ಭಾನುವಾರ, ಮಾರ್ಚ್ 7, 2021
22 °C
ಬಸವರಾಜ ಚನ್ನಪ್ಪ ಪಾಟೀಲ ಅಂತಿಮ ದರ್ಶನ ಪಡೆದ ಜನ

ನಬಾಪುರಕ್ಕೆ ಯೋಧನ ಪಾರ್ಥಿವ ಶರೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಬಾಪುರಕ್ಕೆ ಯೋಧನ ಪಾರ್ಥಿವ ಶರೀರ

ಬೆಳಗಾವಿ: ಜಮ್ಮು–ಕಾಶ್ಮೀರ ಗಡಿ ಭಾಗದಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಸಾವಿಗೀಡಾದ ಯೋಧ ರಾಜ್ಯದ ಬಸವರಾಜ ಚನ್ನಪ್ಪ ಪಾಟೀಲ(44) ಅವರ ಪಾರ್ಥೀವ ಶರೀರವನ್ನು ಸೋಮವಾರ ಅವರ ಹುಟ್ಟೂರು ಬೆಳಗಾವಿ ಜಿಲ್ಲೆ ನಬಾಪುರಕ್ಕೆ ತರಲಾಗಿದೆ.ಪಾರ್ಥೀವ ಶರೀರವನ್ನು ಬೆಳಿಗ್ಗೆ ಗೋವಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಗೋಕಾಕ ಸಮೀಪದ ನಬಾಪುರ/ಖನಗಾಂವಕ್ಕೆ ಬೆಳಿಗ್ಗೆ 11.30ಕ್ಕೆ ತರಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.  ಬಸವರಾಜ ಚನ್ನಪ್ಪ ಪಾಟೀಲ ಅವರು ಕಲಿತ ಶಾಲೆಯಲ್ಲಿ ಗೌರವಾರ್ಥವಾಗಿ ಕೆಲ ಹೊತ್ತು ಇರಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ದರ್ಶನ ಪಡೆದರು. ಬಳಿಕ, ನಬಾಪುರ/ಖನಗಾಂವ ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.ಯೋಧ ಬಸವರಾಜ ಚನ್ನಪ್ಪ ಪಾಟೀಲ ಅವರು ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸುಬೇದಾರ್‌ ಹುದ್ದೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.