ಗುರುವಾರ , ಮೇ 19, 2022
20 °C

ನನಸಾಗದ ಹಿಲರಿ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಹಿಲರಿ ಕ್ಲಿಂಟನ್ ಇವತ್ತು ಅಮೆರಿಕದ ಪ್ರಭಾವಿ ಮಹಿಳೆ. ವಿದೇಶಾಂಗ ಕಾರ್ಯದರ್ಶಿಯಾಗಿದ್ದು ಜಗತ್ತಿನಾದ್ಯಂತ ತಮ್ಮ ಪ್ರಭಾವಲಯ ಹೊಂದಿರುವ ಇವರು ಸರಿಯಾಗಿ ಅರ್ಧ ಶತಮಾನದ ಹಿಂದೆ ಭಾರತದಲ್ಲಿ ಉನ್ನತ ವ್ಯಾಸಂಗ ನಡೆಸಲು ಮಾಡಿದ್ದ ಪ್ರಯತ್ನ ವಿಫಲಗೊಂಡಿತ್ತು.ವೆಲ್ಲೆಸ್ಲಿಯ ಲಿಬರಲ್ ಆರ್ಟ್ಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಇವರು 1960ರಲ್ಲಿ ಭಾರತದಲ್ಲಿ ಉನ್ನತ ವ್ಯಾಸಂಗ ನಡೆಸುವ ನಿಟ್ಟಿನಲ್ಲಿ ಫುಲ್‌ಬ್ರೈಟ್ ವಿದ್ಯಾರ್ಥಿ ವೇತನಕ್ಕೆ ಪ್ರಯತ್ನಿಸಿ ಸಫಲರಾಗಿದ್ದರು. ಭಾರತಕ್ಕೆ ಹೊರಡುವ ತಯಾರಿಯನ್ನೂ ನಡೆಸಿದ್ದರು.ಆದರೆ ಆ ವರ್ಷ ರಾಜಕೀಯ ಕಾರಣಗಳಿಂದ ಫುಲ್‌ಬ್ರೈಟ್ ಕಾರ್ಯಕ್ರಮವೇ ರದ್ದುಗೊಳಿಸಲಾಯಿತು ಎಂದು ಸ್ವತಃ ಹಿಲರಿ ಅವರೇ  ಸ್ಮರಿಸಿಕೊಂಡಿದ್ದಾರೆ.ವಾಷಿಂಗ್ಟನ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಹಿಲರಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆ ಮಾತ್ರ ದೇಶದಿಂದ ಹೊರ ಹೋಗಿದ್ದರು. ಅದು ಕೆನಡಾದ ನಯಾಗರಾ ಜಲಪಾತವನ್ನು ನೋಡಲು ಎಂದೂ ಹೇಳಿಕೊಂಡಿದ್ದಾರೆ.ಫುಲ್‌ಬ್ರೈಟ್ ಕಾರ್ಯಕ್ರಮವು ಅಮೆರಿಕ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ವಿಶ್ವದ ಯಾವುದೇ ಭಾಗದಲ್ಲಿ ಅಧ್ಯಯನ ಮಾಡಲು, ಉಪನ್ಯಾಸ ನೀಡಲು, ಕಲಿಯಲು ಹಾಗೂ ಸೆಕೆಂಡರಿ ಹಂತದ ಶಾಲೆಯಲ್ಲಿ ಬೋಧಿಸಲು ಅನುದಾನ ನೀಡುತ್ತದೆ. ಇದನ್ನು ಅಮೆರಿಕದ ಶೈಕ್ಷಣಿಕ ವಿಭಾಗ, ಸಾಂಸ್ಕೃತಿಕ ಸಚಿವಾಲಯವು ಪ್ರಾಯೋಜಿಸುತ್ತದೆ.ಈ ಫುಲ್‌ಬ್ರೈಟ್ ಕಾರ್ಯಕ್ರಮವು ಈಚೆಗಿನ ವರ್ಷಗಳಲ್ಲಿ ವಿನೂತನ ಆಯಾಮ ಪಡೆದುಕೊಂಡಿದೆ. ಅಮೆರಿಕವು ವಿಶ್ವದ ಇನ್ನಾವುದೇ ದೇಶಗಳಿಗಿಂತ ಭಾರತದೊಡನೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಆಸಕ್ತಿ ತೋರಿದೆ. ಈವರೆಗೆ ಒಟ್ಟು 17ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಲಾಭ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.