ಶುಕ್ರವಾರ, ಜೂನ್ 18, 2021
24 °C

ನಿರಂತರ ಜ್ಯೋತಿಗೆ ಲೋಕೋಪಯೋಗಿ ಸಚಿವ ಉದಾಸಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಸರ್ಕಾರದಲ್ಲಿ ಬದ್ಧತೆ ಇದ್ದರೆ, ಚುನಾಯಿತ ಪ್ರತಿನಿಧಿಗಳಿಗೆ ಅದನ್ನು ಅನುಷ್ಠಾನಗೊಳಿಸಲು ಆಸಕ್ತಿ ಇದ್ದಲ್ಲಿ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಹೇಳಿದರು.ಜಿ.ಪಂ. ಹಾನಗಲ್ ತಾ.ಪಂ. ಹಾಗೂ ಕಿರವಾಡಿ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಹಾನಗಲ್ ತಾಲ್ಲೂಕು ಕಿರವಾಡಿಯಲ್ಲಿ ಏರ್ಪಡಿಸಿದ್ದ ಕಿರವಾಡಿ ಗ್ರಾ.ಪಂ. ವ್ಯಾಪ್ತಿಯ `ನಿರಂತರ ಜ್ಯೋತಿ~ ಕಾಮಗಾರಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಜನಪ್ರತಿನಿಧಿಗಳಾದವರಿಗೆ ಜನರ ಸಮಸ್ಯೆ ಹಾಗೂ ನೋವು-ನಲಿವುಗಳಿಗೆ ಸ್ಪಂಧಿಸುವ ಗುಣವಿರಬೇಕು ಹಾಗೂ ಅದಕ್ಕೆ ಸಾರ್ವಜನಿಕರು ತಕ್ಕ ಸಹಕಾರ ನೀಡಬೇಕು ಎಂದ ಅವರು, ಯುಟಿಪಿ ಹಾಗೂ ತಿಳವಳ್ಳಿ ಏತ ನೀರಾವರಿ ಯೋಜನೆ ಗಳಂತಹ ಲಾಭದಾಯಕ ಯೋಜನೆ ಗಳನ್ನು ಜಿಲ್ಲೆಗೆ ತರುವಲ್ಲಿ ಜನಪ್ರತಿನಿಧಿಗಳ ಪ್ರಯತ್ನ ನಿಂತರವಾಗಿ ರಬೇಕು ಎಂದರು.ಜಿಲ್ಲೆಯ ಶಿಗ್ಗಾವಿ ಹಾಗೂ ಸವಣೂರ ತಾಲ್ಲೂಕಿನ ಪ್ರತಿ ಮೂರು ಪೀಡರ್‌ಗಳಲ್ಲಿ ನಿರಂತರ ಜ್ಯೋತಿ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಹಾವೇರಿ ತಾಲ್ಲೂಕಿನ ಹತ್ತು ಪೀಡರ್‌ಗಳಿಗೆ ಹಾಗೂ ಹಾನಗಲ್ ತಾಲ್ಲೂಕಿನ 14 ಫೀಡರ್‌ಗಳಿಗೆ ವಿಸ್ತರಿಸಲು ಕ್ರಮಕೈಕೊಳ್ಳ ಲಾಗಿದೆ. ಇದರಿಂದ ಹಾನಗಲ್ ತಾಲ್ಲೂಕಿನ 162 ಹಾಗೂ ಹಾವೇರಿ ತಾಲ್ಲೂಕಿನ 93 ಗ್ರಾಮಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ ಎಂದು ತಿಳಿಸಿದರು.ಹಾನಗಲ್ ತಾಲ್ಲೂಕಿನ 16 ಕೋಟಿ ರೂ. ಹಾಗೂ ಹಾವೇರಿ ತಾಲ್ಲೂಕಿಗೆ 13.66 ಕೋಟಿ ರೂ. ಸೇರಿ ಒಟ್ಟು  ಅಂದಾಜು 29.66 ಕೋಟಿ ರೂ. ವೆಚ್ಚದಲ್ಲಿ ನಿರಂತರ ಜ್ಯೋತಿಯಿಂದ ಗ್ರಾಮಗಳಲ್ಲಿ ಸಹ ದಿನದ 24 ಗಂಟೆ ನಿರಂತರವಾಗಿ ವಿದ್ಯುತ್ ಸೌಲಭ್ಯ ಸಿಗಲಿದೆ. ಇದರಿಂದ ಮೂಲಭೂತ ಸೌಕರ್ಯಕ್ಕೆ ಪ್ರಾಶಸ್ತ್ಯ ನೀಡಿದಂತಾಗಿದೆ ಎಂದರು.ಜಿ.ಪಂ.ಸದಸ್ಯ ಬಸವರಾಜ ಹಾದಿಮನಿ ಮಾತನಾಡಿ, ಸಮಗ್ರ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಕಾರ ಹಾಗೂ ಹೊಣೆಗಾರಿಕೆ ಪ್ರಮುಖ ಪಾತ್ರವಹಿಸುತ್ತದೆ. ಯೋಜನೆಯ ಸದುಪಯೋಗವನ್ನು ಸಮರ್ಪಕ ರೀತಿಯಲ್ಲಿ  ಬಳಕೆಮಾಡಿ ಕೊಂಡಾಗ ಮಾತ್ರ ಯೋಜನೆಯ ಸಫಲತೆ ಸಾಧ್ಯ ಎಂದು ಹೇಳಿದರು.ಸಚಿವರು ಇದೇ ಸಂದರ್ಭದಲ್ಲಿ ಕಿರವಾಡಿ ಗ್ರಾ.ಪಂ.ನೂತನ ಕಟ್ಟಡ, ಕೆಂಚಮ್ಮದೇವಿ ಮಹಾದ್ವಾರ, ಸಿದ್ಧರಾಮೇಶ್ವರ ಸಮುದಾಯ ಭವನಗಳನ್ನು ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ವಿಶೇಷ ಅಭಿವೃದ್ಧಿ ಅನುದಾನದಡಿ ವಾಣಿಜ್ಯ ಮಳಿಗೆ ನಿರ್ಮಾಣ, ಎನ್.ಆರ್.ಇ.ಜಿ.ಅಡಿ ರಾಜೀವಗಾಂಧಿ ಸೇವಾ ಕೇಂದ್ರ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

 

ಎರಡನೇ ಹಂತದ  ಬಸವ ವಸತಿ ಯೋಜನೆಯಡಿ ಆಯ್ಕೆಗೊಂಡ 50 ಫಲಾನುಭವಿಗಳಿಗೆ ಕಾಮಗಾರಿ ಆದೇಶಪತ್ರ ವಿತರಿಸಿದರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನದಲ್ಲಿ ಅಂಗವಿಕಲರಿಗೆ ಸೈಕಲ್ ವಿತರಣೆ ಮಾಡಿದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂಡಿ-ಹಳ್ಳಿಬೈಲ್ ವೀರಕ್ತಮಠದ ಸದಾಶಿವ ಶ್ರೀಗಳು ವಹಿಸಿದ್ದರು. ಕಿರವಾಡಿ ಗ್ರಾ.ಪಂ.ಅಧ್ಯಕ್ಷ ರಾಜೇಸಾಬ ಶೇತಸನದಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಹಾನಗಲ್ ತಾ.ಪಂ.ಅಧ್ಯಕ್ಷೆ ಲಲಿತಾ ಹಿರೇಮಠ, ತಾ.ಪಂ.ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಸದಸ್ಯೆ ರಾಜೇಶ್ವರಿ ಕಲ್ಲೇರ, ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಕಿಶೋರಕುಮಾರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ ಮುದಕಣ್ಣನವರ, ಆರ್.ಎಸ್.ರಾಥೋರ, ಎಸ್.ಎಸ್.ಜಿಂಗಾಡೆ, ಮಂಜುನಾಥ ಹಾವೇರಿ, ತಿಳವಳ್ಳಿ ಹೆಸ್ಕಾಂ ಶಾಖಾಧಿಕಾರಿ ಎಂ.ಆರ್.ಸುಂಕದ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಲಿಂಬೆ, ತಹಸೀಲ್ದಾರ್ ಎಸ್.ಎನ್.ರುದ್ರೇಶ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.