ವೇತನ ಸಮೇತ ಪೂರ್ಣಾವಧಿ ನೇಮಕಗೊಂಡ 15-20 ಕಲಾವಿದರು ಮತ್ತು ತಂತ್ರಜ್ಞರ ತಂಡವೇ ನೀನಾಸಂ ತಿರುಗಾಟ.

ಕರ್ನಾಟಕದ ವಿವಿಧ ಭಾಗಗಳಲ್ಲಿ ಲಭ್ಯವಾಗುವ ರಂಗ ಸೌಲಭ್ಯ ಗಮನದಲ್ಲಿ ಇಟ್ಟುಕೊಂಡು ವ್ಯವಸಾಯಿ ಶಿಸ್ತಿನ ರಂಗ ಪ್ರದರ್ಶನಗಳನ್ನು ಕೊಡುವುದು ತಿರುಗಾಟದ ಗುರಿ. ದೇಶದ ಬಹುತೇಕ ರೆಪರ್ಟರಿ ಸಂಘಟನೆಗಳಿಗಿಂತ ಭಿನ್ನವಾಗಿ ತಿರುಗಾಟವು ತನ್ನ ಖರ್ಚನ್ನು ಬಹುಪಾಲು ಪ್ರದರ್ಶನಗಳಿಂದ ದೊರಕುವ ಹಣದಿಂದಲೇ ನಿಭಾಯಿಸುವ ಪ್ರಯತ್ನ ಮಾಡುತ್ತದೆ.

ಕಳೆದ ಕೆಲ ವರ್ಷಗಳಿಂದ ತಿರುಗಾಟವು ಎರಡು ಹಂತಗಳಲ್ಲಿ ನಡೆಯುತ್ತಿದೆ. ಈ ವರ್ಷದ ಮೊದಲನೆಯ ಹಂತವು ಜುಲೈ 2010 ಮತ್ತು ಮಾರ್ಚ್ 2011ರ ನಡುವೆ ನಡೆದಿದ್ದು ಅದು ಸ್ಥೂಲವಾಗಿ ಹಿಂದಿನ ತಿರುಗಾಟಗಳ ಮಾದರಿಯಲ್ಲೆೀ ಇತ್ತು. ಈಗ ಆರಂಭವಾಗುತ್ತಿರುವ ಎರಡನೆಯ ಹಂತವೇ ‘ಮರು ತಿರುಗಾಟ 2011’. ಇದು ಮರುತಿರುಗಾಟದ 7ನೇ ವರ್ಷದ ಪ್ರಯೋಗ.

ಮರುತಿರುಗಾಟ: ಇದರಲ್ಲಿ ತಿರುಗಾಟವು ಇನ್ನೊಂದು ಪ್ರಾಯೋಗಿಕ ನಾಟಕವನ್ನು ಹೊಸತಾಗಿ ಸಿದ್ಧಪಡಿಸಿ 2011ರ ಏಪ್ರಿಲ್-ಮೇ ನಲ್ಲಿ ಅದರ 10-15 ಪ್ರದರ್ಶನಗಳನ್ನು ಹಲವು ಕಡೆ ನೀಡುತ್ತದೆ. ಈ ಪ್ರದರ್ಶನ ಆಪ್ತ ರಂಗಸಜ್ಜಿಕೆಯಲ್ಲಿ ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ (150-200 ಜನರಿಗೆ) ಲಭ್ಯ.

ಈ ಪ್ರಯೋಗದ ಪರಿಕಲ್ಪನೆಯಲ್ಲಿಯೇ ತಿರುಗಾಟದ ಮೊದಲ ಸುತ್ತಿನ ಪ್ರಯೋಗಗಳಿಗಿಂತ ಭಿನ್ನವಾದ ರಂಗವಿನ್ಯಾಸ, ಅಭಿನಯ ವಿನ್ಯಾಸಗಳು ರೂಪುಗೊಳ್ಳಬೇಕೆಂಬ ಪ್ರಯತ್ನವೂ ಇದೆ.

ನೀರಿನ ನಿಲುತಾಣ: ಜಪಾನಿನ ಓಟೋ ಶೋಗೋ ಅವರ ‘ಮಿಜು ನೋ ಏಕಿ’ ಅಥವಾ ‘ವಾಟರ್ ಸ್ಟೇಶನ್’ (ನೀರಿನ ನಿಲುತಾಣ) ನಾಟಕವು 1981ರಲ್ಲಿ ಮೊದಲು ಪ್ರದರ್ಶಿತವಾಯಿತು. ಮೌನ ಮತ್ತು ನಿಧಾನ ಚಲನೆ ಆಧರಿಸಿದ ಅವರ ನಾಟಕಗಳ ಸಾಲಿನಲ್ಲಿ ಇದು ಮೊದಲನೆಯದು. ಯಾಂತ್ರಿಕವಾಗುತ್ತ ಸಾಗಿದ ನಾಗರಿಕ ಬದುಕಿನ ಹಕ್ಕುಬಾಧ್ಯತೆ ಹಾಗೂ ಯಜಮಾನಿಕೆಗಳ ಹೊರೆ ಕಿತ್ತೆಸೆಯುವ ಚಿಂತನೆಗೆ ಈ ನಾಟಕವು ಸಮರ್ಥ ಪ್ರತಿಮೆ ಕಲ್ಪಿಸುತ್ತದೆ.

ಹುಟ್ಟಿ ಬೆಳೆದ ತವರು ನಾಡಿನಿಂದ ಹೊರದೂಡಿಸಿಕೊಂಡ ಹಾಗೂ ನೆಲೆಸಲು ತಂಗಿದ ಬಂಜರು ನಾಡಿನಿಂದ ಗುಳೇ ಹೊರಟ ಪ್ರಯಾಣಿಕರು ಈ ನಾಟಕದ ಪಾತ್ರಗಳು. ಇವರೆಲ್ಲ, ತುಸುವೇ ತೊಟ್ಟಿಕ್ಕುವ ನಲ್ಲಿಯ ಕಿರು ನೀರ ತಾಣದಲ್ಲಿ ಕೆಲ ಹೊತ್ತು ತಂಗಿ, ಬದುಕಿನ ಆಸೆ ಆಸರೆ ಚಿಗುರಿಸಿಕೊಂಡು ಮುಂದೆ ಸಾಗುತ್ತಾರೆ.

ಕೆಲ ಸಮಯ ಒಟ್ಟಾದವರು ಮತ್ತೆ ಬೇರ್ಪಟ್ಟು ದೂರಾಗುತ್ತಾರೆ. ಕಳೆದ ಬದುಕಿನ ಕಸದ ರಾಶಿಯನ್ನು ಹಾದು, ಕೆಲವನ್ನು ಅಲ್ಲಿಯೇ ಎಸೆದು, ನಿಂತು ನೋಡಿ ತಣಿದು ದಣಿದು ಬದುಕಿನ ತುಣುಕುಗಳು ಸಾಗುತ್ತಿರುತ್ತವೆ. ಹೀಗೆ ಮೌನ ಮೆರವಣಿಗೆಯ ಈ ನಾಟಕ - ಪ್ರತಿಮೆಯು ಮನುಷ್ಯ ನಾಗರಿಕತೆಯ ವಿಚ್ಛಿದ್ರತೆಯ ಮತ್ತು ಅವನತಿಯ ದಾರುಣ ಬಿಂಬಗಳನ್ನು ತೀರಾ ವಿಳಂಬ ಲಯದಲ್ಲಿ ನಮ್ಮ ಮುಂದಿಡುತ್ತದೆ.

ನಾಟಕಕಾರ ಒಟಾ ಶೋಗೊ (1939-2007) ಚೀನಾದ ಜಿನನ್ನಲ್ಲಿ ಜನಿಸಿ ಟೋಕಿಯೋದಲ್ಲಿ ರಾಜ್ಯಶಾಸ್ತ್ರದ ಅಧ್ಯಯನ ಮಾಡಿದರು. 1968-88ರ ನಡುವೆ ಇವರು ಟಮೆತಿ ಥಿಯೇಟರ್ ಕಂಪೆನಿ ಮತ್ತು ಕೌಂಟರ್ ಕಲ್ಚರ್ ಮೂಲಕ ಖ್ಯಾತರಾದರು. 1970ರಲ್ಲಿ ಟಮೆತಿಯ ಮುಖ್ಯಸ್ಥ- ನಾಟಕಕಾರ- ನಿರ್ದೇಶಕರಾಗಿ 21 ನಾಟಕಗಳನ್ನು ನಿರ್ಮಾಣ ಮಾಡಿದರು.

1981ರಲ್ಲಿ ಇವರು ರಚಿಸಿ ರೂಪಿಸಿದ ‘ವಾಟರ್ ಸ್ಟೇಷನ್’ (ನೀರಿನ ನಿಲುತಾಣ) ನಾಟಕಕ್ಕೆ ಇವರ ಕಿನೋ ಕೊನಿಯಾ ರಂಗ ಪ್ರಶಸ್ತಿ ಬಂತು.

ನಿರ್ದೇಶಕ ಶಂಕರ್ ವೆಂಕಟೇಶ್ವರನ್ ಹುಟ್ಟಿದ್ದು ಕೇರಳದಲ್ಲಿ (1979). ಕಲ್ಲಿಕೋಟೆ ವಿವಿಯ ಸ್ಕೂಲ್ ಆಫ್ ಡ್ರಾಮಾ ಆಂಡ್ ಫೈನ್ ಆರ್ಟ್ನ ಪದವೀಧರ. ನಂತರ ಸಿಂಗಪುರದ ರಂಗಶಾಲೆಯೊಂದರಲ್ಲಿ ರಂಗ ತರಬೇತಿ ಮತ್ತು ಸಂಶೋಧನೆ ಕೈಗೊಂಡರು.

ಪ್ರಸ್ತುತ ಅವರು, ಭಾರತ ಮತ್ತು ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಕೆಲಸ ಮಾಡುತ್ತ, ನಿರ್ದೇಶನ, ಅಭಿನಯ ಮತ್ತು ಸಂಗೀತ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಂಗದ ಮೇಲೆ: ಚಂದ್ರಶೇಖರ್, ಯಶವಂತ್ ಕೊಚಬಾಳ್, ಸ್ಮಿತಾ ಪಿ, ವಿದ್ಯಾ ಕೆ. ಶೆಟ್ಟಿ, ಮಂಜುನಾಥ್ ಸಿ.ಜೆ, ಗಣೇಶ ಎಂ, ಸೂರ್ಯಕಲಾ ಎಸ್, ಪ್ರಭುರಾಜ್, ಚಂದ್ರಮ್ಮ ಆರ್, ಜಯರಾಮು ಕೆ. ಎನ್, ಲಕ್ಷ್ಮಣ್ ಪಿರಗಾರ್, ಕಲ್ಲಪ್ಪ ಹೆಚ್. ಪೂಜೇರ್, ಅರುಣ್ ಕುಮಾರ್ ಬಿ. ಮಾನ್ವಿ, ಸುನೀಲ್ ಶೆಟ್ಟಿ, ಶಿಲ್ಪ ಕುರವಂತೆ, ಜ್ಯೋತಿ ಹೆಚ್. ಪಿ, ಗೌತಮ್ ಪಿ. ಹೆಗಡೆ.

ರಂಗಶಂಕರದಲ್ಲಿ...
ರಂಗಶಂಕರ: ನಿನಾಸಂ ತಿರುಗಾಟದಲ್ಲಿ ಮಂಗಳವಾರ ಮತ್ತು ಬುಧವಾರ ‘ನೀರಿನ ನಿಲುತಾಣ’ ನಾಟಕ. ಸ್ಥಳ: ರಂಗಶಂಕರ, ಜೆ.ಪಿ ನಗರ 2ನೇ ಹಂತ. ಸಂಜೆ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.