ಶುಕ್ರವಾರ, ಮೇ 14, 2021
35 °C

ನೀತಿ ಕಥೆ ಹೇಳಿದ ಚಿತ್ರಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನೆಲ, ಜಲ, ವಾಯು, ಶಬ್ದ ಮಾಲಿನ್ಯ, ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವುದು ಸೇರಿದಂತೆ ಅನೇಕ ಕಾರಣಗಳಿಂದ ಪರಿಸರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು... ನಾವು ವಹಿಸಬಹುದಾದ ಎಚ್ಚರಿಕೆ ಕುರಿತಂತೆ ಮಕ್ಕಳು ರಚಿಸಿದ ಚಿತ್ರಗಳು ನೀತಿ ಕಥೆಗಳನ್ನು ಹೇಳುವಂತಿದ್ದವು...!`ವಿಶ್ವ ಪರಿಸರ ದಿನಾಚರಣೆ' ಪ್ರಯುಕ್ತ ಪರಿಸರ ನಿಯಂತ್ರಣ ಮಂಡಳಿ ಮತ್ತು ಪರಿಸರ ರೂರಲ್ ಡೆವಲೆಪ್‌ಮೆಂಟ್ ಸೊಸೈಟಿ ವತಿಯಿಂದ ನಗರದಲ್ಲಿ ವಿದ್ಯಾರ್ಥಿಗಳಿಗಾಗಿ ಸೋಮವಾರ ಏರ್ಪಡಿಸಿದ್ದ `ಚಿತ್ರಕಲಾ' ಸ್ಪರ್ಧೆಯಲ್ಲಿ ಪರಿಸರ ಸಂರಕ್ಷಣೆ ಮಗ್ಗುಲುಗಳು ಅನಾವರಣಗೊಂಡವು.ವಿದ್ಯಾರ್ಥಿಗಳು ತಮ್ಮ ಮನದಲ್ಲಿ ಮೂಡಿದ ಕಲ್ಪನೆಗೆ ರೇಖೆ ಮತ್ತು ಬಣ್ಣದ ಮೂಲಕ ಆಕಾರ ನೀಡಿದರು. ಸಹಜತೆ ಮತ್ತು ಸರಳತೆಯಿಂದ ಕೂಡಿದ್ದ ಚಿತ್ರಗಳು ಗಮನ ಸೆಳೆದವು.`ಪರಿಸರ ಸಂರಕ್ಷಣೆ' ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಸುಮಾರು 65 ಮಂದಿ ಭಾಗವಹಿಸಿದ್ದರು. 3 ವಿಭಾಗಗಳಲ್ಲಿ ಸ್ಪರ್ಧೆ ಜರುಗಿತು.ಜಾಗೃತಿ ನಿರಂತರವಾಗಿರಲಿ:  ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪರಿಸರ ಅಧಿಕಾರಿ ಬಿ.ಎಂ. ಪ್ರಕಾಶ್, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು.  ಮನುಷ್ಯ ಆರೋಗ್ಯವಾಗಿರಬೇಕೆಂದರೆ, ಪರಿಸರ ಕೂಡ ಆರೋಗ್ಯವಾಗಿರಬೇಕು. ವಿವಿಧ ಕಾರಣಗಳ ಕಾರಣ ಕಲುಷಿತವಾಗುತ್ತಿರುವ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಪ್ರತಿ ದಿನವೂ ಆಹಾರ ಉತ್ಪಾದನೆ ಕ್ಷೀಣಿಸುತ್ತಿದ್ದು, ಶೇ 60ರಷ್ಟು ಆಹಾರವು ವ್ಯರ್ಥವಾಗುತ್ತಿದೆ. ಇದು, ಹೀಗೆ ಮುಂದುವರಿದರೆ ಆಹಾರ ಕ್ಷಾಮ ತಲೆದೋರಲಿದೆ ಎಂದು ಎಚ್ಚರಿಸಿದರು.ಪರಿಸರ ರೂರಲ್ ಡೆವಲೆಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ. ಯೋಗೀಶ್, ಸಹಾಯಕ ಅಧಿಕಾರಿ ಹೇಮಲತಾ, ಕೃಷ್ಣೇಗೌಡ, ಫಿಲೋಮಿನಾ, ಸುಧಾ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.