ಭಾನುವಾರ, ಜೂನ್ 20, 2021
25 °C

ನಾಗರಿಕ ಸೇವಾ ಕಾಯ್ದೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: `ಸರ್ಕಾರಿ ಕೆಲಸ ಆಗಲಿದೆ ಬಲು ಸುಲಭ~ ಎಂಬ ಘೋಷಣೆಯೊಂದಿಗೆ ತಾಲ್ಲೂಕಿನಲ್ಲಿ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ-2011 ಗುರುವಾರದಿಂದ ಜಾರಿಗೆ ಬಂದಿದೆ.ಇಲ್ಲಿಯ ಮಿನಿ ವಿಧಾನಸೌಧ ಪ್ರಾಂಗಣದಲ್ಲಿ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ದೀಪ ಬೆಳಗಿಸುವ ಮೂಲಕ ನೂತನ ಕಾಯ್ದೆ ಜಾರಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಖಾತರಿ ಕಾಯ್ದೆ ಜಾರಿಯಿಂದ ಜನಪ್ರತಿನಿಧಿಗಳ ಕೆಲಸದ ಭಾರ ಸ್ವಲ್ಪ ಕಡಿಮೆಯಾಗಲಿದೆ. ಈ ಯೋಜನೆ ಮೊದಲಿಗೆ ಜಿಲ್ಲೆಗೆ  ತರುವಲ್ಲಿ ಜಿಲ್ಲಾಧಿಕಾರಿ ಸಮೀರ್ ಶುಕ್ಲ ಮತ್ತು ಶಾಸಕ ಪ್ರಭು ಚವ್ಹಾಣ್ ಕಾರಣರು ಎಂದರು.ಚರ್ಮ ನಿಗಮದ ಅಧ್ಯಕ್ಷ ರಾಜೇಂದ್ರ ವರ್ಮಾ, ಈ ಯೋಜನೆಯಿಂದ ಜನಸಾಮಾನ್ಯರಿಗೆ ತುಂಬ ಅನುಕೂಲವಾಗಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.