ಮಂಗಳವಾರ, ಏಪ್ರಿಲ್ 20, 2021
29 °C

ನಾಟಿ ವೈದ್ಯರಿಂದ ಆರೋಗ್ಯ ಸಚಿವರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಮಠಕಲ್: ನಾಟಿ ವೈದ್ಯರಿಗೆ ನೆರೆಯ ಆಂಧ್ರ ಪ್ರದೇಶ ಮಾದರಿಯಲ್ಲಿ ಮಾನ್ಯತೆ ನೀಡುವ ಸಂಬಂಧ ಸದ್ಯದಲ್ಲೇ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ವಿಧಾನ ಸಭೆಯಲ್ಲಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ಸಚಿವರ ಸ್ವಗೃಹದಲ್ಲಿ ರಾಜ್ಯಾಧ್ಯಕ್ಷ ಪಿ.ಕೆ. ಕುಮಾರ ನೇತೃತ್ವದಲ್ಲಿ ರಾಜ್ಯ ಪ್ರಥಮ ಚಿಕಿತ್ಸಕರು ಹಾಗೂ ಜನಪದ ವೈದ್ಯರ ಸಂಘದ ವತಿಯಿಂದ ಎಲ್ಲಾ ಜಿಲ್ಲೆಯ ಅಧ್ಯಕ್ಷರು ಅವರನ್ನು ಅಭಿನಂದಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷ ಡಾ. ಅನಂತಯ್ಯ ಗುರುಮಠಕಲ್ ತಾಲೂಕು ಅಧ್ಯಕ್ಷರಾದ ಡಾ.ಎಸ್.ಕೆ.ರೆಡ್ಡಿ ಸೇರಿ ವಿವಿಧ ಜಿಲ್ಲೆ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಹಿರಿಯ ಅಧಿಕಾರಿಗಳಿಂದ ನಾಟಿ ವೈದ್ಯರಿಗೆ ಕಿರುಕುಳ: ನಾಟಿ ವೈದ್ಯರು ಗ್ರಾಮೀಣ ಪ್ರದೇಶದ ಬಡ ಜನರಿಗೆ ಅವರ ಬಾಗಿಲಿಗೆ ಹೋಗಿ ಸೇವೆ ನೀಡುತ್ತಿದ್ದು ನಮ್ಮ ಸೇವೆಗೆ ಜನರು ಕೂಡ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ .ಅಂತಹದರಲ್ಲಿ ಡಿಹೆಚ್‌ಓಗಳಂತಹ ಹಿರಿಯ ಅಧಿಕಾರಿಗಳು ಇಲಾಖೆ ಕಲಂ 2007 ಮತ್ತು ಇತರ ಕಾನೂನು ಹೇಳಿ ಸೇವೆಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆಂದು ಮನವಿ ಮಾಡಿದಾಗ ತಮ್ಮ  ಸೇವೆಗೆ ಅಡ್ಡಿಯಾಗದಂತೆ ಅಧಿಕಾರಿಗಳಿಗೆ ಸಚಿವರು ಎಚ್ಚರಿಕೆ ನೀಡಿದ್ದಾರೆಂದು ಎಸ್.ಕೆ.ರೆಡ್ಡಿ ತಿಳಿಸಿದರು.ಆಗಸ್ಟ್ ಮೊದಲ ವಾರ ಮೌನ ರ‌್ಯಾಲಿ: ಹಿರಿಯ ಅಧಿಕಾರಿಗಳ ಕಿರುಕುಳವನ್ನು ವಿರೋಧಿಸಿ ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಆಗಸ್ಟ್ ಮೊದಲ ವಾರ ನಾಟಿ ವೈದ್ಯರ ಸಾಮೂಹಿಕ ಮೌನ ರ‌್ಯಾಲಿಯನ್ನು ರಾಜ್ಯಧ್ಯಕ್ಷ ಡಾ.ಪಿ.ಕೆ. ಕುಮಾರ ಅವರ ಮಾರ್ಗದರ್ಶನ ಹಾಗೂ ಯಾದಗಿರಿ ಜಿಲ್ಲಾಧ್ಯಕ್ಷ ಡಾ.ವೈ.ಅನಂತಯ್ಯ, ಗುರುಮಠಕಲ್ ತಾಲೂಕು ಅಧ್ಯಕ್ಷ ಎಸ್.ಕೆ.ರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು ರ‌್ಯಾಲಿಯಲ್ಲಿ ಜಿಲ್ಲೆಯ ಶಹಾಪೂರ, ಸುರಪುರ, ಯಾದಗಿರಿ, ಗುರುಮಠಕಲ್ ತಾಲೂಕಿನ ಎಲ್ಲಾ ವೈದ್ಯರು ಪಾಲ್ಗೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.