ಶುಕ್ರವಾರ, ಮಾರ್ಚ್ 5, 2021
27 °C

ನರ್ಮದಾ ಶಿಬರೂರಾಯ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರ್ಮದಾ ಶಿಬರೂರಾಯ ನಿಧನ

ಮಂಗಳೂರು: ತೆಂಕುತಿಟ್ಟಿನ ಪ್ರಥಮ ಮಹಿಳಾ ಭಾಗವತರೆಂದು ಪ್ರಸಿದ್ಧರಾದ ಪ್ರಸಿದ್ಧ ನರ್ಮದಾ ಶಿಬರೂರಾಯ (75) ಅವರು ಸೋಮವಾರ ನಸುಕಿನಲ್ಲಿ ಸುಳ್ಯದ ಕುರುಂಜಿ ಆಸ್ಪತ್ರೆಯಲ್ಲಿ ನಿಧನರಾದರು.

ಸುಳ್ಯ ಸಮೀಪದ ಮಂಡೆಕೋಲಿನಲ್ಲಿ ನೆಲೆಸಿದ್ದ ಅವರ ಪತಿ ಪುರುಷೋತ್ತಮ ಶಿಬರೂರಾಯ ಅವರು ಎರಡು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು.

ತೆಂಕು ತಿಟ್ಟಿನಲ್ಲಿ ಲೀಲಾವತಿ ಬೈಪಡಿತ್ತಾಯ ಅವರು ಭಾಗವತರಾಗಿ ಮೇಳಗಳಲ್ಲಿ ತಿರುಗಾಡಿ ಹೆಸರಾದವರು. ನರ್ಮದಾ ಅವರು ಅದಕ್ಕಿಂತಲೂ ಮೊದಲೇ ಭಾಗವತಿಕೆ ಕಲಿತಿದ್ದರು. ಆದರೆ ಅವರು ವೃತ್ತಿಪರ ಮೇಳಗಳಿಗೆ ಹೋಗಿಲ್ಲ,  ಹವ್ಯಾಸಿಯಾಗಿ ಯಕ್ಷಗಾನ ಭಾಗವತಿಕೆ ಮಾಡುತ್ತಿದ್ದರು. ಹಲವು ಶಿಷ್ಯರಿಗೂ ಯಕ್ಷಗಾನದ ಭಾಗವತಿಕೆ ಹೇಳಿಕೊಟ್ಟಿದ್ದರು.

ನರ್ಮದಾ ಅವರಿಗೆ ಆರು ಮಂದಿ ಪುತ್ರರು ಇದ್ದಾರೆ.

*

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್‌ 08, 2016ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವಿಶೇಷ ಲೇಖನ

ಗಂಡುಕಲೆಯ ರಂಗಸ್ಥಳದೊಳು...

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.