇಲೆ ಸರ್ಕಾರವು ಇಟ್ಟಿರುವ ನಂಬಿಕೆ ಹಾಗೂ ಜನರ ವಿಶ್ವಾಸಗಳನ್ನು ಕಳೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.ಮಾವೊವಾದಿಗಳ ಉಪಟಳ ಇರುವ ಸ್ಥಳಗಳಲ್ಲಿ ರಾಮಕೃಷ್ಣ ಮಿಷನ್ ಮತ್ತು ಕಾರಿತಾಸ್ ಸಮೂಹದ ಚಟುವಟಿಕೆಗಳು ಗಮನಾರ್ಹವಾಗಿವೆ ಎಂದ ಸಚಿವರು, ಕಾರಿತಾಸ್ ಕೇವಲ ಕ್ಯಾಥೊಲಿಕ್ ಸಂಘಟನೆಯ್ಲ್ಲಲ. ಬದಲಿಗೆ ಇದು ಕ್ಯಾಥೊಲಿಕ್ ಪಂಗಡದವರಿಂದ ನಡೆಸಲ್ಪಡುತ್ತಿರುವ ಒಂದು ಸಾಮಾಜಿಕ ಸಂಘಟನೆ ಎಂದು ಬಣ್ಣಿಸಿದರು.ಆರ್ಚ್‌ಬಿಷಪ್‌ಗಳು ಮತ್ತು ಕ್ರೈಸ್ತ ಧರ್ಮ ಪ್ರಚಾರಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)