ಢಾಕಾ (ಐಎಎನ್ಎಸ್):  ಇಲ್ಲಿಯ ಶೇರ್ ಏ ಬಾಂಗ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿರುವ ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚಿದ ಗಾಯ ಹಾಗೂ ಅಸ್ಥಿರ ಪ್ರದರ್ಶನ ಸಮಸ್ಯೆಯಾಗಿ ಕಾಡುತ್ತಿವೆ.

ಹಿಂದಿನ ಐದು ಟೂರ್ನಿಗಳಲ್ಲಿ ಸೆಮಿಫೈನಲ್ನಲ್ಲೇ ಮುಗ್ಗರಿಸಿರುವ ನ್ಯೂಜಿಲೆಂಡ್, ಈ ಸಲ ವೈಫಲ್ಯದ ಸುಳಿಯಿಂದ ಹೊರಬಂದು ಫೈನಲ್ನತ್ತ ಮುನ್ನುಗ್ಗಲು ತವಕಿಸುತ್ತಿದೆ. ವಿಶ್ವಕಪ್ ಟೂರ್ನಿಗಿಂತ ಮುಂಚೆ ನಡೆದ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ, ಬಾಂಗ್ಲಾದೇಶ ವಿರುದ್ಧ 0-4ರಿಂದ, ಭಾರತ ವಿರುದ್ಧ 0-5ರಿಂದ ಹಾಗೂ ಪಾಕಿಸ್ತಾನ ವಿರುದ್ಧ 0-2ರಿಂದ ಸೋತು ಸುಣ್ಣವಾಗಿತ್ತು.

ವಿಶ್ವಕಪ್ನಲ್ಲಿ ಕೀನ್ಯಾ ವಿರುದ್ಧ ಸುಲಭವಾಗಿ ಗೆದ್ದು, ಆಸ್ಟ್ರೇಲಿಯಾ ಎದುರು ಸೋತಿದ್ದ ನ್ಯೂಜಿಲೆಂಡ್, ಪಾಕಿಸ್ತಾನ ವಿರುದ್ಧ 110 ರನ್ಗಳ ಭರ್ಜರಿ ವಿಜಯ ಸಾಧಿಸಿತ್ತು. ಕ್ವಾರ್ಟರ್ಫೈನಲ್ನಲ್ಲಿ ಜಾಗ ಖಚಿತಪಡಿಸಿಕೊಂಡ ಮೇಲೆ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತಿತ್ತು.

ನ್ಯೂಜಿಲೆಂಡ್-ದಕ್ಷಿಣ ಆಫ್ರಿಕಾ ಕ್ವಾರ್ಟರ್ಫೈನಲ್ ಪಂದ್ಯದ ವಿಜೇತರು ಶ್ರೀಲಂಕಾ ಅಥವಾ ಇಂಗ್ಲೆಂಡ್ ತಂಡವನ್ನು ಸೆಮಿಫೈನಲ್ನಲ್ಲಿ ಎದುರಿಸಲಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಣಕಾಲು ನೋವಿಗೆ ತುತ್ತಾದ ನಾಯಕ ಡೇನಿಯಲ್ ವೆಟೊರಿ, ಆಗಿನಿಂದಲೂ ಆಡುವ 11ರ ತಂಡದಿಂದ ಹೊರಗುಳಿದಿದ್ದಾರೆ. ರಾಸ್ ಟೇಲರ್ ಹಂಗಾಮಿ ನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಧ್ಯಮ ವೇಗದ ಬೌಲರ್ ಕೈಲ್ ಮಿಲ್ಸ್ ಸಹ ಗಾಯಾಳು ಪಟ್ಟಿ ಸೇರಿದ್ದಾರೆ. ವೇಗದ ಬೌಲರ್ ಹಾಮೀಶ್ ಬೆನೆಟ್ ಗಾಯದ ಕಾರಣದಿಂದ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಡೆರಿಲ್ ಟಫಿ ಕೂಡ ಈ ಪಟ್ಟಿ ಸೇರಿದ್ದಾರೆ.
ವೆಟೊರಿ ಮತ್ತು ಮಿಲ್ಸ್ ಶೀಘ್ರವೇ ಚೇತರಿಸಿಕೊಂಡು ಆಟಕ್ಕೆ ಮರಳುವ ವಿಶ್ವಾಸವನ್ನು ಟೇಲರ್ ವ್ಯಕ್ತಪಡಿಸಿದ್ದಾರೆ. ಹೀಗಿದ್ದೂ ಆ ತಂಡವನ್ನು ಗಾಯ ಮತ್ತು ಅಸ್ಥಿರ ಆಟ ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.