ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ಅಂತರದ ಸೋಲು ಕಂಡಿದೆ. ಇದರೊಂದಿಗೆ, ಈ ಮಾದರಿಯ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶಿವಂ ದುಬೆ ಮತ್ತು ಜಸ್ಪ್ರಿತ್ ಬೂಮ್ರಾ ಅವರ ಅಜೇಯ ಓಟಕ್ಕೆ ತೆರೆ ಬಿದ್ದಿದೆ.

ಮೆಲ್ಬರ್ನ್ನಲ್ಲಿ ಇಂದು (ಶುಕ್ರವಾರ) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಬಿರುಸಿನ ಅರ್ಧಶತಕ ಗಳಿಸಿದ ಅಭಿಷೇಕ್ ಶರ್ಮಾ (68) ಮತ್ತು ಹರ್ಷಿತ್ ರಾಣಾ (35) ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟರ್ ಎರಡಂಕಿಯನ್ನೂ ಮುಟ್ಟಲಿಲ್ಲ. ಹೀಗಾಗಿ, 18.4 ಓವರ್ಗಳಲ್ಲಿ 125 ರನ್ ಗಳಿಸಿ ಆಲೌಟ್ ಆಗಬೇಕಾಯಿತು.

ಈ ಗುರಿಯನ್ನು ಕಾಂಗರೂ ಪಡೆ, 13.2 ಓವರ್ಗಳಲ್ಲೇ ತಲುಪಿತು. 6 ವಿಕೆಟ್ಗೆ 126 ರನ್ ಗಳಿಸುವ ಮೂಲಕ ಜಯದ ನಗೆ ಬೀರಿತು. ಇದರೊಂದಿಗೆ, ಐದು ಪಂದ್ಯಗಳ ಟೂರ್ನಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿತು.

ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಜೋಶ್ ಹ್ಯಾಜಲ್ವುಡ್ (13 ರನ್ಗೆ 3 ವಿಕೆಟ್) ಪಂದ್ಯಶ್ರೇಷ್ಠ ಎನಿಸಿದರು.
.ಎರಡನೇ ಟಿ20 | ಆಸೀಸ್ಗೆ ಸುಲಭದ ತುತ್ತಾದ ಭಾರತ: 6.4 ಓವರ್ ಬಾಕಿ ಇರುವಂತೆ ಗೆಲುವು.Womens World Cup: ಜೆಮಿಮಾ ಶತಕ; ಆಸೀಸ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ.
ದುಬೆ, ಬೂಮ್ರಾ ಓಟಕ್ಕೆ ತಡೆ
ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಲ್ರೌಂಡರ್ ಶಿವಂ ದುಬೆ ಹಾಗೂ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರ ಸತತ ಗೆಲುವಿನ ಓಟ, ಈ ಸೋಲಿನೊಂದಿಗೆ ನಿಂತಿತು.

ಈ ಪಂದ್ಯಕ್ಕೂ ಮುನ್ನ ದುಬೆ ಅವರು 2019ರಿಂದ 2025ರ ಅವಧಿಯಲ್ಲಿ ಆಡಿದ ಸತತ 37 ಪಂದ್ಯಗಳಲ್ಲಿ ಹಾಗೂ ಬೂಮ್ರಾ ಅವರು 2021ರಿಂದ 2025ರ ಅವಧಿಯಲ್ಲಿ ಆಡಿದ ಸತತ 24 ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು.

ಚುಟುಕು ಕ್ರಿಕೆಟ್ನಲ್ಲಿ ಸತತವಾಗಿ ಹೆಚ್ಚು ಪಂದ್ಯ ಗೆದ್ದ ಆಟಗಾರರ ಸಾಲಿನಲ್ಲಿ ದುಬೆ ಅಗ್ರಸ್ಥಾನದಲ್ಲಿದ್ದು, ಬೂಮ್ರಾ ಮೂರರಲ್ಲಿದ್ದಾರೆ.

2022ರಿಂದ 2024ರ ವರೆಗೆ ಆಡಿದ 27 ಪಂದ್ಯಗಳಲ್ಲಿ ಗೆಲುವು ಕಂಡಿರುವ ಉಗಾಂಡದ ಪಾಸ್ಕಲ್ ಮುರುಂಗಿ ಎರಡನೇ ಸ್ಥಾನದಲ್ಲಿದ್ದಾರೆ. ಕನ್ನಡಿಗ ಮನೀಷ್ ಪಾಂಡೆ ನಾಲ್ಕನೇ ಸ್ಥಾನದಲ್ಲಿದ್ದು, 2018ರಿಂದ 2020ರ ಅವಧಿಯಲ್ಲಿ ಭಾರತದ ಪರ 20 ಪಂದ್ಯ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.