ಶುಕ್ರವಾರ, ಜೂನ್ 18, 2021
28 °C

ನಾಯಕರ ನುಡಿಗಳು..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

* ಕಾಂಗ್ರೆಸ್‌ನವರಿಗೆ ಈಗಾಗಲೇ ನರೇಂದ್ರ ಮೋದಿ ಎಂದರೆ ನಡುಕ ಆರಂಭವಾಗಿದೆ. ಈ ನೆಲದ ಪುಣ್ಯ ಪುರುಷ ಸಿದ್ಧಾರೂಢರ ಆಶೀರ್ವಾದದಿಂದ ಮೋದಿ ಪ್ರಧಾನಿಯಾಗುವುದು ನಿಶ್ಚಿತ

ಜಗದೀಶ ಶೆಟ್ಟರ್, ವಿಧಾನಸಭೆ ವಿರೋಧ ಪಕ್ಷದ ನಾಯಕ

* ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಮಹಾತ್ಮ ಗಾಂಧಿ ಅವರ ಕನಸಿನ ರಾಮ ರಾಜ್ಯ ನಿರ್ಮಾಣ ಆಗಲಿಲ್ಲ. ಈ ಕನಸನ್ನು ನನಸು ಮಾಡಲು ನರೇಂದ್ರ ಮೋದಿ ಪ್ರಧಾನಿಯಾಗಬೇಕಾದ ಸಮಯ ಬಂದಿದೆ. ಇದಕ್ಕಾಗಿ ಮುಂಬೈ ಕರ್ನಾಟಕ ಭಾಗದಲ್ಲಿರುವ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು.

ಗೋವಿಂದ ಕಾರಜೋಳ, ಮಾಜಿ ಸಚಿವ

* ಟಿ.ವಿ, ಮೊಬೈಲ್‌ ಹ್ಯಾಂಡ್‌ಸೆಟ್‌ ಖರೀದಿ ಮಾಡುವಾಗ ಜನರು ಸಾಕಷ್ಟು ವಿಚಾರ ಮಾಡುತ್ತಾರೆ. ಆದರೆ, ದೇಶವನ್ನು ಆಳಬೇಕಾದ ಸಮರ್ಥ ನಾಯಕನನ್ನು ಆಯ್ಕೆ ಮಾಡುವಾಗ ಇದೇ ರೀತಿ ವಿಚಾರ ಮಾಡಬೇಕು. ಅದರಲ್ಲೂ, ಇತರ ಪಕ್ಷಗಳು ಬಿಂಬಿಸುತ್ತಿರುವ ನಾಯಕರೊಂದಿಗೆ ತುಲನೆ ಮಾಡಿದಾಗ ಮುಂಚೂಣಿಯಲ್ಲಿ ನಿಲ್ಲುವ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು.

ಶಿವಕುಮಾರ ಉದಾಸಿ, ಸಂಸದ

* ನರೇಂದ್ರ ಮೋದಿ ಪ್ರಧಾನಿಯಾದರೆ ಈ ಭಾಗದ ಬಹುದಿನದ ಬೇಡಿಕೆಯಾದ ಕಳಸಾ–ಬಂಡೂರಿ ನಾಲಾ ಯೋಜನೆ ಅನುಷ್ಠಾನ ಖಚಿತ.

ಕೆ.ಎಸ್.ಈಶ್ವರಪ್ಪ,ಮಾಜಿ ಉಪ ಮುಖ್ಯಮಂತ್ರಿ

* ಪಾಕಿಸ್ತಾನದ ಸೈನಿಕರು ನಮ್ಮ ಯೋಧರ ತಲೆ ತೆಗೆಯುತ್ತಾರೆ. ಆದರೆ, ನಮ್ಮ ಪ್ರಧಾನಿ ವಾಷಿಂಗ್ಟನ್‌ನಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿಯನ್ನು ಆಲಂಗಿಸುತ್ತಾರೆ.

ಡಿ.ವಿ.ಸದಾನಂದಗೌಡ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.