ದೇವಿ ಭಾಗವತವು ಹಿ೦ದೂ ಧರ್ಮ ಮತ್ತು ಸ೦ಸ್ಕೃತಿಯ ಅವಿಭಾಜ್ಯ ಅ೦ಗ. ಅದು ಭಕ್ತಿ– ಶ್ರದ್ಧೆಯ ಸ೦ಕೇತವೂ ಹೌದು, ಅಷ್ಟು ಮಾತ್ರವಲ್ಲ ಅದಕ್ಕೆ ಮೋಕ್ಷ ಮಾರ್ಗವೆಂಬ ಶ್ರೇಯಸ್ಸೂ ಇದೆ. ಸ್ತ್ರೀಶಕ್ತಿ ಬಿಂಬಿಸುವ ನೃತ್ಯ ರೂಪಕವೊಂದು ಈಚೆಗೆ ಕಾಸಿಯ ಸಭಾ೦ಗಣದಲ್ಲಿ ನಡೆಯಿತು.

ಪುಷ್ಪಾಂಜಲಿಯೊಂದಿಗೆ ನೃತ್ಯ ಕಾರ್ಯಕ್ರಮ (ರಾಗ ಗ೦ಭೀರ ನಾಟ, ಆದಿತಾಳ) ಆರಂಭವಾಯಿತು. ಕಿರಿಯ ವಿದ್ಯಾರ್ಥಿಗಳು ಗಜವದನ ಬೇಡುವೆ (ಹ೦ಸದ್ವನಿ, ಆದಿತಾಳ), ಗುರುಬ್ರಹ್ಮ ಶ್ಲೋಕ (ನಾಟರಾಗ, ಆದಿತಾಳ), ತ್ರಿಮಾತಾ ಕೌತ್ವ೦, ಆಡುತ್ತ ಬಾರೋ ಗಣೇಶ (ಮೋಹನ ರಾಗ, ಆದಿತಾಳ) ಕೃತಿಗಳನ್ನು ಮೋಹಕವಾಗಿ ಪ್ರಸ್ತುತಪಡಿಸಿದರು. ‘ತಾರಕ್ಕ ಬಿ೦ದಿಗೆ...’ ಹಾಡಿಗೆ ನೀಡಿದ ನೃತ್ಯ ಪ್ರದರ್ಶನ ಕಣ್ಮನ ಸೆಳೆಯಿತು.
ನವರಸದೇವಿ ರೂಪಕ

ಕಾರ್ಯಕ್ರಮದ ಕೇ೦ದ್ರ ಬಿ೦ದುವಾಗಿ ನವರಸದೇವಿ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು. ನವರಸಗಳಲ್ಲಿ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಎದ್ದು ಕಾಣುವಂತೆ ರೂಪಕಗಳನ್ನು ಹೆಣೆಯಲಾಗಿತ್ತು.

ಪಾರ್ವತಿ ತನ್ನ ಸಖಿಯರೊಡನೆ ಕೊಳದಲ್ಲಿ ಜಲಕ್ರೀಡೆಯಾಡಿ ಸ೦ತೋಷದಿ೦ದ ನಲಿಯುತ್ತಿರುತ್ತಾಳೆ. ಸಖಿಯರು ಅವಳನ್ನು ಅಲ೦ಕರಿಸುತ್ತಾರೆ, ತಾವರೆ ಹೂವುಗಳನ್ನು ಹಿಡಿದು ಧ್ಯಾನಾಸಕ್ತನಾಗಿದ್ದ ಶಿವನನ್ನು ಪೂಜಿಸುತ್ತಾರೆ. ಶಿವನೊ೦ದಿಗೆ ಶೃ೦ಗಾರಮಯ ನರ್ತನಗೈಯುತ್ತಾರೆ.

ದೇವಿ ಶಾ೦ಭವಿ ವೀರವರೆಯಾಗಿ ವಿಜೃ೦ಭಿಸುತ್ತಾಳೆ. ಶು೦ಭ– ನಿಶು೦ಭ ರಾಕ್ಷಸ ಸಹೋದರರು ದೇವಿಯ ಸೌ೦ದರ್ಯಕ್ಕೆ ಮನ ಸೊಲುತ್ತಾರೆ. ವಿವಾಹಕ್ಕೆ ಮೊದಲು ಯುದ್ಧದಲ್ಲಿ ನನ್ನನ್ನು ಗೆಲ್ಲಬೇಕೆ೦ದು ಆಹ್ವಾನಿಸುತ್ತಾಳೆ. ಅವರೆಲ್ಲನ್ನ ಸ೦ಹರಿಸಿ ವೀರ ರಸದಲ್ಲಿ ಪ್ರಕ್ಷೇಕರನ್ನು ಮೀಯಿಸುತ್ತಾಳೆ. ಸಿ೦ಹ ಬಲ ಪ್ರದರ್ಶನ ನೀಡುತ್ತಾಳೆ.

ಕರುಣ ರಸ ಪ್ರತಿಬಿಂಬಿಸಲು ದಕ್ಷಯಜ್ಞ ಸನ್ನಿವೇಶ ಆರಿಸಿಕೊಂಡಿದ್ದರು. ಈ ಭಾಗದಲ್ಲಿ ಪಾರ್ವತಿಯ ತ೦ದೆ ದಕ್ಷಯಜ್ಞ ಮಾಡುವಾಗ ಶಿವನನ್ನು ಆಮ೦ತ್ರಿಸದೇ ಅವಮಾನ ಮಾಡುತ್ತಾನೆ.

ಶಿವನ ಬುದ್ಧಿಮಾತನ್ನು ಮೀರಿ ತ೦ದೆಯ ಮೇಲಿನ ವಾತ್ಸಲ್ಯದಿಂದ ಆಮ೦ತ್ರಣವಿಲ್ಲದ್ದರೂ ಪಾರ್ವತಿ ಯಜ್ಞಕ್ಕೆ ಹೋಗುತ್ತಾಳೆ. ತ೦ದೆಯಿ೦ದ ಅವಮಾನಿತಳಾಗಿ ಯಜ್ಞಕು೦ಡಕ್ಕೆ ಬೀಳುತ್ತಾಳೆ. ಈ ಭಾಗದಲ್ಲಿ ದೇವಿ ಕಾರುಣ್ಯಕ್ಕೆ ಪಾತ್ರಳಾಗುತ್ತಾಳೆ.

ಶಿವನ ಕುಟುಂಬದಲ್ಲಿ ಹಾಸ್ಯಕ್ಕೆ ಕೊರತೆಯೇ. ತಾಯಿಯ ಪ್ರೀತಿಗಾಗಿ ಗಣಪತಿ– ಸುಬ್ರಮಣ್ಯರಲ್ಲಿ ಜಗಳ. ನಿನ್ನ ಸೊ೦ಡಿಲು ಉದ್ದವಾಗಿದೆ, ಹೊಟ್ಟೆ ದಪ್ಪ ಎ೦ದೆಲ್ಲ ಸುಬ್ರಹ್ಮಣ್ಯ ಗಣಪತಿಯನ್ನು ನಿ೦ದಿಸುತ್ತಾನೆ.

ಗಣಪತಿಯು ಸುಬ್ರಹ್ಮಣ್ಯನನ್ನು ನಿನಗೆ ಆರುಮುಖ, 12 ಕಣ್ಣುಗಳು ಇತ್ಯಾದಿಯಾಗಿ ಅವನು ಮೂದಲಿಸುತ್ತಾನೆ, ಇವರ ನಡುವೆಯ ಜಗಳವನ್ನು ಬಿಡಿಸುವ ಸಲುವಾಗಿ ಯಾರು ಮೊದಲು ಇಡೀ ಜಗತ್ತನ್ನು ಸುತ್ತಿ ಬರುತ್ತಾರೋ ಅವರಿಗೆ ಹಣ್ಣನ್ನು ನೀಡುತ್ತೇನೆ೦ದು ತಿಳಿಸಿ ಸಮಾಧಾನ ಮಾಡುತ್ತಾಳೆ. ತಿಳಿ ಹಾಸ್ಯದ ಈ ಸನ್ನಿವೇಶವು ಉತ್ತಮವಾಗಿ ಮೂಡಿ ಬ೦ತು.

ರಕ್ತ ಬೀಜಾಸುರ ಸಂಹಾರ ಸನ್ನಿವೇಶ ಬೀಭತ್ಸ ರಸಕ್ಕೆ ಸಾಕ್ಷಿಯಾಯಿತು. ಒ೦ದು ಹನಿ ರಕ್ತ ತನ್ನ ಶರೀರದಿ೦ದ ಭೂಮಿಗೆ ಬಿದ್ದರೂ ಸಾವಿರಾರು ರಾಕ್ಷಸರು ಹುಟ್ಟುವ೦ತಹ ವರವನ್ನು ಬ್ರಹ್ಮನಿ೦ದ ಪಡೆದಿರುತ್ತಾನೆ. ಹೀಗೆ ಅಮರತ್ವ ಪಡೆದು ಅನಾಚಾರಿಯಾಗಿ ಲೋಕ ಕ೦ಟಕನಾಗುತ್ತಾನೆ. ದೇವಿ ಅವನನ್ನು ಸ೦ಹರಿಸುತ್ತಾಳೆ, ತನ್ನ ನಾಲಿಗೆಯನ್ನು ಭೂಮಿಗೆ ಹರಡಿ ರಕ್ತ ಬೀಜಾಸುರನ ರಕ್ತ ಭೂಮಿಗೆ ಬೀಳದ೦ತೆ ಮಾಡುತ್ತಾಳೆ.

ಮಹಿಷಾಸುರನ್ನು ವಧಿಸುವ ಮಹಿಷ ಮರ್ದಿನಿಯ ಕಥೆ ರೌದ್ರಕ್ಕೆ ನಿದರ್ಶನವಾಯಿತು. ಮಹಿಷ ಕ್ಷುದ್ರರೂಪಿ ಕೋಡುಗಳನ್ನು ತಲೆಯಲ್ಲಿ ಹೊ೦ದಿ ಪ್ರಾಣಿ ಜನ್ಯ ಗುಣಗಳನ್ನು ಪ್ರಕಟಿಸುತ್ತಾನೆ. ದೇವಿ ಮಹಿಷನನ್ನು ಸ೦ಹರಿಸಿ, ರುದ್ರ ಪ್ರಿಯೆ, ಚ೦ಡಿಕೆ, ಚಾಮು೦ಡೇಶ್ವರಿ ಎ೦ದು ಖ್ಯಾತಳಾಗುತ್ತಾಳೆ.

ದೀರ್ಘ ತಪಸ್ಸಿನಲ್ಲಿರುವ ಶಿವನ ಧ್ಯಾನ ಭ೦ಗವಾಗಿ ಲೋಕೋದ್ಧಾರಕ್ಕಾಗಿ ಸುಬ್ರಹ್ಮಣ್ಯನ ಜನನವಾಗಬೇಕಾಗಿದೆ. ದೇವತೆಗಳ ಯೋಜನೆಯ೦ತೆ ರತಿ-ಮನ್ಮಥರು ಪುಪ್ಪಾಬಾಣಗಳಿ೦ದ ಶಿವನ ತಪೋಭ೦ಗ ಮಾಡುತ್ತಾರೆ.

ತನ್ನ ಮೂರನೇ ಕಣ್ಣಿನಿ೦ದ ಅವರನ್ನು ಭಸ್ಮ ಮಾಡಿದ ಶಿವನ ರೌದ್ರತಾ೦ಡವದಿ೦ದ ಪಾರ್ವತಿಯು ಭೀತಳಾಗುತ್ತಾಳೆ. ಈ ಸನ್ನಿವೇಶ ಭಯಾನಕ ರಸವನ್ನು ಹರಿಸಿತು. ಅದ್ಭುತ ರಸಕ್ಕೆ ದೇವಿಯ ವಿಶ್ವರೂಪ ದರ್ಶನ ಒದಗಿಬಂತು.

ಅಷ್ಟರಸಗಳ ಸ್ಥಾಯಿ ಎನಿಸಿದ ಶಾ೦ತರಸವನ್ನು ಬಿಂಬಿಸುವ ಸಂದರ್ಭ ಕಲಾವಿದರ ಲಯಜ್ಞಾನವನ್ನು ಅಚ್ಚುಕಟ್ಟಾಗಿ ನಿರೂಪಿಸಿತು. ಚುರುಕಾದ ಜತಿಗಳು, ಶುದ್ಧ ನಿಲುವು, ನೃತ್ಯ, ಅಭಿನಯದ ಮೇಲೆ ಸಾಧಿಸಿದ್ದ ಹಿಡಿತ ನಿದರ್ಶಿಸುವಲ್ಲಿ ಕಲಾವಿದರ ಪ್ರತಿಭೆಯ ಬಗ್ಗೆ ಹೆಮ್ಮೆ ಮೂಡಿಸುವ೦ತಿತ್ತು.
ತಿಲ್ಲಾನ ಹಾಗೂ ಮ೦ಗಳದೊ೦ದಿಗೆ ಕಾರ್ಯಕ್ರಮ ಸ೦ಪನ್ನವಾಯಿತು (ನಿರ೦ಜನಿ ರಾಗ, ಆದಿತಾಳ).

ವೇಷಭೂಷಣ, ವೇದಿಕೆ ಹಾಗೂ ಪುಟ್ಟ ಮಕ್ಕಳ ನೃತ್ಯಗಳು ಮನಸೂರೆಗೊ೦ಡವು. ಸ೦ಗೀತ ಸ೦ಯೋಜನೆ ಮೃದ೦ಗ ವಿದ್ವಾನ ಜಿ.ಗುರುಮೂರ್ತಿ ಮತ್ತು ಶ್ರೀವತ್ಸ, ಸಾಹಿತ್ಯ ಮತ್ತು ಪರಿಕಲ್ಪನೆ ಶತಾವಧಾನಿ ಡಾ.ಆರ್.ಗಣೇಶ್, ನೃತ್ಯ ಸ೦ಯೋಜನೆ ಮತ್ತು ನಟುವಾಂಗ ಜ್ಯೋತಿ ಪಟ್ಟಾಭಿರಾಮ್, ಬೆಳಕು ಮತ್ತು ವೇದಿಕೆ ನಿರ್ವಹಣೆ ರವಿಶ೦ಕರ.

ಕಾರ್ಯಕ್ರಮದಲ್ಲಿ ಅಭಿನಯಿಸಿದ ಕಲಾವಿದರು– ಎ೦.ಸ್ವಾಮಿ, ಪ್ರಸನ್ನಕುಮಾರ್, ಸೌವಿಕ್ ಘೋಷಾಲ್, ಶ್ರವಣ್, ನವ್ಯಾ, ಸುಮನಾ, ಪೂಜಾ, ಶಿಲ್ಪಾ, ರ೦ಜನಾ, ಅನುರಾಧಾ, ಅ೦ಜುಶ್ರೀ, ಪೂರ್ಣಿಮಾ, ಕಾವ್ಯಶ್ರೀ, ಎನ್.ಸುಮನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.