ವೇದಿಕೆ ಮೇಲೆ ಕಲಾವಿದರು. ಕಪ್ಪು ಬಣ್ಣದ ಇಬ್ಬರ ಕೈಯಲ್ಲಿ ರಾರಾಜಿಸುತ್ತಿದ್ದದ್ದು ಜಂಬೆ ವಾದ್ಯ. ಆಗಾಗ ಅದ್ಯಾವುದೋ ಭಾಷೆಯಲ್ಲಿ ಹಾಡಿನ ಒಂದೊಂದೇ ಸಾಲು ತೊದಲುತ್ತಿದ್ದ ಕಲಾವಿದನ ಕೈ ಚಲನೆ ನೋಡಿಯೇ ನೆರೆದವರೊಮ್ಮೆ ಅವಾಕ್ಕಾಗಬೇಕು. ಹಾಗಿತ್ತು ಆ ವೇಗ, ನಾದ.

ಬೆಂಗಳೂರು ಮೂಲದ `ಆಫ್ರೊ ಡಿ ಏಷ್ಯಾ' ತಂಡದ ಕಲಾವಿದರಾದ ಜಾರ್ಜ್ ಅಬ್ಬಾನ್ (ಡ್ರಮ್ಸ, ಕೊಳಲು ಹಾಗೂ ಗಿಟಾರ್), ಇಮ್ಮಾನ್ಯುಲ್ ಒಸಾಯ್ ಅವುಕು (ಡ್ರಮ್ಸ) ವೇದಿಕೆ ಏರಿ ನಿಂತರೆ ಭಾರತದಲ್ಲೇ ಆಫ್ರಿಕಾ ನಿರ್ಮಾಣವಾಗುತ್ತದೆ. ಅಲ್ಲಿಯ ಸಾಂಪ್ರದಾಯಿಕ ಡ್ರಮ್ ನಾದಕ್ಕೆ ಹೆಜ್ಜೆಗಳ ಚಿತ್ತಾರ ಮೂಡುತ್ತದೆ. 2011ರಲ್ಲಿ ಪ್ರಾರಂಭವಾದ ಈ ತಂಡ ನಗರದಲ್ಲಿ ನಿರಂತರವಾಗಿ ಸಂಗೀತದ ರುಚಿ ಹತ್ತಿಸುತ್ತಿದೆ.

ಈ ತಂಡವನ್ನು ಕಟ್ಟಿದ್ದು ಕೇರಳ ಮೂಲದ, ಬೆಂಗಳೂರನ್ನೇ ಆಶ್ರಯಿಸಿರುವ ಶಾಮ್ರಾಕ್. 12ನೇ ವಯಸ್ಸಿನಿಂದಲೇ ಹುಟ್ಟಿಕೊಂಡ ಡ್ರಮ್ಸ ವ್ಯಾಮೋಹ ಹಾಗೂ ದುಬೈನಲ್ಲಿ ಎನ್ನೆ ಒಡೆಲ್ಲೆ ಬೀರಿದ ಪ್ರಭಾವ ಭಾರತದಲ್ಲಿ ಡ್ರಮ್ ನಾದ ಹರಡಲು ಕಾರಣವಾಯಿತು.

ದುಬೈನಲ್ಲಿ ಅಮೆರಿಕನ್ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಸಂಗೀತದತ್ತ ಹೆಚ್ಚು ಒಲವು. ಎನ್ನೆ ಅವರ ಬ್ಯಾಂಡ್ನಿಂದ ಅನೇಕ ಕೌಶಲಗಳನ್ನು ಕಲಿತ ನಂತರ ಡ್ರಮ್ನತ್ತ ಇವರ ತುಡಿತ ಏರತೊಡಗಿತು. ಅದೇ ಸಮಯದಲ್ಲಿ ಆರ್ಥಿಕ ಹಿಂಜರಿತ ಸಮಸ್ಯೆ ಎದುರಾದಾಗ ನಿರ್ಧಾರ ಗಟ್ಟಿಯಾಯಿತು.

ರಾಷ್ಟ್ರೀಯ ನೃತ್ಯ ಕಂಪೆನಿ ಘಾನಾದಲ್ಲಿನ ಕಲಾವಿದರ ಪರಿಚಯವಿದ್ದ ಶಾಮ್ ಇಬ್ಬರು ಕಲಾವಿದರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ತಾವು ನಾದ ಹೊಮ್ಮಿಸುವುದರೊಂದಿಗೆ ಪ್ರೇಕ್ಷಕರಿಗೂ ವಾದ್ಯ ನುಡಿಸುವ ಅವಕಾಶ ಕಲ್ಪಿಸುವುದು ಈ ತಂಡದ ವಿಶೇಷ. 300 ಡ್ರಮ್ಸನಿಂದ ಪ್ರಾರಂಭವಾದ ಬ್ಯಾಂಡ್ ಜನರ ಸ್ಪಂದನೆಯೊಂದಿಗೆ ಬೆಳೆಯುತ್ತಾ ಸಾಗಿತು. ಇಂದಿಗೆ 2500 ಡ್ರಮ್ಗಳಿದ್ದರೂ ಸಾಲದು!

`ಸಂಗೀತದ ಬಗ್ಗೆ ಅಪಾರವಾದ ಆಸಕ್ತಿ. ಎಂಎನ್ಸಿ ಕಂಪೆನಿ ಬಿಟ್ಟು ಬ್ಯಾಂಡ್ಗೆ ಒಗ್ಗಿಕೊಳ್ಳುತ್ತೇನೆ ಎಂದಾಗ ಮನೆ ಹಾಗೂ ಸ್ನೇಹಿತರಿಂದ ತೀವ್ರ ವಿರೋಧ ಬಂತು. ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿ ಮುನ್ನಡೆದೆ. ಪ್ರಾರಂಭದಲ್ಲಿ ಆರ್ಥಿಕವಾಗಿ ಹಾಗೂ ವಿದೇಶಿ ಕಲಾವಿದರನ್ನು ತರುವ ಬಗ್ಗೆ ತೊಂದರೆಗಳಾದವು. ಆದರೆ ಸ್ನೇಹಿತ ಎಂ.ಜಿ.ಕ್ಸೇವಿಯರ್ ಸಹಾಯದಿಂದ ಬ್ಯಾಂಡ್ ಪ್ರಾರಂಭಿಸಿದೆ. ಮೊದಲು ಎಷ್ಟು ಸಂಪಾದಿಸುತ್ತಿದ್ದೆನೋ ಅದರ ಹತ್ತು ಪಟ್ಟು ಜಾಸ್ತಿ ಹಣ ಸಂಪಾದಿಸುತ್ತೇನೆ. ಈಗ ಎಲ್ಲರಿಂದಲೂ ಪ್ರೀತಿಯ, ಪ್ರೋತ್ಸಾಹದ ಸುರಿಮಳೆ' ಎಂದು ಬೀಗಿದರು ತಂಡದ ರೂವಾರಿ ಶಾಮ್.

ಅಂದಹಾಗೆ, ಈ ತಂಡದಲ್ಲಿನ ಇಬ್ಬರು ಆಫ್ರಿಕನ್ ಕಲಾವಿದರು ವಿಶೇಷ ಸಾಧನೆ ಮಾಡಿದವರು. ಜಾರ್ಜ್ ಮೂಗಿನಿಂದ ಕೊಳಲು ನುಡಿಸುವ ಕಲೆಯನ್ನು ಸಿದ್ಧಿಸಿಕೊಂಡಿದ್ದರೆ, ಅಬ್ಬಾನ್ ಅವರು ಅಮೆರಿಕದ ವೈಟ್ ಹೌಸ್ನಲ್ಲಿ ಪ್ರದರ್ಶನ ನೀಡಿದವರು. ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್, ಕ್ಲಿಂಟನ್, ಒಬಾಮಾ ಅವರಿಂದ ಮೆಚ್ಚುಗೆ ಪಡೆದಿರುವ ಇವರು ಇಂಗ್ಲೆಂಡ್, ಕೊರಿಯಾ, ಪೋಲೆಂಡ್, ಜಪಾನ್ ಮುಂತಾದ ಕಡೆ ಪ್ರತಿಭಾ ಪ್ರದರ್ಶನ ಮಾಡಿದ್ದಾರೆ.

`ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲೇ ನನ್ನ ನಿವಾಸ. ಸ್ವಂತ ಊರನ್ನು ಮಿಸ್ ಮಾಡಿಕೊಳ್ಳುತ್ತೇನೆ, ನಿಜ. ಆದರೆ ಇಲ್ಲಿನ ಆಹಾರ, ಜನರ ಪ್ರೋತ್ಸಾಹಕ್ಕೆ ನಾನು ಒಗ್ಗಿಕೊಂಡಿದ್ದೇನೆ. ಅನ್ನ, ಕರ್ರಿ ಮಾಡುವುದನ್ನು ಕಲಿತಿದ್ದೇನೆ. ಇಲ್ಲಿಯ ಸಂಗೀತ, ಸಂಪ್ರದಾಯ ಇಷ್ಟವಾಗುತ್ತದೆ. ಇದೂ ನನ್ನ ಮನೆಯಂತೆ ಭಾಸವಾಗುತ್ತದೆ' ಎನ್ನುತ್ತಾರೆ ಅವುಕು.

`ಹೊಸತನ್ನು ಕಲಿಯುವ ಭರದಲ್ಲಿ ಎಂದಿಗೂ ಮನಸ್ತಾಪಗಳು ಉಂಟಾಗಿಲ್ಲ' ಎನ್ನುವ ಈ ತಂಡದ ಸದಸ್ಯರಿಗೆ ಫ್ರೆಂಚ್ನ ಗಿಟಾರಿಸ್ಟ್ ಏಲಿ ಒಸಿಪೊವಿಚ್, ಜಪಾನ್ನ ಮಾಸಾ ತಯುಟಾ ಹಾಗೂ ಹಿರೋನೊ ತಯುಟಾ ಅವರೊಂದಿಗೆ ವೇದಿಕೆ ಹಂಚಿಕೊಂಡ ಅನುಭವವೂ ಇದೆ. ದೇಸೀ ಹಾಗೂ ವಿದೇಶಿ ನೆಲದಲ್ಲಿ ಸುಮಾರು 140ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಇವರದು.

ಭಾರತದಲ್ಲಿರುವ ಏಕೈಕ ಆಫ್ರೊ- ಏಷ್ಯನ್ ಬ್ಯಾಂಡ್ ಇದಾಗಿದ್ದು, ಸಾಹಿತ್ಯಕ್ಕಿಂತ ರಿದಂ ಪ್ರಮುಖವಾಗಿದೆ.

ಭಾರತದಲ್ಲಿ ಡ್ರಮ್ಸ ವಾದಕರನ್ನು ಜನಪ್ರಿಯಗೊಳಿಸುವ ಉದ್ದೇಶ ಹೊಂದಿರುವ ತಂಡ ಸಂಗೀತವನ್ನು ಸಂಯೋಜಿಸಿ ರೆಕಾರ್ಡ್ ಕೂಡ ಮಾಡಿಟ್ಟಿದೆ. ಸದ್ಯದಲ್ಲೇ ಆಲ್ಬಂ ಬಿಡುಗಡೆ ಮಾಡುವ ಗುರಿ ಇದೆ.

`ಪ್ರೇಕ್ಷಕರ ಮೊಗದಲ್ಲಿ ನಗು ಉಕ್ಕಿದ ಎಲ್ಲಾ ಕ್ಷಣವೂ ನಮಗೆ ಸಂತಸ ನೀಡಿದೆ. ಕಳೆದ ವರ್ಷ ನೀಡಿದ ಫಾಕ್ ಅವಾರ್ಡ್ಸ್ಗಾಗಿ ಆಯ್ಕೆ ಮಾಡಿದ 31 ತಂಡಗಳಲ್ಲಿ ನಮ್ಮ ತಂಡವೂ ಇತ್ತು ಎಂಬುದು ಹೆಮ್ಮೆಯ ಸಂಗತಿ. ಒತ್ತಡವನ್ನು ಕಡಿಮೆ ಮಾಡುವ, ಪ್ರೇಕ್ಷಕರನ್ನೂ ಒಳಗೊಂಡು ನಡೆಸುವ ಕಾರ್ಯಕ್ರಮ ಇದು. ಹಾಗಿ ಹೆಚ್ಚಾಗಿ ಕಾರ್ಪೊರೇಟ್ ವಲಯಗಳಲ್ಲೇ ಕಾರ್ಯಕ್ರಮಗಳು ನಡೆಯುತ್ತವೆ. ವಾರದಲ್ಲಿ ಮೂರ್ನಾಲ್ಕು ದಿನಗಳಂತೂ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿರತ್ತೇವೆ. ಸೆಪ್ಟೆಂಬರ್ನಲ್ಲಿ ಮಲೇಷ್ಯಾ, ಅಕ್ಟೋಬರ್ನಲ್ಲಿ ಶ್ರೀಲಂಕಾದಲ್ಲಿ ಕಾರ್ಯಕ್ರಮ ನೀಡಲಿದ್ದೇವೆ' ಎಂದು ಸಾಧನೆಯ ದಾರಿಯ ಬಗ್ಗೆ ಮಾಹಿತಿ ತೆರೆದಿಟ್ಟರು ಶಾಮ್.

ಈ ತಂಡದ್ದು ಇನ್ನೊಂದು ವಿಶೇಷತೆ ಇದೆ. ಇದರ ಸದಸ್ಯರು ವಾಸವಾಗಿರುವುದು ದೊಮ್ಮಲೂರಿನಲ್ಲಿ. ಅಲ್ಲಿ `ಕಮ್ಯುನಿಟಿ'ಯೊಂದನ್ನು ಕಟ್ಟಿಕೊಂಡಿದ್ದಾರೆ. ಅಲ್ಲೇ ಹತ್ತಿರವಿರುವ ಪಾರ್ಕ್ನಲ್ಲಿ ಬಿಡುವಿನ ವೇಳೆ ಎಲ್ಲರೂ ಸೇರುತ್ತಾರೆ. 8ರಿಂದ 80 ವರ್ಷದವರೂ ಇಲ್ಲಿ ಸೇರಿ ಸಂಗೀತದ ಪರಿಮಳವನ್ನು ಪಸರಿಸುತ್ತಾರೆ. ಡ್ರಮ್ಸ ಅಷ್ಟೇ ಅಲ್ಲದೆ ಎಲ್ಲ ರೀತಿಯ ಸಂಗೀತ ವಾದ್ಯಗಳು ಇಲ್ಲಿ ನಾದ ಹೊಮ್ಮಿಸುತ್ತವೆ. ದೇಶ, ವಿದೇಶದ ವಾದ್ಯಗಳನ್ನು ಕಲಿಯುವ ಆಸಕ್ತಿ ಇರುವವರಿಗೆ ಇದು ವರದಾನ.

ತಂಡದ ಸದಸ್ಯರು: ಶಾಮ್ರಾಕ್, ಅವುಕು, ಅಬ್ಬಾನ್, ವಿಸಘ್ (ಪಕ್ಕವಾದ್ಯ ಹಾಗೂ ಕಲಾ ನಿರ್ದೇಶಕ), ಶ್ರೀ, ಜೋಸೆಫ್, ವಾರಿಯಮ್, ಥಾಮಸ್ (ಡ್ರಮ್ಸ), ಬಾಬಿ (ಬೇಸ್ ಗಿಟಾರ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.