ಸೋಮವಾರ, ಸೆಪ್ಟೆಂಬರ್ 16, 2019
26 °C

ನಿವೇಶನ ಹಂಚಲು ಒತ್ತಾಯ

Published:
Updated:

ತಿ.ನರಸೀಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಸರ್ವೆ ನಂ 7ರ ಸರ್ಕಾರಿ ನಿವೇಶನವನ್ನು ಗೋಪಾಲಪುರ ಪರಿಶಿಷ್ಟರಿಗೆ ಹಂಚುವಂತೆ ಗ್ರಾಮದ ಮುಖಂಡರು ಮಂಗಳವಾರ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಪುಟ್ಟೀರಮ್ಮ ಸಿ.ಮಹದೇವ್ ಮಾತನಾಡಿ ಕಳೆದ ಸೆ.9 ರಂದು ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕರು ನಿವೇಶನ ಕೋರಿ ಬಂದಿರುವ 436 ಅರ್ಜಿಗಳಲ್ಲಿ 203 ಅರ್ಜಿಗಳನ್ನು ಮಾತ್ರ ಪರಿಶೀಲನೆಗೆ ಕಳುಹಿಸಿರುವ ಬಗ್ಗೆ ತಿಳಿಸಿದ್ದಾರೆ. 203 ನಿವೇಶನಗಳನ್ನು ಮಾತ್ರ ಗುರುತಿಸ ಲಾಗಿದೆ ಎಂದಿದ್ದಾರೆ. ಇತರರಿಗೂ ನೀಡಿದರೆ ಎಡಗೈ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಆದ ಕಾರಣ ಇದು ಗೋಪಾಲಪುರ ನಿವಾಸಿಗಳಿಗೆ ಮಾತ್ರ ಹಂಚಿಕೆಯಾಗಬೇಕು ಎಂದರು.ಸಮುದಾಯದ ಮುಖಂಡ ಗೋಪಾಲಸ್ವಾಮಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ  ಗೋಪಾಲ ಪುರದ ನಿವಾಸಿಗಳಿಗೆ ವಸತಿ ಸೌಲಭ್ಯ ದೊರಕಿಸಲೆಂದೇ ಮಾಜಿ ಸಚಿವ ದಿ. ಎನ್.ರಾಚಯ್ಯ ಆರು ದಶಕಗಳ ಹಿಂದೆ ಸರ್ವೇ ನಂ.7ರ ನಾಲ್ಕು ಎಕರೆ ಜಮೀನನ್ನು  ಸ್ವಾಧೀನಪಡಿಸಿ ಕೊಂಡಿ ದ್ದರು. ರೋಸ್ಟರ್ ಪದ್ಧತಿ ಕೈಬಿಟ್ಟು ಗೋಪಾಲಪುರದಲ್ಲಿ ಗ್ರಾಮಸಭೆ ನಡೆಸಿ ಇಲ್ಲಿನ ನಿವಾಸಿಗಳ ಅರ್ಜಿಗಳನ್ನು ಪರಿಗಣಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.ಹಾಲಿ ನಿವೇಶನದಲ್ಲಿ ಶ್ರೀ ದಂಡಿನ ಮಾರಮ್ಮನ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿ ವರ್ಷ ಹಬ್ಬ ಆಚರಿಸಲಾಗುತ್ತಿದೆ. ಇತರೆ ವರ್ಗದವರಿಗೆ ನೀಡಿದಲ್ಲಿ ಹಬ್ಬ ನಡೆ ಯುವ ಸಂದರ್ಭದಲ್ಲಿ ವಿಭಿನ್ನ ಅಭಿಪ್ರಾ ಯಗಳು ಮೂಡುವ ಸಾಧ್ಯತೆ ಇದೆ.ಅಂತಹ ಅಶಾಂತಿ ವಾತಾವರಣಕ್ಕೆ ಅವಕಾಶ  ನೀಡದೇ ಎಡಗೈ ಸಮು ದಾಯಕ್ಕಷ್ಟೆ ನಿವೇಶನಗಳನ್ನು ಮೀಸ ಲಿಟ್ಟು ನೀಡುವಂತೆ ಕೋರಿದರು.  ಎಡಗೈ ಸಮುದಾಯದವರಿಗಲ್ಲದೇ ಇತರರಿಗೆ ಹಂಚಿಕೆ ಮಾಡಲು ಹೊರಟಲ್ಲಿ ಪಟ್ಟಣ ಪಂಚಾಯಿತಿ ವಿರುದ್ಧ ಉಗ್ರ ಪ್ರತಿಭಟನೆ  ಮಾಡಲಾಗುತ್ತದೆ ಎಂದು ಯುವ ಮುಖಂಡ ಮಂಜು ನಾಥ್ ಎಚ್ಚರಿಕೆ ನೀಡಿದರು.ಮುಖಂಡರಾದ ಸಿ.ಮಹಾದೇವ್, ಶೇಷಯ್ಯ, ಶಿವಣ್ಣ, ರೇವಣ್ಣ, ರಾಜಪ್ಪ, ಮೂರ್ತಿ, ಮಾದೇಶ, ಬಸವರಾಜು, ಮಲ್ಲೆೀಶ್, ಲಿಂಗಣ್ಣ ಇತರರು ಹಾಜರಿದ್ದರು.

Post Comments (+)