ಭಾನುವಾರ, ಮೇ 16, 2021
28 °C

ನಗರದಲ್ಲಿ ಇಂದು: ಸೆಪ್ಟೆಂಬರ್ 16, ಶುಕ್ರವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪರಿಷತ್ತು: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ, ಕಸ್ತೂರಬಾ ರಸ್ತೆ. `ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವ- 2011~ ಉದ್ಘಾಟನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಬೆಳಿಗ್ಗೆ 9.30.ಕರ್ನಾಟಕ ಜಾನಪದ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ. ರಾಜ್ಯ ಮಟ್ಟದ ಮೂಲ ಹಾಗೂ ಆಧುನಿಕ ಜನಪದ ಗಾಯಕರ ಪ್ರಥಮ ಸಮಾವೇಶ. ಉದ್ಘಾಟನೆ- ಸಚಿವ ಗೋವಿಂದ ಎಂ.ಕಾರಜೋಳ. ಅತಿಥಿಗಳು- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಿ.ಬಸವರಾಜು, ಸಂಗೀತ ನಿರ್ದೇಶಕ ಹಂಸಲೇಖ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ. ಅಧ್ಯಕ್ಷತೆ- ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ. ಬೆಳಿಗ್ಗೆ 10.ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ: ಮಿಥಿಕ್ ಸೊಸೈಟಿ, ನೃಪತುಂಗರಸ್ತೆ. ಕಲೆ ಮತ್ತು ಸಂಸ್ಕೃತಿ, ಐತಿಹಾಸಿಕ ದಾಖಲೆಗಳ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಮತ್ತು `ಎ ಗೈಡ್ ಟು ದಿ ರೆಕಾರ್ಡ್ಸ್~ ಪುಸ್ತಕ ಲೋಕಾರ್ಪಣೆ- ಸಚಿವ ಗೋವಿಂದ ಎಂ.ಕಾರಜೋಳ. ಅತಿಥಿ- ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್. ಅಧ್ಯಕ್ಷತೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು. ಬೆಳಿಗ್ಗೆ 11.ಸರ್.ಎಂ.ವಿಶ್ವೇಶ್ವರಯ್ಯ ವಿಚಾರ ವೇದಿಕೆ: ಕನ್ನಡ ಭವನ, ನಯನ ಸಭಾಂಗಣ. ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ 151ನೇ ಜನ್ಮ ದಿನಾಚರಣೆ ಹಾಗೂ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಅಂಧ ವಾದ್ಯಗೋಷ್ಠಿ ಕಲಾವಿದರಿಗೆ ಗೌರವ ಸಮಾರಂಭ. ಸಾನ್ನಿಧ್ಯ- ಕೊಳದ ಮಠದ ಡಾ.ಶಾಂತವೀರಸ್ವಾಮೀಜಿ. ಅತಿಥಿಗಳು- ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ, ಉಪ ಮೇಯರ್ ಎಸ್.ಹರೀಶ್, ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ. ಅಧ್ಯಕ್ಷತೆ- ಸಚಿವ ವಿ.ಸೋಮಣ್ಣ. ಬೆಳಿಗ್ಗೆ 11.ಸರ್ಕಾರಿ ಕಲಾ ಕಾಲೇಜು: ಕಾಲೇಜು ಆವರಣ, ಅಂಬೇಡ್ಕರ್ ವೀದಿ. ಸಾಂಸ್ಕೃತಿಕ, ಕ್ರೀಡಾ, ಎಸ್‌ಸಿಸಿ ಹಾಗೂ ಎಸ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನೆ- ಕ್ರಿಯೇಟಿವ್ ಅಕಾಡೆಮಿ ಫಾರ್ ಟೀಚಿಂಗ್‌ನ ಅಧ್ಯಕ್ಷ ಡಾ.ಗುರುರಾಜ ಕರ್ಜಗಿ. ಅತಿಥಿಗಳು- ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ನಟ ಅನಿರುದ್ಧ. ಅಧ್ಯಕ್ಷತೆ- ಪ್ರಾಂಶುಪಾಲ ಪ್ರೊ.ಆರ್.ಶ್ರೀನಿವಾಸ್. ಬೆಳಿಗ್ಗೆ 11.ಪಿ.ಇ.ಎಸ್.ಪದವಿ ಕಾಲೇಜು: ಕುವೆಂಪು ಸಭಾಂಗಣ, 50 ಅಡಿ ರಸ್ತೆ, ಹನುಮಂತನಗರ. `ಲೆನಿತ್- 2011~ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ. ಅತಿಥಿಗಳು- ಬೆಂಗಳೂರು ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಡಾ.ಟಿ.ಆರ್.ರಂಗನಾಥ್, ರಿಲಯನ್ಸ್ ಕ್ಯಾಪಿಟಲ್‌ನ ದಕ್ಷಿಣ ಭಾರತ ವಲಯ ವಿಭಾಗದ ವ್ಯವಸ್ಥಾಪಕ ಜೋಸೆಫಿನ್ ಜೋಸೆ. ಅಧ್ಯಕ್ಷತೆ- ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ದೊರೆಸ್ವಾಮಿ. ಬೆಳಿಗ್ಗೆ 9.30.ಜೀವಿಕ ಸಂಘಟನೆ: ಪುರಭವನ. 21ನೇ ವರ್ಷದ ಜೀವಿಕ ದಿನ. ಉದ್ಘಾಟನೆ- ನಿಡುಮಾಡಿ ಮಠದ ವೀರಭದ್ರ ಚನ್ನಮಲ್ಲಸ್ವಾಮೀಜಿ. ಅತಿಥಿಗಳು- ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಮಾಜಿ ಸಂಚಾಲಕ ಎನ್.ವೆಂಕಟೇಶ್, ಅಧ್ಯಕ್ಷತೆ- ಸಂಘದ ರಾಜ್ಯ ಘಟಕದ ಸಂಚಾಲಕ ಕಿರಣಕಮಲ ಪ್ರಸಾದ. ಬೆಳಿಗ್ಗೆ 11.ಫಂಕ್ಷನಲ್ ವೊಕೇಷನಲ್ ಟ್ರೈನಿಂಗ್ ಅಂಡ್ ರೀಸರ್ಚ್ ಸೊಸೈಟಿ: ರೋಟರಿ ಕ್ಲಬ್, ಲ್ಯಾವೆಲ್ಲೆ ರಸ್ತೆ. `ಸ್ವಾತಂತ್ರ್ಯಾನಂತರದ ಎರಡು ದಶಕಗಳಲ್ಲಿ ಗ್ರಾಮೀಣ ಭಾರತ~ ಕುರಿತು ದತ್ತಿ ಸ್ಮಾರಕ ಉಪನ್ಯಾಸ- ಪತ್ರಕರ್ತ ಪಿ.ಸಾಯಿನಾಥ್. ಸಂಜೆ 6.15.ನ್ಯಾಷನಲ್ ಪದವಿ ಕಾಲೇಜು: ಡಾ.ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರ ಸಭಾಂಗಣ, ಜಯನಗರ. ಎಂ.ಎಸ್.ಸಿ ಗಣಿತಶಾಸ್ತ್ರ ಪ್ರಥಮ ಸೆಮಿಸ್ಟರ್ ತರಗತಿಗಳ ಉದ್ಘಾಟನಾ ಸಮಾರಂಭ. ಅತಿಥಿಗಳು- ಗುಲ್ಬರ್ಗ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಎನ್.ರುದ್ರಯ್ಯ, ಡಾ.ಪಿ.ಸದಾನಂದಮಯ್ಯ, ಎನ್.ಇ.ಎಸ್. ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜರೆಡ್ಡಿ. ಅಧ್ಯಕ್ಷತೆ- ಎನ್.ಇ.ಎಸ್ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಚ್.ರಾಮರಾವ್. ಬೆಳಿಗ್ಗೆ 10.ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ (ಎಸಿಸಿಇ): ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ, ಸೆಂಚುರಿ ಕ್ಲಬ್. ಎಂಜಿನಿಯರ್‌ಗಳ ದಿನಾಚರಣೆ ಮತ್ತು ಉತ್ತಮ ಎಂಜಿನಿಯರ್‌ಗಳಿಗೆ ಅಭಿನಂದನಾ ಸಮಾರಂಭ. ಅತಿಥಿಗಳು- ಎಸಿಸಿಇ ಅಧ್ಯಕ್ಷ ಬಿ.ಎಸ್.ಸಿ.ರಾವ್, ಸೋಮ ಎಂಟರ್‌ಪ್ರೈಸಸ್‌ನ ರೈಲ್ವೆ ವಿಭಾಗದ ಮುಖ್ಯಸ್ಥ ಆರ್.ರಿಚರ್ಡನ್ಸ್ ಆಸಿರ್. ಅಧ್ಯಕ್ಷತೆ- ಮದ್ರಾಸ್ ಸಿಮೆಂಟ್ ಲಿಮಿಟೆಡ್‌ನ ಮಾರುಕಟ್ಟೆ ವಿಭಾಗದ ಹಿರಿಯ ವ್ಯವಸ್ಥಾಪಕ ಕೆ.ಜಯಕುಮಾರ್. ಸಂಜೆ 6.15.ಸುರಾನ ಕಾಲೇಜು: ತುಮಕೂರು- ಮೈಸೂರು ವರ್ತುಲ ರಸ್ತೆ, ಕೆಂಗೇರಿ ಉಪನಗರ. ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ. ಅತಿಥಿಗಳು: ರಾಜ್ಯ ಇ- ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಭಾರತೀಯ ನಿರ್ವಹಣಾ ಸಂಸ್ಥೆಯ ಪ್ರಾಧ್ಯಾಪಕ ಡಾ.ಪ್ರಕಾಶ್ ಜಿ.ಆಪ್ಟೆ. ಅಧ್ಯಕ್ಷತೆ- ಜಿಡಿಎ ಪ್ರತಿಷ್ಠಾನದ ಮುಖ್ಯಸ್ಥ ದಿಲೀಪ್ ಸುರಾನ. ಸಂಜೆ 5.ಸಿವಿಕ್: ಸ್ಟೂಡೆಂಟ್ ಅಸೋಸಿಯೇಷನ್ ಮೂವ್‌ಮೆಂಟ್ ಆಫ್ ಇಂಡಿಯಾ, 2ನೇ ಅಡ್ಡರಸ್ತೆ, ಸಿಎಸ್‌ಐ ಮಿಷನ್ ಕಾಂಪೌಂಡ್, ಮಿತ್ರಾಲಯ ಶಾಲೆ ಎದುರು, ಸುಬ್ಬಯ್ಯ ವೃತ್ತ. `ವಿಶಿಷ್ಟ ಗುರುತಿನ ಚೀಟಿ~ (ಯುನಿಕ್ ಐಡಿ) ಕುರಿತು ಸಂವಾದ ಕಾರ್ಯಕ್ರಮ. ಅತಿಥಿಗಳು- ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಉಪ ನಿರ್ದೇಶಕ ಅಶೋಕ್ ದಳವಾಯಿ, ಇ- ಆಡಳಿತ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ.ಪ್ರಭಾಕರ್, ಗ್ರಾಹಕ ಶಕ್ತಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿ.ಕೆ.ಸೋಮಶೇಖರ್, ಸಿವಿಕ್ ಕಾರ್ಯಕರ್ತ ಮ್ಯಾಥ್ಯೂ ಥಾಮಸ್. ಬೆಳಿಗ್ಗೆ 10.ಪಿಇಎಸ್ ತಾಂತ್ರಿಕ ವಿದ್ಯಾಲಯ: ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್. `ಮಾಯಾ- 2011~ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ. ಬೆಳಿಗ್ಗೆ 11.ರಿಲಯನ್ಸ್ ಟೈಮ್ ಔಟ್: ಕನ್ನಿಂಗ್‌ಹ್ಯಾಂ ರಸ್ತೆ. ಸಿಎಂಡಿ ಸಂಸ್ಥೆಯ ಸಂಸ್ಥಾಪಕ ಡಾ.ಮುಕೇಶ್ ಬಾತ್ರಾ ಅವರ `ಹೀಲಿಂಗ್ ವಿತ್ ಹೋಮಿಯೋಪತಿ~ ಪುಸ್ತಕ ಲೋಕಾರ್ಪಣೆ- ಕ್ರಿಕೆಟ್ ಪಟು ಅನಿಲ್ ಕುಂಬ್ಳೆ. ಸಂಜೆ 4.ಕನ್ನಡ ಜನಶಕ್ತಿ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಸ್ವಾತಂತ್ರ್ಯ ಯೋಧ ಕೋಣಂದೂರು ವೆಂಕಪ್ಪಗೌಡ ಅವರೊಂದಿಗೆ ಸಂವಾದ ಕಾರ್ಯಕ್ರಮ ಮತ್ತು ಗೀತ ಗಾಯನ ಕಾರ್ಯಕ್ರಮ. ಸಂಜೆ 5.30.ಆಟೋ ಮಾಲ್: ತ್ರಿಪುರವಾಸಿನಿ, ಅರಮನೆ ಮೈದಾನ. ಗಾಳಿಯ ಸಹಾಯದಿಂದ ಚಲಿಸುವ ಬೈಕ್‌ನ ಪ್ರದರ್ಶನ. ಮಧ್ಯಾಹ್ನ 2.15. ಬೆಂಕಿಯಲ್ಲಿ ಹಾಗೂ ವಿವಿಧ ಚಮತ್ಕಾರಗಳ ಬೈಕ್ ಸಾಹಸ ಪ್ರದರ್ಶನ. ಸಂಜೆ 6.30.ಜೈನ್ ಕಾಲೇಜು: 9ನೇ ಬಡಾವಣೆ, ಜಯನಗರ. `ಉದ್ಭವ್~ ಅಂತರ ಕಾಲೇಜು ಸಾಂಸ್ಕೃತಿ ಸ್ಪರ್ಧಾ ಕಾರ್ಯಕ್ರಮ. ಬೆಳಿಗ್ಗೆ 11.ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ: 4ನೇ ಮಹಡಿ, ಬಹೋಪಯೋಗಿ ಸಭಾಂಗಣ, ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜು, ಯಲಹಂಕ ನ್ಯೂಟೌನ್. `ಅಂತರರಾಷ್ಟ್ರೀಯ ಓಝೋನ್ ದಿನ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ. ಅತಿಥಿಗಳು- ಇಸ್ರೋ ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್, `ಚಿಪ್ಕೊ~ ಚಳವಳಿ ನೇತಾರ ಸುಂದರಲಾಲ್ ಬಹುಗುಣ, ರಾಜ್ಯ ಇ- ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಶಾಸಕ ಎಸ್.ಆರ್.ವಿಶ್ವನಾಥ್, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಚ್.ಹೊನ್ನೇಗೌಡ, ನಟ ಸುರೇಶ್ ಹೆಬ್ಳೀಕರ್, ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ. ಬೆಳಿಗ್ಗೆ 9.30.ಗುಡ್ ನೈಟ್ ಸೂರ್ಯ: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಸೂರ್ಯ ಉತ್ಸವ. ಹಿಂದೂಸ್ಥಾನಿ ಗಾಯನ- ರಮೇಶ್ ನಾರಾಯಣ್ ಮತ್ತು ವೃಂದ. ಸಂಜೆ 6.45.ರಂಗದರ್ಶಿ

ರಂಗಶಂಕರ:
2ನೇ ಹಂತ, ಜೆ.ಪಿ.ನಗರ. `ಮಿಡ್‌ನೈಟ್ ಟ್ರಾವಲರ್~ ನಾಟಕ ಪ್ರದರ್ಶನ. ಇಂಡಿಯನೋಸ್ಟ್ರಂ ಥಿಯೇಟರ್ ತಂಡದಿಂದ. ಸಂಜೆ 7.30.ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. `ಆರ್ಮ್ಸ ಅಂಡ್ ದಿ ಮ್ಯಾನ್~ ನಾಟಕ ಪ್ರದರ್ಶನ. ಸಂಜೆ 7.30.ಧಾರ್ಮಿಕ ಕಾರ್ಯಕ್ರಮ

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎ.ಪಿ.ಕೆ. ರಸ್ತೆ, ತ್ಯಾಗರಾಜನಗರ. `ಕಾಠಕೋಪನಿಷತ್ತು~ ಪ್ರವಚನ- ಅನಂತ ಶರ್ಮ. ಬೆಳಿಗ್ಗೆ 9.30.ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: 2ನೇ ಅಡ್ಡರಸ್ತೆ, ಸತ್ಯಸಾಯಿ ಬಾಬಾ ಬಡಾವಣೆ, ದೇವಸಂದ್ರ, ಕೆ.ಆರ್.ಪುರ. `ಸಂಕೀರ್ತನಾ ಸಂದೇಶ~ ಪ್ರವಚನ- ಸ್ವಾಮಿ ಚಂದ್ರೇಶಾನಂದಜಿ. ಸಂಜೆ 5.30.ಚಿನ್ಮಯ ಮಿಷನ್: 5ನೇ ಮುಖ್ಯರಸ್ತೆ, ಮಲ್ಲೇಶ್ವರ. `ಶಿವಪಾಸರಾಧ ಕ್ಷಮಾಪಣ ಸ್ತೋತ್ರಮ್~ ಪ್ರವಚನ- ವಸುಮನ ಚೈತನ್ಯ. ಸಂಜೆ 6.ತಿರುಮಲ ತಿರುಪತಿ ದೇವಸ್ಥಾನಗಳ ಹಿಂದೂ ಧರ್ಮ ಪ್ರಚಾರ ಪರಿಷತ್ತು: ರಾಘವೇಂದ್ರಸ್ವಾಮಿ ಮಠ, ಕೆಂಗೇರಿ. ಭಜನೆ- ಸ್ಥಾನಿಕ ಮಹಿಳಾ ಮಂಡಳಿಯಿಂದ. ಸಂಜೆ 5.30.ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ: 2ನೇ ಮುಖ್ಯರಸ್ತೆ, ಅರಮನೆ ನಗರ. ಸಂಕಷ್ಟಹರ ಪೂಜೆ. ಬೆಳಿಗ್ಗೆ 7.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.